Asianet Suvarna News Asianet Suvarna News

ಹೇಜಲ್‌ವುಡ್ ಸೇರಿ ಘಟಾನುಘಟಿ ಕ್ರಿಕೆಟಿಗರು ಅನ್‌ಸೋಲ್ಡ್, ಕೆಲ ಕನ್ನಡಿಗರಿಗೂ ನಿರಾಸೆ!

ಐಪಿಎಲ್ 2024ರ ಹರಾಜಿನಲ್ಲಿ  ದಾಖಲೆ ಮೊತ್ತಕ್ಕೆ ಮಾರಾಟ ಒಂದೆಡೆಯಾದರೆ ಭಾರಿ ನಿರೀಕ್ಷೆ ಮೂಡಿಸಿದ್ದ ಕೆಲ ಕ್ರಿಕೆಟಿಗರು ಮಾರಾಟವಾಗದೇ ಉಳಿದಿದ್ದಾರೆ. ಜೋಶ್ ಹೇಜಲ್‌ವುಡ್, ಸ್ಟೀವ್ ಸ್ಮಿತ್ ಸೇರಿದಂತೆ ಹಲವು ಪ್ರಮುಖರು ಅನ್‌ಸೋಲ್ಡ್ ಆಗಿದ್ದಾರೆ. ಈ ಪೈಕಿ ಕೆಲ ಕನ್ನಡಿಗರಿಗೆ ನಿರಾಸೆಯಾಗಿದೆ.

IPL Auction 2024 Josh Hazlewood to Karun Nair unsold players list ckm
Author
First Published Dec 19, 2023, 9:58 PM IST

ದುಬೈ(ಡಿ.19) ಐಪಿಎಲ್ 2024ರ ಹರಾಜು ಕೆಲ ಅಚ್ಚರಿ ಖರೀದಿಯಾದರೆ, ಮತ್ತೆ ಕೆಲ ಖರೀದಿ ದುಬಾರಿಯಾಗಿತ್ತು. ಆದರೆ ನಿರೀಕ್ಷೆ ಮೂಡಿಸಿದ್ದ ಕೆಲ ಆಟಗಾರರು ಅನ್‌ಸೋಲ್ಡ್ ಆಗಿದ್ದಾರೆ. ಜೋಶ್ ಹೇಜಲ್‌ವುಡ್, ಸ್ಟೀವ್ ಸ್ಮಿತ್, ರಿಲೆ ರೋಸೋ, ಲ್ಯೂಕಿ ಫರ್ಗ್ಯೂಸನ್, ಕಾಲಿನ್ ಮುನ್ರೋ ಸೇರಿದಂತೆ ಘಟಾನುಘಟಿ ಆಟಗಾರರು ಮಾರಾಟವಾಗದೇ ಉಳಿದಿದ್ದಾರೆ. ಈ ಪೈಕಿ ಕೆಲ ಕನ್ನಡಿಗರಿಗೂ ನಿರಾಸೆಯಾಗಿದೆ. 

ಕರ್ನಾಟಕದ 11 ಕ್ರಿಕೆಟಿಗರು ಈ ಬಾರಿಯ ಹರಾಜಿನಲ್ಲಿ ಸ್ಥಾನ ಪಡೆದಿದ್ದರು. ಪ್ರಮುಖ ಹೆಸರು ಹರಾಜಿನ ಆಯ್ಕೆಯಲ್ಲಿ ಬರಲೇ ಇಲ್ಲ. ಈ ಪೈಕಿ ಮನೀಶ್ ಪಾಂಡೆ ಆರಂಭದಲ್ಲಿ ಅನ್‌ಸೋಲ್ಡ್ ಆದರೂ ಬಳಿಕ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 50 ಲಕ್ಷ ರೂಪಾಯಿಗೆ ಮಾರಾಟವಾದರು. ಇನ್ನು ಕರುಣ್ ನಾಯರ್ ಖರೀದಿಗೆ ಯಾರೂ ಮುಂದೆ ಬರಲಿಲ್ಲ. ಇತ್ತ ಅಭಿಲಾಶ್ ಶೆಟ್ಟಿ ಕೂಡ ನಿರಾಸೆ ಅನುಭವಿಸಿದರು.

ಈ ಬಾರಿ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾದ ಭಾರತೀಯ ಕ್ರಿಕೆಟಿಗ ಹರ್ಷಲ್ ಪಟೇಲ್, ಇಲ್ಲಿದೆ ಫುಲ್ ಲಿಸ್ಟ್!

ಐಪಿಎಲ್ 2024 ಹರಾಜಿನಲ್ಲಿ ಅನ್‌ಸೋಲ್ಡ್ ಕ್ರಿಕೆಟಿಗರು:
ರಿಲೋ ರೂಸೋ : ವಿದೇಶಿ ಕ್ರಿಕೆಟಿಗ
ಸ್ಟೀವ್ ಸ್ಮಿತ್ : ವಿದೇಶಿ ಕ್ರಿಕೆಟಿಗ
ಜೋಶ್ ಇಂಗ್ಲಿಸ್ : ವಿದೇಶಿ ಕ್ರಿಕೆಟಿಗ
ಜೋಶ್ ಹೇಜಲ್‌ವುಡ್ : ವಿದೇಶಿ ಕ್ರಿಕೆಟಿಗ
ಆದಿಲ್ ರಶೀದ್ : ವಿದೇಶಿ ಕ್ರಿಕೆಟಿಗ
ಟೈಮಲ್ ಮಿಲ್ಸ್ : ವಿದೇಶಿ ಕ್ರಿಕೆಟಿಗ
ಕಾಲಿನ್ ಮುನ್ರೋ : ವಿದೇಶಿ ಕ್ರಿಕೆಟಿಗ
ಜೇಮ್ಸ್ ನೀಶಮ್ : ವಿದೇಶಿ ಕ್ರಿಕೆಟಿಗ
ಆ್ಯಡಮ್ ಮಿಲ್ನೆ : ವಿದೇಶಿ ಕ್ರಿಕೆಟಿಗ
ಮಿಚೆಲ್ ಬ್ರೇಸ್‌ವೆಲ್ : ವಿದೇಶಿ ಕ್ರಿಕೆಟಿಗ
ಫಿನ್ ಅಲೆನ್ : ವಿದೇಶಿ ಕ್ರಿಕೆಟಿಗ
ಶೈ ಹೋಪ್ : ವಿದೇಶಿ ಕ್ರಿಕೆಟಿಗ
ಮ್ಯಾಟ್ ಹೆನ್ರಿ : ವಿದೇಶಿ ಕ್ರಿಕೆಟಿಗ
ಐಶ್ ಸೋಧಿ : ವಿದೇಶಿ ಕ್ರಿಕೆಟಿಗ
ಕುಸಾಲ್ ಮೆಂಡೀಸ್ : ವಿದೇಶಿ ಕ್ರಿಕೆಟಿಗ
ದಶ್ಯಂತ ಚಮೀರಾ : ವಿದೇಶಿ ಕ್ರಿಕೆಟಿಗ

IPL ಇತಿಹಾಸದಲ್ಲಿ ಕಂಡು ಕೇಳರಿಯದ ದಾಖಲೆ, ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂಗೆ ಸೇಲ್!

ಕರುಣ್ ನಾಯರ್ : ಭಾರತೀಯ ಕ್ರಿಕೆಟಿಗ
ಸಂದೀಪ್ ವಾರಿಯರ್: ಭಾರತೀಯ ಕ್ರಿಕೆಟಿಗ
ಕಮಲೇಶ್ ನಾಗರಕೋಟಿ: ಭಾರತೀಯ ಕ್ರಿಕೆಟಿಗ
ಅಭಿಲಾಶ್ ಶೆಟ್ಟಿ: ಭಾರತೀಯ ಕ್ರಿಕೆಟಿಗ
ಕುಲ್ದೀಪ್ ಯಾದವ್: ಭಾರತೀಯ ಕ್ರಿಕೆಟಿಗ
ಸರ್ಫರಾಜ್ ಖಾನ್: ಭಾರತೀಯ ಕ್ರಿಕೆಟಿಗ
ಮನನ್ ವೋಹ್ರಾ: ಭಾರತೀಯ ಕ್ರಿಕೆಟಿಗ
ಪ್ರಿಯಾಂಶ್ ಆರ್ಯ: ಭಾರತೀಯ ಕ್ರಿಕೆಟಿಗ
ಹೃತಿಕ್ ಶೋಕಿನ್: ಭಾರತೀಯ ಕ್ರಿಕೆಟಿಗ
ವಿಷ್ಠು ಸೋಲಂಕಿ: ಭಾರತೀಯ ಕ್ರಿಕೆಟಿಗ
ಇಶಾನ್ ಪೊರೆಲ್: ಭಾರತೀಯ ಕ್ರಿಕೆಟಿಗ
ಮರುಘನ್ ಅಶ್ವಿನ್: ಭಾರತೀಯ ಕ್ರಿಕೆಟಿಗ
ಶಿವ ಸಿಂಗ್ : ಭಾರತೀಯ ಕ್ರಿಕೆಟಿಗ
 

Follow Us:
Download App:
  • android
  • ios