ಬೆಂಗಳೂರು(ಫೆ.19): ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಸಾಕಷ್ಟು ಅಳೆದು ತೂಗಿ 8 ಆಟಗಾರರನ್ನು ಖರೀದಿಸಿದೆ. ಅದರಲ್ಲಿ ನ್ಯೂಜಿಲೆಂಡ್ ಮಾರಕ ವೇಗಿ ಕೈಲ್ ಜಾಮಿಸನ್‌ಗೆ ಬರೋಬ್ಬರಿ 15 ಕೋಟಿ ರುಪಾಯಿ ನೀಡಿ ಖರೀದಿಸುವ ಮೂಲಕ ಎಲ್ಲರು ಹುಬ್ಬೇರುವಂತೆ ಮಾಡಿದ್ದಾರೆ.

ಕೈಲ್ ಜಾಮಿಸನ್‌ ಮಾತ್ರವಲ್ಲದೇ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್‌ ಮ್ಯಾಕ್ಸ್‌ವೆಲ್‌ರನ್ನು 14.25 ಕೋಟಿ ರುಪಾಯಿ ಹಾಗೂ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್‌ ಡೇನಿಯಲ್ ಕ್ರಿಸ್ಟಿಯನ್‌ರನ್ನು 4.8 ಕೋಟಿ ರುಪಾಯಿ ನೀಡಿ ಖರೀದಿಸುವ ಮೂಲಕ ತನ್ನ ಮಧ್ಯಮ ಕ್ರಮಾಂಕವನ್ನು ಮತ್ತಷ್ಟು ಬಲಿಷ್ಠವನ್ನಾಗಿಸಿದೆ. ಇನ್ನುಳಿದಂತೆ ಭಾರತದ ದೇಸಿ ಪ್ರತಿಭೆಗಳಾದ ಸಚಿನ್‌ ಬೇಬಿ, ರಜತ್ ಪಾಟಿದಾರ್‌, ಮೊಹಮ್ಮದ್ ಅಜರುದ್ದೀನ್‌, ಸುಯಾಶ್‌ ಪ್ರಭುದೇಸಾಯಿ ಹಾಗೂ ಕೆ.ಎಸ್‌. ಭರತ್‌ರನ್ನು ಆರ್‌ಸಿಬಿ ಚೆನ್ನೈನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಖರೀದಿಸಿದೆ. 

IPL ಹರಾಜಿನಲ್ಲಿ ಖರೀದಿಸಿದ RCB ಪ್ಲೇಯರ್ಸ್; ಇಲ್ಲಿದೆ ಫುಲ್ ಲಿಸ್ಟ್!
 
2021ರ ಆಟಗಾರರ ಹರಾಜಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀಗಿದೆ ನೋಡಿ:
ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಯುಜುವೇಂದ್ರ ಚಹಲ್‌, ದೇವದತ್ ಪಡಿಕ್ಕಲ್‌, ನವದೀಪ್‌ ಸೈನಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್‌, ಕೇನ್‌ ರಿಚರ್ಡ್‌ಸನ್, ಆಡಂ ಜಂಪಾ, ಜೋಸ್‌ ಫಿಲಿಫ್‌, ಶಹಬಾಜ್‌ ಅಹಮ್ಮದ್, ಪವನ್ ದೇಶಪಾಂಡೆ, ಕೈಲ್‌ ಜಾಮಿಸನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಡೇನಿಯಲ್ ಕ್ರಿಸ್ಟಿಯನ್‌, ಸಚಿನ್ ಬೇಬಿ, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್‌, ಸುಯಾಶ್‌ ಪ್ರಭುದೇಸಾಯಿ, ಕೆ.ಎಸ್. ಭರತ್‌