ಎರಡನೇ ದಿನದ ಹರಾಜಿನಲ್ಲಿ ಆರ್‌ಸಿಬಿ ಎರಡನೇ ಖರೀದಿ ಮಹಿಪಾಲ್ ಬಳಿಕ ಫಿನ್ ಅಲೆನ್ ಖರೀದಿಸಿದ ಆರ್‌ಸಿಬಿ ಯುವ ಆಟಗಾರರತ್ತ ಚಿತ್ತ ಹರಿಸಿದ ಆರ್‌ಸಿಬಿ

ಬೆಂಗಳೂರು(ಫೆ.13):  ಐಪಿಎಲ್ ಹರಾಜಿನಲ್ಲಿ(IPL Auction 2022) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ(RCB) ಮೊದಲ ದಿನದ ಖರೀದಿ ಭಾರಿ ಟೀಕೆಗೆ ಕಾರಣವಾಗಿದೆ. ಕೆಲ ಖರೀದಿ ದುಬಾರಿಯಾಗಿದೆ ಎಂದರೆ, ಕನ್ನಡಿಗರನ್ನು, ಭಾರತದ ಯುವ ಕ್ರಿಕೆಟಿಗರನ್ನು ಕಣೆಗಣಿಸಲಾಗಿದೆ ಅನ್ನೋ ಟೀಕೆಗಳು ವ್ಯಕ್ತವಾಗಿದೆ. ಇದೀಗ ಎರಡನೇ ದಿನದಲ್ಲಿ ಆರ್‌ಸಿಬಿ ಇದುವರೆಗೆ 3 ಆಟಗಾರರನ್ನು ಖರೀದಿ ಮಾಡಿದೆ. ಮೊದಲು ಮಹಿಪಾಲ್ ಲೊಮ್ರೊರ್ ಖರೀದಿ ಮಾಡಿದ ಆರ್‌ಸಿಬಿ ಬಳಿಕ ನ್ಯೂಜಿಲೆಂಡ್ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಫಿನ್ ಅಲೆನ್ ಖರೀದಿ ಮಾಡಿದೆ. ಇದೀಗ ವಿಂಡೀಸ್ ಕ್ರಿಟೆಗಿ ಶೇರ್ಪಾನೆ ರುದರ್‌ಪೋರ್ಡ್ ಖರೀದಿ ಮಾಡಿದೆ.

50 ಲಕ್ಷ ರೂಪಾಯಿ ಮೂಲ ಬೆಲೆಯ ಫಿನ್ ಅಲೆನ್ ಖರೀದಿಸಲು ಕೆಲ ಫ್ರಾಂಚೈಸಿ ಆಸಕ್ತಿ ತೋರಿದರೂ, ಬೆಂಗಳೂರು ಬಿಡ್ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 80 ಲಕ್ಷ ರೂಪಾಯಿ ನೀಡಿ ಫಿನ್ ಅಲೆನ್‌ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದೆ.

IPL Auction 2022 : ಒಂದೇ ವರ್ಷದಲ್ಲಿ 8.35 ಕೋಟಿ ಮೌಲ್ಯ ಕಳೆದುಕೊಂಡ ಕೆ.ಗೌತಮ್!

ಫಿನ್ ಅಲನ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸದಲ್ಲ. ಕಾರಣ ಈಗಾಗಲೇ ಫಿನ್ ಬೆಂಗಳೂರು ತಂಡದ ಭಾಗವಾಗಿದ್ದರು. ಆದರೆ ಒಂದು ಪಂದ್ಯ ಆಡುವ ಅವಕಾಶ ಪಡೆದಿಲ್ಲ. ಈ ಬಾರಿ ಬ್ಯಾಕ್ಅಪ್ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಆಗಿ ಫಿನ್ ಅಲೆನ್ ಅವರನ್ನು ಆರ್‌ಸಿಬಿ ಆಯ್ಕೆ ಮಾಡಿದೆ.

ನ್ಯೂಜಿಲೆಂಡ್ ಕ್ರಿಕೆಟಿಗ ಫಿನ್ ಅಲೆನ್(Finn Allen) ಖರೀದಿಸಲು ಕಾರಣವಿದೆ. ಟಿ20 ಮಾದರಿಯಲ್ಲಿ 190ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಬಲ್ಲ ಸಾಮಮರ್ಥ್ಯ ಫಿನ್ ಅಲೆನ್‌ಗಿದೆ. ನ್ಯೂಜಿಲೆಂಡ್ ಪರ 6 ಟಿ20 ಪಂದ್ಯ ಆಡಿರುವ ಫಿನ್ ಅಲೆನ್ 190.24 ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಇತರ ಲೀಗ್ ಟಿ20 ಟೂರ್ನಿಗಳಲ್ಲಿ ಫಿನ್ ಅಲೆನ್ 175.65 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಇಷ್ಟೇ ಅಲ್ಲ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಫಿನ್ ಅಲೆನ್ ಸ್ಟ್ರೈಕ್ ರೇಟ್ 107.35. ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿಗಳ ಆತ್ಮವಿಶ್ವಾಸವನ್ನು ಕುಗ್ಗಿಸಬಲ್ಲ ಆಟಗಾರ ಫಿನ್ ಅಲೆನ್. ಇದೇ ಕಾರಣಕ್ಕೆ ಆರ್‌ಸಿಬಿ ಈ ಸ್ಫೋಟಕ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಆಯ್ಕೆ ಮಾಡಿಕೊಂಡಿದೆ. 22ರ ಹರೆಯುವ ಯುವ ಕ್ರಿಕೆಟಿಗ ಫಿನ್ ಅಲೆನ್ ಉತ್ತಮ ಆಯ್ಕೆಯಾಗಿದೆ. ಈ ಮೂಲಕ ಆರ್‌ಸಿಬಿ ಬ್ಯಾಟಿಂಗ್ ಬೆಂಚ್ ಸ್ಟ್ರೆಂಥ್ ಹೆಚ್ಚಿಸಿಕೊಂಡಿದೆ. 

IPL Auction 2022 ಹರಾಜಿನಲ್ಲಿ ಕನ್ನಡಿಗರಿಗೆ ಭಾರಿ ಬೇಡಿಕೆ, ಎಲ್ಲರೂ ಸೋಲ್ಡ್!

ಮಹಿಪಾಲ್ ಲೊಮ್ರೊರ್
ಎರಡನೇ ದಿನದ ಹರಾಜಿನಲ್ಲಿ ಆರ್‌ಸಿಬಿ ಮೊದಲು ಆಲ್ರೌಂಡರ್ ಮಹಿಪಾಲ್ ಲೊಮ್ರೊರ್(mahipal lomror) ಖರೀದಿ ಮಾಡಿತು. ಮಹಿಪಾಲ್ ಲೊಮ್ರೊರ್‌ಗೆ 95 ಲಕ್ಷ ರೂಪಾಯಿ ನೀಡಿ ಆರ್‌ಸಿಬಿ ಖರೀದಿಸಿತು. ಕಳೆದ ಆವೃತ್ತಿಗಳಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಮಹಿಪಾಲ್ ಈ ಬಾರಿ ಆರ್‌ಸಿಬಿ ಪರ ಕಣಕ್ಕಿಳಿಯಲಿದ್ದಾರೆ.

ಮಹಿಪಾಲ್ ಲೊಮ್ರೊರ್ 11 ಐಪಿಎಲ್ ಪಂದ್ಯದ ಮೂಲಕ 181 ರನ್ ಸಿಡಿಸಿದ್ದಾರೆ. ಬೌಲಿಂಗ್‌ನಲ್ಲಿ ಒಂದು ವಿಕೆಟ್ ಕಬಳಿಸಿದ್ದಾರೆ. ಇದೀಗ ಆರ್‌ಸಿಬಿಯಲ್ಲಿ ಹೊಸ ಅಧ್ಯಾಯ ಆರಂಭಿಸಲು ಮಹಿಪಾಲ್ ರೆಡಿಯಾಗಿದ್ದಾರೆ. 

ಶೆರ್ಫಾನೆ ರುದರ್‌ಫೋರ್ಡ್‌
ವೆಸ್ಟ್ ಇಂಡೀಸ್ ಕ್ರಿಕೆಟಿಗ ಶೆರ್ಫಾನೆ ರುದರ್‌ಪೋರ್ಡ್(Sherfane Rutherford) 1 ಕೋಟಿ ರೂಪಾಯಿ ಬೆಲೆಗೆ ಆರ್‌ಸಿಬಿ ಸೇರಿಕೊಂಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿರುವ ರುದ್‌ಪೋರ್ಡ್ ಈ ಬಾರಿ ಆರ್‌ಸಿಬಿ ಪರ ಕಣಕ್ಕಿಳಿಯಲಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ 7 ಪಂದ್ಯ ಆಡಿರುವ ರುದರ್‌ಪೋರ್ಡ್ 73 ರನ್ ಸಿಡಿಸಿದ್ದಾರೆ. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖರೀದಿ:
ಫಾಫ್ ಡುಪ್ಲೆಸಿಸ್: 7 ಕೋಟಿ ರೂಪಾಯಿ
ಹರ್ಷಲ್ ಪಟೇಲ್ : 10.75 ಕೋಟಿ ರೂಪಾಯಿ
ವಾನಿಂದು ಹಸರಂಗ : 10.75 ಕೋಟಿ ರೂಪಾಯಿ
ದಿನೇಶ್ ಕಾರ್ತಿಕ್ : 5.50 ಕೋಟಿ ರೂಪಾಯಿ
ಜೋಶ್ ಹೆಜಲ್‌ವುಡ್ : 7.75 ಕೋಟಿ ರೂಪಾಯಿ
ಶೆಹಬಾಜ್ ಅಹಮ್ಮದ್ : 2.40 ಕೋಟಿ ರುಪಾಯಿ
ಆಕಾಶ್ ದೀಪ್ : 20 ಲಕ್ಷ ರೂಪಾಯಿ
ಅನೂಜ್ ರಾವತ್ :3.40 ಕೋಟಿ ರುಪಾಯಿ
ಮಹೀಪಾಲ್ ಲೊಮ್ರೊರ್: 95 ಲಕ್ಷ ರೂಪಾಯಿ
ಫಿನ್ ಅಲೆನ್: 80 ಲಕ್ಷ ರೂಪಾಯಿ
ಶೆರ್ಫಾನೆ ರುದರ್‌ಫೋರ್ಡ್‌ : 1 ಕೋಟಿ ರೂಪಾಯಿ