Asianet Suvarna News Asianet Suvarna News

IPL Auction 2023 ಕನ್ನಡಿಗ ಮಯಾಂಕ್‌ಗೆ ಢಬಲ್ ಧಮಾಕ, 8.25 ಕೋಟಿ ಮೊತ್ತಕ್ಕೆ ಸನ್‌ರೈಸರ್ಸ್ ಪಾಲು!

ಕನ್ನಡಿಗ ಮಯಾಂಕ್ ಅಗರ್ವಾಲ್ ಈ ಬಾರಿ ಮೊತ್ತಕ್ಕೆ ಹರಾಜಾಗುವ ಮೂಲಕ ದಾಖಲೆ ಬರೆದಿದ್ದಾರೆ. ಹರಾಜು ಆರಂಭಗೊಂಡ ಕಲವೇ ಕ್ಷಣಗಳಲ್ಲಿ ಮಯಾಂಕ್ ಬಿಡ್ಡಿಂಗ್ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.
 

IPL Auction 2023 mayank agarwal sold for Sunrisers Hyderabad with price RS 8 25 crore ckm
Author
First Published Dec 23, 2022, 3:12 PM IST

ಕೊಚ್ಚಿ(ಡಿ.23): ಐಪಿಎಲ್ ಮಿನಿ ಹರಾಜಿನಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಖರೀದಿಗೆ ಬಾರಿ ಪೈಪೋಟಿ ಎರ್ಪಟ್ಟಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಮಯಾಂಕ್ ಖರೀದಿಗೆ ಮನಸ್ಸು ಮಾಡಿತ್ತು. ಆದರೆ ಮಯಾಂಕ್ ಬೆಲೆ ಏರಿಕೆಯಾಗುತ್ತಲೇ ಹೋದಾಗ ಆರ್‌ಸಿಬಿ ಬಿಡ್ಡಿಂಗ್‌ನಿಂದ ಹಿಂದೆ ಸರಿಯಿತು. ಚೆನ್ನೈ ಸೂಪರ್ ಕಿಂಗ್ಸ್ ಪ್ರಬಲ ಪೈಪೋಟಿ ನಡುವೆ ಸನ್‌ರೈಸರ್ಸ್ ಹೈದರಾಬಾದ್ ತಂಡ 8.25 ಕೋಟಿ ರೂಪಾಯಿ ನೀಡಿ ಮಯಾಂಕ್ ಅಗರ್ವಾಲ್ ಖರೀದಿ ಮಾಡಿತು. ಈ ಮೂಲಕ ಬಿಡ್ಡಿಂಗ್ ಆರಂಭಗೊಂಡ ಕಲವೇ ಕ್ಷಣಗಲ್ಲಿ ಗರಿಷ್ಠ ಮೊತ್ತಕ್ಕೆ ಹರಾಜಾದ ಆಟಗಾರ ಅನ್ನೋ ಹೆಗ್ಗಳಿಕೆಗೆ ಮಯಾಂಕ್ ಅಗರ್ವಾಲ್ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ ಕರ್ನಾಟಕ ಆಟಗಾರರಿಗೆ ಆರಂಭದಲ್ಲೇ ಭಾರಿ ಬೇಡಿಕೆ ವ್ಯಕ್ತವಾಗಿರುವುದು ಇತರರ ಆಟಗಾರರಿಗೂ ನೆರವಾಗಲಿದೆ.

1 ಕೋಟಿ ರುಪಾಯಿ ಮೂಲ ಬೆಲೆ ಹೊಂದಿರುವ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್‌ವಾಲ್‌ ಅವರನ್ನು ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳ ನಡುವೆ ಪೈಪೋಟಿ ನಡೆಸಿತು.  ಅಂತಿಮ ಹಂತದಲ್ಲಿ ಸನ್‌ರರೈಸರ್ಸ್ ಹೈದರಾಬಾದ್ 8.25 ಕೋಟಿ ರೂಪಾಯಿ ನೀಡಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. 

IPL Auction 2023 ಮಿನಿ ಹರಾಜಿನಲ್ಲಿ ಕೇನ್ ವಿಲಿಯಮ್ಸ್ ಮೊದಲ ಬಿಕರಿ, ಗುಜರಾತ್ ಪಾಲು!

ಕಳೆದ ಆವೃತ್ತಿಯಲ್ಲಿ ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ದಿಟ್ಟ ಹೋರಾಟ ನೀಡಿದರೂ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ಪ್ರಮುಖ ಆಟಾಗರರನ್ನು ಪಂಜಾಬ್ ಕಿಂಗ್ಸ್ ರಿಲೀಸ್ ಮಾಡಿತ್ತು. ನಾಯಕನಾಗಿದ್ದ ಮಯಾಂಕ್ ಅಗರ್ವಾಲ್ ಕೂಡ ತಂಡದಿಂದ ಹೊರಬಿದ್ದಿದರು. 

ಬಿಡ್ಡಿಂಗ್ ವೇಳೆ ಪಂಜಾಬ್ ಕಿಂಗ್ಸ್ ಮತ್ತೆ ಮಯಾಂಕ್ ಅಗರ್ವಾಲ್ ಖರೀದಿಗೆ ಮುಂದಾಗಿತ್ತು. ಆದರೆ 5 ಕೋಟಿ ರೂಪಾಯಿಗೆ ಮಯಾಂಕ್ ಬೆಲೆ ಏರಿಕೆಯಾಗುತ್ತಿದ್ದಂತೆ ಮೆಲ್ಲನೆ ಬಿಡ್ಡಿಂಗ್‌ನಿಂದ ಜಾರಿಕೊಂಡಿತ್ತು. 

ಇತ್ತೀಚೆಗಷ್ಟೇ ತಂದೆಯಾಗಿರುವ ಮಯಾಂಕ್ ಅಗರ್ವಾಲ್‌ಗೆ ಡಬಲ್ ಖುಷಿ. ಮಗುವಿನ ಆಗಮನದ ಬೆನ್ನಲ್ಲೇ ಅತ್ಯುತ್ತಮ ಮೊತ್ತಕ್ಕೆ ಮಯಾಂಕ್ ಅಗರ್ವಾಲ್ ಬಿಕರಿಯಾಗಿದ್ದಾರೆ. ಕರ್ನಾಟಕದ ಪ್ರಮುಖ ಆಟಗಾರ ಮಯಾಂಗ್ ಅಗರ್ವಾಲ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡಲಿದ್ದಾರೆ.

IPL 2023 Mini Auction Live Updates: ಹರಾಜಿಗೆ ಬಂದ ಕನ್ನಡಿಗ ಮಯಾಂಕ್‌ ಅಗರ್‌ವಾಲ್‌

ಹರಾಜು ಪ್ರಕ್ರಿಯೆಯಲ್ಲಿ 405 ಆಟಗಾರರು ಅದೃಷ್ಟಪರೀಕ್ಷೆಗೆ ಒಳಗಾಗಿದ್ದಾರೆ. ಖಾಲಿ ಇರುವ 87 ಸ್ಥಾನಗಳಿಗೆ ಹರಾಜು ನಡೆಯುತ್ತಿದೆ.  ಭಾರತ 273 ಆಟಗಾರರ ಜೊತೆ 132 ವಿದೇಶಿ ಆಟಗಾರರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.   119 ಅಂತಾರಾಷ್ಟಿ್ರಯ ಆಟಗಾರರು, 282 ಅನ್‌ಕ್ಯಾಪ್‌್ಡ ಆಟಗಾರರು ಪಟ್ಟಿಯಲ್ಲಿದ್ದಾರೆ.  ಎಲ್ಲಾ 10 ತಂಡಗಳು ಕೆಲ ಪ್ರಮುಖ ಆಟಗಾರರ ಹುಡುಕಾಟದಲ್ಲಿವೆ. ಕರ್ನಾಟಕದ 16 ಆಟಗಾರರು ಹರಾಜಿನಲ್ಲಿ ಪಾಲ್ಗೊಂಡಿದ್ದಾರೆ.ಹರಾಜಿಗೂ ಮೊದಲು 10 ತಂಡಗಳು ಒಟ್ಟು 163 ಆಟಗಾರರನ್ನು ರೀಟೈನ್‌ ಮಾಡಿಕೊಂಡಿವೆ. ಹರಾಜಿನಲ್ಲಿರುವ 87 ಖಾಲಿ ಸ್ಥಾನಗಳಲ್ಲಿ ಗರಿಷ್ಠ 30 ಸ್ಥಾನಗಳು ವಿದೇಶಿ ಆಟಗಾರರ ಪಾಲಾಗಬಹುದು. ಹರಾಜಿನಲ್ಲಿ 10 ಫ್ರಾಂಚೈಸಿಗಳು ಸೇರಿ ಒಟ್ಟು 206.5 ಕೋಟಿ ರು. ಖರ್ಚು ಮಾಡಬಹುದಾಗಿದೆ.

Follow Us:
Download App:
  • android
  • ios