Asianet Suvarna News Asianet Suvarna News

IPL Auction 2022 ಜೋಶ್ ಹೇಜಲ್‌ವುಡ್‌ ಖರೀದಿಸಿದ ಆರ್‌ಸಿಬಿ, 7.75 ಕೋಟಿ ರೂಗೆ ಸೋಲ್ಡ್!

  • ರಾಯಲ್ ಚಾಲೆಂಜರ್ಸ್ ತಂಡಕ್ಕೆ ಪ್ರಮುಖ ವೇಗಿ
  • ಆಸೀಸ್ ವೇಗಿ ಖರೀದಿಸಲು 7.75 ಕೋಟಿ ನೀಡಿದ ಆರ್‌ಸಿಬಿ
  • ಬಲಿಷ್ಠ ಬೌಲಿಂಗ್ ಪಡೆ ಕಟ್ಟುವತ್ತ ಬೆಂಗಳೂರು ತಂಡ
IPL Auction 2022 RCB brought Australian seamer josh hazlewood with rs 7 75 crore ckm
Author
Bengaluru, First Published Feb 12, 2022, 6:20 PM IST | Last Updated Feb 13, 2022, 1:15 PM IST

ಬೆಂಗಳೂರು(ಫೆ.12):  ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಬಲಿಷ್ಠ ಬೌಲಿಂಗ್ ಪಡೆ ಕಟ್ಟಲು ಮಹತ್ವದ ಬಿಡ್ಡಿಂಗ್ ನಡೆಸಿದೆ. ಆಸ್ಟ್ರೇಲಿಯಾ ವೇಗಿ ಜೋಶ್ ಹೇಜಲ್‌ವುಡ್ ಖರೀದಿಸುವ ಮೂಲಕ ವೇಗಿಗಳ ವಿಭಾಗವನ್ನು ಬಲಪಡಿಸಿದೆ. 7.75 ಕೋಟಿ ರೂಪಾಯಿ ನೀಡಿ ಆರ್‌ಸಿಬಿ ಹೇಜಲ್‌ವುಡ್(josh hazlewood ) ಖರೀದಿ ಮಾಡಿದೆ.

ಬೆಂಗಳೂರಿನಲ್ಲಿ(Bengaluru ನಡೆಯುತ್ತಿರು ಐಪಿಎಲ್ ಹರಾಜು 2022(IPL Auction 2022) ತೀವ್ರ ಕುತೂಹಲ ಕೆರಳಿದೆ. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿರುವ ಜೋಶ್ ಹೇಜಲ್‌ವುಡ್‌, ಕಳೆದ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ 7.75 ಕೋಟಿ ರುಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಪಾಲಾಗಿದ್ದಾರೆ. 

IPL Auction 2022 ಕನ್ನಡಿಗ ಪ್ರಸಿದ್ಧ್ ಕೃಷ್ಣ ಖರೀದಿಗೆ ಮುಗಿಬಿದ್ದ ಫಾಂಚೈಸಿ, ದಾಖಲೆ ಮೊತ್ತಕ್ಕೆ ರಾಜಸ್ಥಾನ ಪಾಲು!

ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಖರೀದಿಸಲು ಚೆನ್ನೈ ಸೂಪರ್‌ ಕಿಂಗ್ಸ್, ಡೆಲ್ಲಿ ಹಾಗೂ ಲಖನೌ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು.  

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖರೀದಿ:
ಫಾಫ್ ಡುಪ್ಲೆಸಿಸ್: 7 ಕೋಟಿ ರೂಪಾಯಿ
ಹರ್ಷಲ್ ಪಟೇಲ್ : 10.75 ಕೋಟಿ ರೂಪಾಯಿ
ವಾನಿಂದು ಹಸರಂಗ : 10.75 ಕೋಟಿ ರೂಪಾಯಿ
ದಿನೇಶ್ ಕಾರ್ತಿಕ್ :  5.50 ಕೋಟಿ ರೂಪಾಯಿ
ಜೋಶ್ ಹೆಜಲ್‌ವುಡ್ : 7.75 ಕೋಟಿ ರೂಪಾಯಿ
ಶೆಹಬಾಜ್ ಅಹಮ್ಮದ್ : 2.40 ಕೋಟಿ ರುಪಾಯಿ
ಆಕಾಶ್ ದೀಪ್  : 20 ಲಕ್ಷ ರೂಪಾಯಿ
ಅನೂಜ್ ರಾವತ್  :3.40 ಕೋಟಿ ರುಪಾಯಿ

IPL Auction 2022 : ದೀಪಕ್ ಚಹರ್ ಐಪಿಎಲ್ 2022 ಹರಾಜಿನ 2ನೇ ದುಬಾರಿ ಪ್ಲೇಯರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಗುಡ್ ಬೈ ಹೇಳಿದ ಕಾರಣ ಇದೀಗ ಆರ್‌ಸಿಬಿ ನಾಯಕತ್ವ ಯಾರಿಗೆ ನೀಡಲಾಗು್ತ್ತದೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ರಿಟೈನ್ ಅವಕಾಶದಲ್ಲಿ ನಾಲ್ವರನ್ನು ಉಳಿಸಿಕೊಳ್ಳವು ಅವಕಾಶವಿತ್ತು. ಆರ್‌ಸಿಬಿ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಉಳಿಸಿಕೊಂಡಿತ್ತು.

2008ರಿಂದ 2021ರ ವರೆಗೆ ರಾಜಸ್ಥಾನ ರಾಯಲ್ಸ್ ಅತ್ಯುತ್ತಮ ತಂಡವಾಗಿದ್ದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.  2009, 2011 ಹಾಗೂ 2016ರಲ್ಲಿ ಫೈನಲ್ ಪ್ರವೇಶಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇನ್ನು 2020 ಹಾಗೂ 2021ರಲ್ಲಿ ಸತತ ಎರಡು ಬಾರಿ ಪ್ಲೇ ಆಫ್ ಪ್ರವೇಶಿಸಿದೆ. ಹೀಗಾಗಿ ಆರ್‌ಸಿಬಿ ಸತತ ಮೂರನೇ ಪ್ರಯತ್ನದಲ್ಲಿ ಕಪ್ ಗೆಲ್ಲಲಿದೆ ಅನ್ನೋ ಲೆಕ್ಕಾಚಾರಗಳ ಕೇಳಿಬರುತ್ತಿದೆ. ಇಷ್ಟು ದಿನ ಆನ್ ಪೇಪರ್ ಅತ್ಯುತ್ತಮ ತಂಡವನ್ನು ಆರ್‌ಸಿಬಿ ಕಣಕ್ಕಿಳಿಸುತ್ತಿತ್ತು. ಆದರೆ ಗ್ರೌಂಡ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದೆ ನಿರಾಸೆ ಅನುಭವಿಸುತ್ತಿತ್ತು. ಈ ಬಾರಿಯ ಆನ್ ಪೇಪರ್ ಮ್ಯಾಚ್ ವಿನ್ನಿಂಗ್ ತಂಡ ಎನಿಸದಿದ್ದರೂ, ಆನ್ ಗ್ರೌಂಡ್ ಮ್ಯಾಜಿಕ್ ಮಾಡುವ ಸಾಧ್ಯತೆ ಹೆಚ್ಚಿದೆ.

ಈ ಬಾರಿಯ ತಂಡದ ಸ್ಫೋಟಕ ಬ್ಯಾಟ್ಸಮನ್ ಎಬಿ ಡಿವಿಲಿಯರ್ಸ್ ಲಭ್ಯವಿಲ್ಲ. ಕಾರಣ ಈಗಾಗಲೇ ಎಬಿಡಿ ಎಲ್ಲಾ ಮಾದರಿಗೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ದಿಗ್ಗಜ ಕ್ರಿಕೆಟಿಗರು ಆರ್‌ಸಿಬಿ ಪರ ಆಢಿದ್ದಾರೆ. ಹಲವು ದಾಖಲೆಗಳಿಗೆ ಆರ್‌ಸಿಬಿ ವೇದಿಕೆಯಾಗಿದೆ. ಆದರೆ ಕಪ್ ಗೆಲ್ಲಲಿಲ್ಲ ಅನ್ನೋ ಕೊರಗು ಅಭಿಮಾನಿಗಳಲ್ಲಿ ಇದ್ದೇ ಇದೆ. ಈ ಬಾರಿ ಟ್ರೋಫಿ ಕೊರಗು ನೀಗಿಸುತ್ತಾ ಅನ್ನೋ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡುತ್ತಿದೆ.

Latest Videos
Follow Us:
Download App:
  • android
  • ios