ಬೆಂಗಳೂರು(ಫೆ.19): 5 ಬಾರಿಯ ಐಪಿಎಲ್‌ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಯು 14 ಆವೃತ್ತಿಯ ಐಪಿಎಲ್‌ ಆಟಗಾರರ ಹರಾಜಿನಲ್ಲಿ 4 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 7 ಆಟಗಾರರನ್ನು ಖರೀದಿಸಿದೆ. 

ರೋಹಿತ್ ಶರ್ಮಾ ನೇತೃತ್ವದ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮೇಲ್ನೋಟಕ್ಕೆ ಈಗಾಗಲೇ ಬಲಿಷ್ಠವಾಗಿದ್ದು, ಬೆಂಚ್ ಸ್ಟ್ರೆಂಥ್ ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ ಆಲ್ರೌಂಡರ್ ಜೇಮ್ಸ್‌ ನೀಶಮ್‌, ವೇಗಿಗಳಾದ ನೇಥನ್ ಕೌಲ್ಟರ್-ನೈಲ್‌, ಆಡಂ ಮಿಲ್ನೆ ಹಾಗೂ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್‌ರನ್ನು ಮುಂಬೈ ಫ್ರಾಂಚೈಸಿ ಖರೀದಿಸಿದೆ.

IPL 2021: ಹರಾಜಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಹೀಗಿದೆ ನೋಡಿ

ಹರಾಜಿನ ಬಳಿಕ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ ಹೀಗಿದೆ ನೋಡಿ.

ರೋಹಿತ್ ಶರ್ಮಾ(ನಾಯಕ). ಕ್ವಿಂಟನ್ ಡಿ ಕಾಕ್‌, ಆದಿತ್ಯ ತಾರೆ, ಅಂಕುಲ್ ರಾಯ್‌, ಅನ್ಮೋಲ್‌ ಪ್ರೀತ್ ಸಿಂಗ್‌, ಕ್ರಿಸ್ ಲಿನ್‌, ಧವಳ್‌ ಕುಲಕರ್ಣಿ, ಹಾರ್ದಿಕ್‌ ಪಾಂಡ್ಯ, ಇಶನ್‌ ಕಿಶನ್, ಜಸ್ಪ್ರೀತ್ ಬುಮ್ರಾ, ಜಯಂತ್ ಯಾದವ್‌, ಕೀರನ್‌ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಮೊಯಿಸಿನ್‌ ಖಾನ್‌, ರಾಹುಲ್ ಚಹರ್, ಸೌರಭ್ ತಿವಾರಿ, ಸೂರ್ಯಕುಮಾರ್ ಯಾದವ್‌, ಟ್ರೆಂಟ್‌ ಬೌಲ್ಟ್‌, ಆಡಂ ಮಿಲ್ನೆ, ನೇಥನ್ ಕೌಲ್ಟರ್‌-ನೈಲ್‌, ಪೀಯೂಶ್ ಚಾವ್ಲಾ, ಜೇಮ್ಸ್ ನೀಶಮ್‌, ಯದುವೀರ್ ಚರಕ್‌, ಮಾರ್ಕೊ ಜಾನ್ಸನ್‌, ಅರ್ಜುನ್ ತೆಂಡುಲ್ಕರ್.