ಕೋಲ್ಕತಾ(ಡಿ.12): ಐಪಿಎಲ್ 2020ರ ಆಟಗಾರರ ಹರಾಜಿಗೆ ಕೋಲ್ಕತಾ ನಗರಿ ಸಜ್ಜಾಗಿದೆ. ಇತ್ತ ಬಿಸಿಸಿಐ ಸಕಲ ತಯಾರಿ ನಡೆಸಿದೆ. ಇದೇ ಡಿಸೆಂಬರ್ 19 ರಂದು ಐಪಿಎಲ್ ಆಟಗಾರರ ಹರಾಜು ನಡೆಯಲಿದೆ. ಈಗಾಗಲೇ 971 ಕ್ರಿಕೆಟಿಗರು ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದರು. ಇದೀಗ ಈ ಆಟಗಾರರ ಪೈಕಿ 332 ಕ್ರಿಕೆಟಿಗರ ಶಾರ್ಟ್ ಲಿಸ್ಟ್ ಮಾಡಲಾಗಿದೆ.

ಇದನ್ನೂ ಓದಿ: IPL 2020: ಈ 5 ಆಲ್ರೌಂಡರ್ಸ್ ಖರೀದಿಸಲು RCB ಸೇರಿ 8 ತಂಡಗಳಿಂದ ಪೈಪೋಟಿ..!

ಡಿ.19ರ ಐಪಿಎಲ್ ಹರಾಜಿನಲ್ಲಿ 332 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಹರಾಜು ಕಣದಲ್ಲಿರುವ ಅಂತಿಮ ಆಟಗಾರರ ಪಟ್ಟಿಯನ್ನು ಬಿಸಿಸಿಐ, ಫ್ರಾಂಚೈಸಿಗಳಿಗೆ ನೀಡಿದೆ. ಈ ಬಾರಿಯ ಹರಾಜಿನಿಂದ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಹಾಗೂ ಇಂಗ್ಲೆಂಡ್ ನಾಯಕ ಜೋ ರೂಟ್ ಹಿಂದೆ ಸರಿದಿದ್ದಾರೆ.

ಇದನ್ನೂ ಓದಿ: IPL 2020: ಹರಾಜಿಗೆ ಸಜ್ಜಾಗಿರುವ 8 ತಂಡದಲ್ಲಿರುವ ಬಾಕಿ ಹಣ; ಪಂಜಾಬ್‌ಗೆ ಮೊದಲ ಸ್ಥಾನ!

ಡಿ.19 ರ ಬೆಳಗ್ಗೆ 10 ಗಂಟೆಗೆ ಹರಾಜು ಆರಂಭಗೊಳ್ಳಲಿದೆ. 8 ಫ್ರಾಂಚೈಸಿಗಳಿಂದ ಒಟ್ಟು 73 ಸ್ಥಾನಕ್ಕೆ ಖರೀದಿ ನಡೆಯಲಿದೆ.  332 ಆಟಗಾರರು 73 ಸ್ಥಾನಗಳಿಗೆ ಪೈಪೋಟಿ ನಡೆಸಲಿದ್ದಾರೆ. 

2020ರ ಐಪಿಎಲ್ ಟೂರ್ನಿಯಲ್ಲಿ ಹಲವು ಬದಲಾವಣೆ ತರಲಾಗಿದೆ. ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಐಪಿಎಲ್ ಟೂರ್ನಿಯನ್ನು ಮನರಂಜನಾ ಆಟಕ್ಕಿಂತ ವೃತ್ತಿಪರ ಕ್ರಿಕೆಟ್ ಆಗಿ ಪರಿವರ್ತಿಸಲು ಮುಂದಾಗಿದ್ದಾರೆ.  ಟೂರ್ನಿಯ ಆರಂಭದಲ್ಲಿದ್ದ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಲಾಗಿದೆ.