ನವದೆಹಲಿ(ಡಿ.11): ಕೊರೋನಾ ಸೋಂಕಿನ ಬಗ್ಗೆ ತಿಳಿದುಕೊಳ್ಳಲು ಜನ ಆನ್‌ಲೈನ್‌ನಲ್ಲಿ ಸಾಕಷ್ಟು ಹುಡುಕಾಟ ನಡೆಸುತ್ತಿದ್ದರೂ, ಭಾರತದಲ್ಲಿ ಈ ವರ್ಷ ಗೂಗಲ್‌ನಲ್ಲಿ ಅತಿಹೆಚ್ಚು ಬಾರಿ ಹುಡುಕಾಟಕ್ಕೆ ಒಳಪಟ್ಟ ವಿಷಯ ಎಂದರೆ ಅದು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಟೂರ್ನಿ.

ಹೌದು, ಈ ವಿಷಯ ಗೂಗಲ್‌ ಟ್ರೆಂಡ್ಸ್‌ ವರದಿ ಮೂಲಕ ತಿಳಿದಿದ್ದು, ಬಿಸಿಸಿಐ ಟ್ವೀಟರ್‌ನಲ್ಲಿ ಖುಷಿ ಹಂಚಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ನಡೆದ ಹುಡುಕಾಟದಲ್ಲಿ ಐಪಿಎಲ್‌ ಟೂರ್ನಿಗೆ 5ನೇ ಸ್ಥಾನ ದೊರೆತಿದೆ. ಆದರೆ ಭಾರತದಲ್ಲಿ ಅತಿಹೆಚ್ಚು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ ಪದವೆಂದರೆ ಅದು ಐಪಿಎಲ್. ಆ ಬಳಿಕ ಕೊರೋನಾ ವೈರಸ್ ಹಾಗು ಯುಎಸ್ ಎಲೆಕ್ಷನ್‌ ಬಗ್ಗೆ ಜನ ಹುಡುಕಾಟ ನಡೆಸಿದ್ದಾರೆ.

ಸರಣಿ ಶ್ರೇಷ್ಠ ಟ್ರೋಫಿಯನ್ನು ನಟರಾಜನ್‌ಗೆ ಕೊಟ್ಟ ಹಾರ್ದಿಕ್ ಪಾಂಡ್ಯ..!

ಭಾರತದಲ್ಲಿ ನಡೆಯಬೇಕಿದ್ದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಕೊರೋನಾ ವೈರಸ್ ಭೀತಿಯಿಂದಾಗಿ ಯುಎಇಗೆ ಸ್ಥಳಾಂತರವಾಗಿತ್ತು. ಖಾಲಿ ಮೈದಾನದಲ್ಲಿ, ಬಯೋ-ಬಬಲ್ ಸೆಕ್ಯೂರ್ ವ್ಯವಸ್ಥೆಯಲ್ಲಿ ಮಿಲಿಯನ್ ಡಾಲರ್ ಟೂರ್ನಿಯನ್ನು ಆಯೋಜಿಸಲಾಗಿತ್ತು. ಮೊದಲ ಪಂದ್ಯದಿಂದ ಕೊನೆಯ ಪಂದ್ಯದವರೆಗೂ ಸಾಕಷ್ಟು ರೋಚಕತೆಯನ್ನು ಕಾಯ್ದುಕೊಂಡ 2020ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿ ಮುಂಬೈ ಇಂಡಿಯನ್ಸ್‌ 5ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.