Asianet Suvarna News Asianet Suvarna News

IPL Auction 2023 ಮಿನಿ ಹರಾಜಿನಲ್ಲಿ ಕೇನ್ ವಿಲಿಯಮ್ಸ್ ಮೊದಲ ಬಿಕರಿ, ಗುಜರಾತ್ ಪಾಲು!

ಐಪಿಎಲ್ ಮಿನಿ ಹರಾಜು ಕೊಚ್ಚಿಯಲ್ಲಿ ನಡೆಯುತ್ತಿದೆ. ಈ ಬಾರಿಯ ಹರಾಜಿನಲ್ಲಿ ಮೊದಲು ಮಾರಾಟವಾದ ಆಟಗಾರ ಅನ್ನೋ ಹೆಗ್ಗಳಿಕೆಗೆ ಕೇನ್ ವಿಲಿಯಮ್ಸನ್ ಪಾತ್ರರಾಗಿದ್ದಾರೆ. ಕೇನ್ ಯಾವ ತಂಡಕ್ಕೆ ಎಷ್ಟು ಮೊತ್ತಕ್ಕೆ ಹರಾಗಿದ್ದಾರೆ? ಇಲ್ಲಿದೆ ವಿವರ

IPL Auction 2023 kane williamson joins Gujarat titans  with base price rs 2 crore ckm
Author
First Published Dec 23, 2022, 2:51 PM IST

ಕೊಚ್ಚಿ(ಡಿ.23): ಐಪಿಎಲ್ ಮಿನಿ ಹರಾಜು 2023 ಪ್ರಕ್ರಿಯೆ ಆರಂಭಗೊಂಡಿದೆ. ಕೊಚ್ಚಿಯಲ್ಲಿ ನಡೆಯತ್ತಿರುವ ಹರಾಜು ಪ್ರಕ್ರಿಯೆಯಲ್ಲಿ 10 ಫ್ರಾಂಚೈಸಿಗಳು ಯುವ ಹಾಗೂ ವಿದೇಶಿ ಆಟಗಾರರ ಖರೀದಿಗೆ ಹೆಚ್ಚಿನ ಒಲವು ತೋರಿದೆ. ಬಾಕಿ ಉಳಿದಿರುವ ಹಣದಲ್ಲಿ ಅತ್ಯುತ್ತಮ ಆಟಗಾರರ ಖರೀದಿಗೆ ತಂಡಗಳು ಮುಂದಾಗಿದೆ. ಈ ಬಾರಿಯ ಮಿನಿ ಹರಾಜಿನಲ್ಲಿ ಮೊದಲು ಬಿಕರಿಯಾದ ಆಟಗಾರ ಅನ್ನೋ ಹೆಗ್ಗಳಿಕೆಗೆ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸ್ ಪಾತ್ರರಾಗಿದ್ದಾರೆ. ಗುಜರಾತ್ ಟೈಟಾನ್ಸ್ ಮೂಲ ಬೆಲೆ 2 ಕೋಟಿ ರೂಪಾಯಿಗೆ ವಿಲಿಯಮ್ಸನ್ ಖರೀದಿಸಿದೆ.

ಕಳೆದ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿದದ್ ಕೇನ್ ವಿಲಿಯಮ್ಸನ್ ಇದೀಗ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ. ಡೇವಿಡ್ ವಾರ್ನರ್ ಹೈದರಾಬಾದ್ ತಂಡದಿಂದ ಹೊರಬಿದ್ದ ಬಳಿಕ ಕೇನ್ ವಿಲಿಯಮ್ಸನ್ ಸಂಪೂರ್ಣ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಇದೀಗ ಗುಜರಾತ್ ಟೈಟಾನ್ಸ್ ತಂಡ ಸೇರಿಕೊಂಡಿದ್ದಾರೆ. ಗುಜರಾತ್ ಟೈಟಾನ್ಸ್ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಐಪಿಎಲ್ ಚಾಂಪಿಯನ್ ಪಟ್ಟ ಆಲಂಕರಿಸಿದೆ.  

IPL 2023 MINI AUCTION LIVE UPDATES: ಐಪಿಎಲ್‌ ಮಿನಿ ಹರಾಜಿಗೆ ಕ್ಷಣಗಣನೆ

ಐಪಿಎಲ್ ಟೂರ್ನಿಯಲ್ಲಿ ಒಟ್ಟು 76 ಪಂದ್ಯ ವಾಡಿರುವ ಕೇನ್ ವಿಲಿಯಮ್ಸನ್ 2,101 ರನ್ ಸಿಡಿಸಿದ್ದಾರೆ. 89 ಗರಿಷ್ಟ ಮೊತ್ತವಾಗಿದೆ. 126.03ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಕೇನ್ ವಿಲಿಯಮ್ಸನ್ 18 ಅರ್ಧಶತಕ ಸಿಡಿಸಿದ್ದಾರೆ. 

ಹರಾಜು ಪ್ರಕ್ರಿಯೆಯಲ್ಲಿ 405 ಆಟಗಾರರು ಅದೃಷ್ಟಪರೀಕ್ಷೆಗೆ ಒಳಗಾಗಿದ್ದಾರೆ. ಖಾಲಿ ಇರುವ 87 ಸ್ಥಾನಗಳಿಗೆ ಹರಾಜು ನಡೆಯುತ್ತಿದೆ.  ಭಾರತ 273 ಆಟಗಾರರ ಜೊತೆ 132 ವಿದೇಶಿ ಆಟಗಾರರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.   119 ಅಂತಾರಾಷ್ಟಿ್ರಯ ಆಟಗಾರರು, 282 ಅನ್‌ಕ್ಯಾಪ್‌್ಡ ಆಟಗಾರರು ಪಟ್ಟಿಯಲ್ಲಿದ್ದಾರೆ.  ಎಲ್ಲಾ 10 ತಂಡಗಳು ಕೆಲ ಪ್ರಮುಖ ಆಟಗಾರರ ಹುಡುಕಾಟದಲ್ಲಿವೆ. ಕರ್ನಾಟಕದ 16 ಆಟಗಾರರು ಹರಾಜಿನಲ್ಲಿ ಪಾಲ್ಗೊಂಡಿದ್ದಾರೆ.

ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಆಟಗಾರರ ಪೈಕಿ ಜಮ್ಮು-ಕಾಶ್ಮೀರ ಕ್ರಿಕೆಟ್‌ ಸಂಸ್ಥೆಯ 21 ಆಟಗಾರರು ಇದ್ದಾರೆ. ಕರ್ನಾಟಕ ಕ್ರಿಕೆಟ್‌ ಸಂಸ್ಥೆಯ 16 ಆಟಗಾರರು ಅದೃಷ್ಟಪರೀಕ್ಷೆ ನಡೆಸಲಿದ್ದಾರೆ. ತಮಿಳುನಾಡು, ಉತ್ತರಪ್ರದೇಶ, ದೆಹಲಿ ಕ್ರಿಕೆಟ್‌ ಸಂಸ್ಥೆಗಳೂ ತಲಾ 16 ಆಟಗಾರರ ಹೆಸರು ನೋಂದಾಯಿಸಿವೆ.
 
ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌, ಸ್ಯಾಮ್‌ ಕರ್ರನ್‌, ಹ್ಯಾರಿ ಬ್ರೂಕ್‌, ಆಸ್ಪ್ರೇಲಿಯಾದ ಕ್ಯಾಮರೋನ್‌ ಗ್ರೀನ್‌ ಸೇರಿದಂತೆ ಪ್ರಮುಖ ಆಟಗಾರರ ಬಂಪರ್‌ ನಿರೀಕ್ಷೆಯಲ್ಲಿದ್ದಾರೆ.

ಹರಾಜಿಗೂ ಮೊದಲು 10 ತಂಡಗಳು ಒಟ್ಟು 163 ಆಟಗಾರರನ್ನು ರೀಟೈನ್‌ ಮಾಡಿಕೊಂಡಿವೆ. ಹರಾಜಿನಲ್ಲಿರುವ 87 ಖಾಲಿ ಸ್ಥಾನಗಳಲ್ಲಿ ಗರಿಷ್ಠ 30 ಸ್ಥಾನಗಳು ವಿದೇಶಿ ಆಟಗಾರರ ಪಾಲಾಗಬಹುದು. ಹರಾಜಿನಲ್ಲಿ 10 ಫ್ರಾಂಚೈಸಿಗಳು ಸೇರಿ ಒಟ್ಟು 206.5 ಕೋಟಿ ರು. ಖರ್ಚು ಮಾಡಬಹುದಾಗಿದೆ.40 ವರ್ಷದ ಭಾರತದ ಲೆಗ್‌ ಸ್ಪಿನ್ನರ್‌ ಅಮಿತ್‌ ಮಿಶ್ರಾ ಹರಾಜಿನಲ್ಲಿರುವ ಅತಿ ಹಿರಿಯ ಆಟಗಾರ. ಅದೇ ರೀತಿ ಅಷ್ಘಾನಿಸ್ತಾನದ 15 ವರ್ಷದ ಅಲ್ಲಾಹ್‌ ಮುಹಮ್ಮದ್‌ ಗಝನ್ಫರ್‌ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

Follow Us:
Download App:
  • android
  • ios