Asianet Suvarna News Asianet Suvarna News

IPL Auction 2022 : ದೀಪಕ್ ಚಹರ್ ಐಪಿಎಲ್ 2022 ಹರಾಜಿನ 2ನೇ ದುಬಾರಿ ಪ್ಲೇಯರ್

ದೀಪಕ್ ಚಹರ್ ಗೆ ಐಪಿಎಲ್ ಜಾಕ್ ಪಾಟ್
ಐಪಿಎಲ್ 2022 ಹರಾಜಿನ 2ನೇ ಗರಿಷ್ಠ ಮೊತ್ತಕ್ಕೆ ಮಾರಾಟ
ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದ ವೇಗದ ಬೌಲರ್

IPL Auction 2022 Deepak Chahar is the second most expensive player in the IPL 2022 auction san
Author
Bengaluru, First Published Feb 12, 2022, 5:43 PM IST

ಬೆಂಗಳೂರು (ಫೆ. 12): ಕೆಳ ಕ್ರಮಾಂಕದಲ್ಲಿ ಉತ್ತಮ ಬ್ಯಾಟ್ಸ್ ಮನ್ ಆಗಿಯೂ ಗಮನಸೆಳೆದಿರುವ ದೀಪಕ್ ಚಹರ್ 2022 ಐಪಿಎಲ್ ಹರಾಜಿನ ಈವರೆಗಿನ 2ನೇ ಅತ್ಯಂತ ದುಬಾರಿ ಆಟಗಾರ ಎನಿಸಿದ್ದಾರೆ. 2 ಕೋಟಿ ರೂಪಾಯಿಯ ಮೂಲ ಬೆಲೆ ಹೊಂದಿದ್ದ ದೀಪಕ್ ಚಹರ್ ಗೆ ಆರಂಭದಲ್ಲಿ ಸನ್ ರೈಸರ್ಸ್ ಹೈದರಾಬಾದ್ ದೊಡ್ಡ ಮಟ್ಟದ ಬಿಡ್ ಮಾಡುವ ಮೂಲಕ ಖರೀದಿ ಮಾಡುವ ಲಕ್ಷಣ ತೋರಿತ್ತು.ಆದರೆ, ಕೊನೆಯಲ್ಲಿ ಬಿಡ್ಡಿಂಗ್ ವಾರ್ ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ 14 ಕೋಟಿ ರೂಪಾಯಿ ನೀಡುವ ಮೂಲಕ ತನ್ನ ತಂಡದಲ್ಲೇ ಉಳಿಸಿಕೊಳ್ಳುವಲ್ಲಿ ಯಶ ಕಂಡಿತು.

ಆರಂಭದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ದೀಪಕ್ ಚಹರ್ ಗಾಗಿ ಹೋರಾಟ ನಡೆಸಿದವು. ಇದರಿಂದಾಗಿ ಕೆಲವೇ ಹೊತ್ತಿನಲ್ಲಿ ಅವರ ಮೊತ್ತ 5 ಕೋಟಿಯ ಗಡಿ ದಾಟಿತ್ತು. 8 ಕೋಟಿಯ ವರೆಗೂ ರೇಸ್ ನಲ್ಲಿದ್ದ ಸನ್ ರೈಸರ್ಸ್ ಬಳಿಕ ಹೆಚ್ಚುವರಿಯಾಗಿ 9 ಕೋಟಿಯವರೆಗೂ ಬಿಡ್ ಮಾಡಿತು. ಕೊನೆಗೆ ಡೆಲ್ಲಿ ತಂಡದ ಪೈಪೋಟಿಯಿಂದಾಗಿ 10 ಕೋಟಿಯವರೆಗೆ ಬಿಡ್ ಅನ್ನು ಸನ್ ರೈಸರ್ಸ್ ಏರಿಸಿತ್ತು. ಮೊತ್ತ 11 ಕೋಟಿ ದಾಟುತ್ತಿದ್ದಂತೆ ರೇಸ್ ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತವನ್ನು ದೊಡ್ಡ ಮಟ್ಟಕ್ಕೆ ಏರಿಸಿತು.

IPL Auction 2022 Live: ಇಶಾನ್ ಕಿಶನ್, ದೀಪಕ್ ಚಹರ್ ಐಪಿಎಲ್ 2022 ಹರಾಜಿನ ದುಬಾರಿ ಆಟಗಾರರು
ಚೆನ್ನೈ ಸೂಪರ್ ಕಿಂಗ್ಸ್ ತಂಡ ದೀಪಕ್ ಚಹರ್ ಗೆ 13 ಕೋಟಿಗೆ ಬಿಡ್ ಮಾಡುತ್ತಿದ್ದಂತೆ, ಬಿಡ್ ಗೆ ಇಳಿದ ರಾಜಸ್ಥಾನ ರಾಯಲ್ಸ್ ತಂಡ ಮೊತ್ತವನ್ನು ಇನ್ನಷ್ಟು ಏರಿಸಿತು. ಕೊನೆಗೆ 14 ಕೋಟಿ ರೂಪಾಯಿಗೆ ದೀಪಕ್ ಚಹರ್ ಅನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿ ಮಾಡಿತು. ದೀಪಕ್ ಚಹರ್ ಕಳೆದ ಮೂರು ಏಕದಿನ ಇನ್ನಿಂಗ್ಸ್ ಗಳಲ್ಲಿ ಅದ್ಭುತವಾಗಿ ಆಟವಾಡಿದ್ದರು. ಶ್ರೀಲಂಕಾ ವಿರುದ್ಧ 82 ಎಸೆತಗಳಲ್ಲಿ ಅಜೇಯ 69 ರನ್ ಬಾರಿಸಿದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧ 34 ಎಸೆತಗಳಲ್ಲಿ 54 ಹಾಗೂ ವೆಸ್ಟ್ ಇಂಡೀಸ್ ವಿರುದ್ಧ 38 ಎಸೆತಗಳಲ್ಲಿ 38 ರನ್ ಸಿಡಿಸಿ ಗಮನಸೆಳೆದಿದ್ದರು.

IPL Auction 2022 ಕನ್ನಡಿಗ ಪ್ರಸಿದ್ಧ್ ಕೃಷ್ಣ ಖರೀದಿಗೆ ಮುಗಿಬಿದ್ದ ಫಾಂಚೈಸಿ, ದಾಖಲೆ ಮೊತ್ತಕ್ಕೆ ರಾಜಸ್ಥಾನ ಪಾಲು!
ಇನ್ನೊಂದೆಡೆ ಪ್ರಮುಖ ಆಟಗಾರರಾದ ಅಫ್ಘಾನಿಸ್ತಾನದ ಮೊಹಮದ್ ನಬಿ, ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್, ಭಾರತದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹರನ್ನು ಖರೀದಿಸಲು ಫ್ರಾಂಚೈಸಿಗಳು ಮುಂದೆ ಬರಲಿಲ್ಲ. ಇನ್ನೊಂದೆಡೆ ಮಿ. ಐಪಿಎಲ್ ಎಂದೇ ಪ್ರಖ್ಯಾತರಾಗಿದ್ದ ಸುರೇಶ್ ರೈನಾ ಅಚ್ಚರಿ ಎನ್ನುವಂತೆ ಅನ್ ಸೋಲ್ಡ್ ಆದರು. ಆಸ್ಟ್ರೇಲಿಯಾದ ಅನುಭವಿ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್, ಬಾಂಗ್ಲಾದೇಶದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಹಾಗೂ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ಮಿಲ್ಲರ್ ಗೆ ಯಾರೂ ಬಿಡ್ ಮಾಡಲಿಲ್ಲ. ಆದರೆ, ಇವರೆಲ್ಲರಿಗೂ ಮತ್ತೊಮ್ಮೆ ಹರಾಜಿಗೆ ಒಳಪಡಲಿದ್ದಾರೆ.


ಇಲ್ಲಿಯವರೆಗೆ ಗರಿಷ್ಠ ಮೊತ್ತಕ್ಕೆ ಹರಾಜಾದ ಟಾಪ್ 5 ಕ್ರಿಕೆಟಿಗರು
ಇಶಾನ್ ಕಿಶನ್ - 15.25 ಕೋಟಿ ರುಪಾಯಿ - ಮುಂಬೈ ಇಂಡಿಯನ್ಸ್‌
ದೀಪಕ್ ಚಹರ್-14 ಕೋಟಿ ರೂಪಾಯಿ-ಚೆನ್ನೈ ಸೂಪರ್ ಕಿಂಗ್ಸ್
ಶ್ರೇಯಸ್ ಅಯ್ಯರ್ - 12.25 ಕೋಟಿ ರುಪಾಯಿ - ಕೋಲ್ಕತಾ ನೈಟ್‌ ರೈಡರ್ಸ್‌
ವನಿಂದು ಹಸರಂಗ -10.75 ಕೋಟಿ ರುಪಾಯಿ - ಆರ್‌ಸಿಬಿ 
ಹರ್ಷಲ್ ಪಟೇಲ್‌ - 10.75 ಕೋಟಿ ರುಪಾಯಿ - ಆರ್‌ಸಿಬಿ
ನಿಕೋಲಸ್ ಪೂರನ್‌ - 10.75 ಕೋಟಿ ರುಪಾಯಿ - ಸನ್‌ರೈಸರ್ಸ್‌ ಹೈದರಾಬಾದ್‌

Follow Us:
Download App:
  • android
  • ios