ಪ್ರತಿಭಾನ್ವಿತ ಕ್ರಿಕೆಟಿಗ ಶಾರುಖ್ ಖಾನ್ ಖರೀದಿಗೆ ಫ್ರಾಂಚೈಸಿ ಪೈಪೋಟಿ 9 ಕೋಟಿ ರೂಗೆ ಪಂಜಾಬ್ ಕಿಂಗ್ಸ್ ತಂಡ ಖರೀದಿ 40 ಲಕ್ಷ ಮೂಲ ಬೆಲೆಯ ಶಾರುಖ್ ಖಾನ್ ದಾಖಲೆ ಮೊತ್ತಕ್ಕೆ ಸೇಲ್

ಬೆಂಗಳೂರು(ಫೆ.12): ತಮಿಳುನಾಡು ಮೂಲದ ಯುವ ಕ್ರಿಕೆಟಿಗ ಶಾರುಖ್ ಖಾನ್(shahrukh khan ) ಐಪಿಎಲ್ ಹರಾಜು 2022(IPL AUction 2022) ದಾಖಲೆ ಮೊತ್ತಕ್ಕೆ ಹರಾಜಾಗಿದ್ದಾರೆ. ತೀವ್ರ ಪೈಪೋಟಿ ಹರಾಜಿನಲ್ಲಿ ಶಾರುಖ್ ಖಾನ್‌ಗೆ ಬರೋಬ್ಬರಿ 9 ಕೋಟಿ ರೂಪಾಯಿ ನೀಡಿ ಪಂಜಾಬ್ ಕಿಂಗ್ಸ್(Punjab Kings) ಖರೀದಿ ಮಾಡಿದೆ. 

ಶಾರುಕ್ ಖಾನ್‌ರನ್ನು ಖರೀದಿಸಲು ಕೋಲ್ಕತಾ ನೈಟ್ ರೈಡರ್ಸ್(KKR), ಚೆನ್ನೈ ಸೂಪರ್ ಕಿಂಗ್ಸ್‌(CSK), ಪಂಜಾಬ್ ಕಿಂಗ್ಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ ಪಟ್ಟು ಬಿಡದ ಪಂಜಾಬ್ ಕಿಂಗ್ಸ್ 9 ಕೋಟಿ ರೂಪಾಯಿ ನೀಡಿ ಶಾರುಖ್ ಖರೀದಿಸಿ ಬ್ಯಾಟಿಂಗ್ ಆರ್ಡರ್ ಮತ್ತಷ್ಟು ಬಲಿಷ್ಠಗೊಳಿಸಿದೆ.

IPL Auction 2022 ಕನ್ನಡಿಗ ಅಭಿನವ್‌ಗೆ ಜಾಕ್‌ಪಾಟ್, 2.6 ಕೋಟಿಗೆ ಗುಜರಾತ್ ಪಾಲು!

ಶಾರುಖ್ ಖಾನ್ ಮೂಲ ಬೆಲೆ 40 ಲಕ್ಷ ರೂಪಾಯಿ. ಜಿದ್ದಿಗೆ ಬಿದ್ದ ಫ್ರಾಂಚೈಸಿ ಶಾರುಖ್ ಖರೀದಿಗೆ ಆಸಕ್ತಿ ತೋರಿತು. ಹೀಗಾಗಿ 9 ಕೋಟಿ ರೂಪಾಯಿಗೆ ಬಿಕರಿಯಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರವೇ ಆಡಿದ್ದ ಶಾರುಖ್ ಖಾನ್, ಭವಿಷ್ಯದ ಸ್ಟಾರ್ ಎಂಬುದನ್ನು ಮನವರಿಕೆ ಮಾಡಿದ್ದರು. ಪಂಜಾಬ್ ಪರ ಕಳೆದ ಆವೃತ್ತಿಯಲ್ಲಿ ಶಾರುಖ್ ಖಾನ್ 11 ಪಂದ್ಯಗಳಿಂದ 153 ರನ್ ಸಿಡಿಸಿದ್ದರು. 47 ರನ್ ವೈಯುಕ್ತಿಕ ಗರಿಷ್ಠ ಮೊತ್ತವಾಗಿತ್ತು. 

ಸೈಯದ್ ಮುಷ್ತಾಕ್ ಆಲಿ, ವಿಜಯ್ ಹಜಾರೆ ಸೇರಿದಂತೆ ದೇಸಿ ಟೂರ್ನಿಗಳಲ್ಲಿ ತಮಿಳುನಾಡು ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟ ಕೀರ್ತಿ ಇದೇ ಶಾರುಖ್ ಖಾನ್‌ಗಿದೆ. 2014ರಲ್ಲಿ ತಮಿಳುನಾಡು ಪರ ಲಿಸ್ಟ್ ಎ ಕ್ರಿಕೆಟ್ ಆಡಿದ್ದ ಶಾರುಖ್ ಖಾನ್ ಅತ್ಯುತ್ತಮ ಪ್ರದರ್ಶನದ ಮೂಲಕ ಗಮನಸೆಳೆದಿದ್ದರು. ಆದರೆ ಅಂಡರ್ 19 ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಬಳಿಕ ತಮಿಳನಾಡು ಪ್ರಿಮಿಯರ್ ಲೀಗ್ ಮೂಲಕ ಹೊಸ ಅಧ್ಯಾಯ ಬರೆದ ಶಾರುಖ್ ಖಾನ್ 2018-19ರ ಸಾಲಿನಲ್ಲಿ ತಮಿಳುನಾಡು ರಣಜಿ ತಂಡಕ್ಕೆ ಪದಾರ್ಪಣೆ ಮಾಡಿದರು.

IPL Auction 2022 ಜೋಶ್ ಹೇಜಲ್‌ವುಡ್‌ ಖರೀದಿಸಿದ ಆರ್‌ಸಿಬಿ, 7.75 ಕೋಟಿ ರೂಗೆ ಸೋಲ್ಡ್!

ತಮಿಳುನಾಡು ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ತಿರುಚಿ ಫ್ರಾಂಚೈಸಿ ಪರ ಆಡಿದ ಶಾರುಖ್ ಖಾನ್ ಕೇವಲ 8 ಎಸೆತದಲ್ಲಿ 20 ರನ್ ಸಿಡಿಸಿ ಎಲ್ಲರ ಗಮನಸೆಳೆದಿದ್ದರು. 2021ರ ಸೈಯದ್ ಮುಷ್ತಾಕ್ ಆಲಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಿಮಾಚಲ್ ವಿರುದ್ಧ 19 ಎಸೆತದಲ್ಲಿ 40 ರನ್ ಸಿಡಿಸಿ ತಮಿಳುನಾಡು ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. 

ಟೀಂ ಇಂಡಿಯಾದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಶಾರುಖ್ ಕಾನ್ ಸ್ಟಾಂಡ್ ಬೈ ಆಟಗಾರ ಎಂದು ಬಿಸಿಸಿಐ ಆಯ್ಕೆ ಮಾಡಿದೆ. ಟೀಂ ಇಂಡಿಯಾದ ಭವಿಷ್ಯ ಕ್ರಿಕೆಟಿಗ ಎಂದೇ ಗುರುತಿಸಿಕೊಂಡಿರುವ ಶಾರುಖ್ ಖಾನ್ ಇದೀಗ ಪಂಜಾಬ್ ತಂಡ 9 ಕೋಟಿ ರೂಪಾಯಿ ನೀಡಿದೆ.

ಪಂಜಾಬ್ ಕಿಂಗ್ಸ್ ಹರಾಜಿನಲ್ಲಿ ಖರೀದಿಸಿದ ಆಟಗಾರರು
ರಾಹುಲ್ ಚಹಾರ್ : 5.25 ಕೋಟಿ ರೂಪಾಯಿ
ಜಾನಿ ಬೈರ್‌ಸ್ಟೋ: 6.75 ಕೋಟಿ ರೂಪಾಯಿ
ಶಾರುಖ್ ಖಾನ್: 9 ಕೋಟಿ ರೂಪಾಯಿ
ಕಾಗಿಸೋ ರಬಾಡ: 9.25 ಕೋಟಿ ರೂಪಾಯಿ 
ಶಿಖರ್ ಧವನ್: 8.25 ಕೋಟಿ ರೂಪಾಯಿ

ಪಂಜಾಬ್ ಕಿಂಗ್ಸ್:
ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದ ಕೆಎಲ್ ರಾಹುಲ್ ಲಕ್ನೋ ತಂಡದ ನಾಯಕರಾಗಿದ್ದಾರೆ. ಹೀಗಾಗಿ ಪಂಜಾಬ್ ಹೊಸ ನಾಯಕನ ಹುಡುಕಾಟದಲ್ಲಿದೆ. ಸದ್ಯ ತಂಡದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್, ಈ ಹರಾಜಿನಲ್ಲಿ ಖರೀದಿಸಿದ ಶಿಖರ್ ಧವನ್, ಹಿರಿಯ ಆಟಗಾರಾಗಿದ್ದಾರೆ. ಇನ್ನು ಕಾಗಿಸೋ ರಬಾಡ, ಅರ್ಶದೀಪ್ ಸಿಂಗ್, ಹರ್ಪ್ರೀತ್ ಬ್ರಾರ್, ಇಶಾನ್ ಪೊರೆಲ್, ರಾಹುಲ್ ಚಹಾರ್ ತಂಡದಲ್ಲಿದ್ದಾರೆ. ಹೊಸ ನಾಯಕನ ಹುಡುಕಾಟದಲ್ಲಿರುವ ಪಂಜಾಬ್ ಕಿಂಗ್ಸ್ ಹೊಸ ತಂಡ ಕಟ್ಟಿ ಮರೀಚಿಕೆಯಾಗಿರುವ ಟ್ರೋಫಿ ಗೆಲ್ಲಲು ಪಣತೊಟ್ಟಿದೆ.