ಕರ್ನಾಟಕ ಕ್ರಿಕೆಟಿಗರನ್ನು ಮುಗಿಬಿದ್ದು ಖರೀದಿಸುತ್ತಿದೆ ಫ್ರಾಂಚೈಸಿ ಕೆಸಿ ಕಾರ್ಯಪ್ಪ, ಗೋಪಾಲ್, ಸುಚಿತ್ ವಿವಿದ ತಂಡದ ಪಾಲು ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ ಹರಾಜು 2022
ಬೆಂಗಳೂರು(ಫೆ.12): ಐಪಿಎಲ್ ಹರಾಜಿನಲ್ಲಿ ಕರ್ನಾಟಕ ಕ್ರಿಕೆಟಿಗರಿಗೆ ಈ ಬಾರಿಯೂ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಪ್ರಸಿದ್ಧ್ ಕೃಷ್ಣ, ಮನೀಶ್ ಪಾಂಡೆ ಸೇರಿದಂತೆ ಹಲವು ಕನ್ನಡಿಗರು ಉತ್ತಮ ಮೊತ್ತಕ್ಕೆ ವಿವಿಧ ತಂಡಗಳಿಗೆ ಸೋಲ್ಡ್ ಆಗಿದ್ದಾರೆ. ಇದೀಗ ಕರ್ನಾಟಕದ ಕ್ರಿಕೆಟಿಗರಾದ ಕೆಸಿ ಕಾರ್ಯಪ್ಪ , ಶ್ರೇಯಸ್ ಗೋಪಾಲ್ ಹಾಗೂ ಜೆ ಸುಚಿತ್‌ರನ್ನು ವಿವಿಧ ಫ್ರಾಂಚೈಸಿ ಖರೀದಿಸಿದೆ.
20 ಲಕ್ಷ ಮೂಲ ಬೆಲೆಯ ಕೆಸಿ ಕಾರ್ಯಪ್ಪಗೆ ರಾಜಸ್ಥಾನ ರಾಯಲ್ಸ್ ತಂಡ 30 ಲಕ್ಷ ರೂಪಾಯಿ ನೀಡಿ ಖರೀದಿಸಿದೆ. 2015ರಲ್ಲಿ ಕೆಸಿ ಕಾರ್ಯಪ್ಪ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದಾರೆ. ಮೊದಲ ಆವೃತ್ತಿಯಲ್ಲಿ ಕೆಸಿ ಕಾರ್ಯಪ್ಪ 2 ಕೋಟಿ ರೂಪಾಯಿಗೆ ಕೋಲ್ಕತಾ ನೈಟ್ ರೈಡರ್ಸ್ ಪಾಲಾಗಿದ್ದರು. ಬಳಿಕ ಐಪಿಎಲ್ ಟೂರ್ನಿಯಲ್ಲಿ ಸಕ್ರಿಯರಾಗಿರುವ ಕೆಸಿ ಕಾರ್ಯಪ್ಪ ಇದೀಗ ರಾಜಸ್ಥಾನ ರಾಯಲ್ಸ್ ಪಾಲಾಗಿದ್ದಾರೆ.

ಕಳೆದ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಕೆಸಿ ಕಾರ್ಯಪ್ಪ ಇದೀಗ ಮತ್ತೆ ರಾಜಸ್ಥಾನ ಪಾಲಾಗಿದ್ದಾರೆ. 2020ರ ಐಪಿಎಲ್ ಟೂರ್ನಿಯಲ್ಲಿ ಕೆಸಿ ಕಾರ್ಯಪ್ಪ ಕೋಲ್ಕತಾ ನೈಟ್ ರೈಡರ್ಸ್ ತಂಡ ಸೇರಿಕೊಂಡಿದ್ದರು.
IPL Auction 2022 : ಮೊದಲ ದಿನದ ಹರಾಜಿನ ಬಳಿಕ, RCB ಟೀಮ್ ಹೇಗೆ ಕಾಣ್ತಿದೆ?
ಕಳೆದ ಬಾರಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿದ್ದ ಕನ್ನಡಿಗ ಶ್ರೇಯಸ್ ಗೋಪಾಲ್ ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ ಪಾಲಾಗಿದ್ದಾರೆ. ಶ್ರೇಯಸ್ ಗೋಪಾಲ್ 48 ಐಪಿಎಲ್ ಪಂದ್ಯಗಳಲ್ಲಿ 48 ವಿಕೆಟ್ ಕಬಳಿಸಿದ್ದಾರೆ.
ಶ್ರೇಯಸ್ ಗೋಪಾಲ್ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಪರ ಆಡಿದ್ದಾರೆ. 2014ರಲ್ಲಿ ಶ್ರೇಯಸ್ ಗೋಪಾಲ್ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದಾರೆ. ಆದರೆ 2014ರಲ್ಲಿ ಶ್ರೇಯಸ್ ಗೋಪಾಲ್‌ಗೆ ಕೇವಲ 4 ಪಂದ್ಯ ಆಡುವ ಅವಕಾಶ ಮಾತ್ರ ಒಲಿದು ಬಂದಿತ್ತು. 4 ಪಂದ್ಯಗಳಲ್ಲಿ 14 ಓವರ್ ಬೌಲಿಂಗ್ ಮಾಡಿದ ಗೋಪಾಲ್ 6 ವಿಕೆಟ್ ಕಬಳಿಸಿದ್ದರು. ಆದರೆ 2015 ಮತ್ತು 2016ನೇ ಐಪಿಎಲ್ ಆವೃತ್ತಿಗಳಲ್ಲಿ ಶ್ರೇಯಸ್ ಗೋಪಾಲ್‌ಗೆ ಅವಕಾಶಗಳೇ ಸಿಗಲಿಲ್ಲ. ಎರಡು ಆವೃತ್ತಿಗಳಲ್ಲಿ ಕೇವಲ ಒಂದು ಪಂದ್ಯ ಆಡುವ ಅವಕಾಶ ಮಾತ್ರ ಸಿಕ್ಕಿತ್ತು. 2018ರಲ್ಲಿ ಶ್ರೇಯಸ್ ಗೋಪಾಲ್ 11 ಪಂದ್ಯಗಳನ್ನು ಆಡಿ ಗಮನಸೆಳೆದರು. 31 ಓವರ್ ಬೌಲಿಂಗ್ ಮಾಡಿದ ಗೋಪಾಲ್ 11 ವಿಕೆಟ್ ಕಬಳಿಸಿದ್ದಾರೆ.
IPL Auction 2022: ಎರಡನೇ ದಿನ ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳ ಬಳಿ ಉಳಿದಿರುವ ಹಣವೆಷ್ಟು..?
2019ರಲ್ಲಿ ಲೀಗ್ ಸಂಪೂರ್ಣ ಪಂದ್ಯ ಆಡೋ ಮೂಲಕ ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ಸ್ಪಿನ್ನರ್ ಆಗಿ ಗುರುತಿಸಿಕೊಂಡರು. 14 ಪಂದ್ಯಗಳನ್ನು ಆಡಿದ ಶ್ರೇಯಸ್ ಗೋಪಾಲ್ 20 ವಿಕೆಟ್ ಕಬಳಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ ತಂಡದ ಕೀ ಪ್ಲೇಯರ್ ಆಗಿ ಗುರುತಿಸಿಕೊಂಡರು. 2020ರಲ್ಲೂ 14 ಪಂದ್ಯಗಳನ್ನು ಆಡಿದ ಶ್ರೇಯಸ್ ಗೋಪಾಲ್ 10 ವಿಕೆಟ್ ಕಬಳಿಸಿದರು. ಆದರೆ ಕಳೆದ ಆವೃತ್ತಿಯಲ್ಲಿ ಕೇವಲ 3 ಪಂದ್ಯಗಳನ್ನು ಆಡಿರುವ ಶ್ರೇಯಸ್ ಗೋಪಾಲ್ ವಿಕೆಟ್ ಕಬಳಿಸಲು ಸಾಧ್ಯವಾಗಿಲ್ಲ.

ಮತ್ತೊರ್ವ ಕನ್ನಡಿಗ ಜೆ ಸುಚಿತ್ 20 ಲಕ್ಷ ರೂಪಾಯಿ ಮೂಲ ಬೆಲೆಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿದೆ.ಜಗದೀಶಾ ಸುಚಿತ್ 2015ರಲ್ಲಿ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಮೂಲಕ ಐಪಿಎಲ್‌ಗೆ ಎಂಟ್ರಿಕೊಟ್ಟ ಜಗದೀಶ್ ಕಳೆದ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರರ ಆಡಿದ್ದರು. ಐಪಿಎಲ್ ಟೂರ್ನಿಯಲ್ಲಿ ಒಟ್ಟು 17 ಪಂದ್ಯಗಳನ್ನು ಆಡಿರುವ ಸುಚಿತ್ 52 ಓವರ್ ಬೌಲಿಂಗ್ ಮಾಡಿದ್ದಾರೆ. ಈ ಮೂಲಕ 13 ವಿಕೆಟ್ ಕಬಳಿಸಿದ್ದಾರೆ. ಸುಚಿತ್ ಪ್ರತಿಭಾನ್ವಿತ ಬೌಲರ್ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ 2015ರಲ್ಲಿ ಸುಚಿತ್‌ಗೆ ಹೆಚ್ಚಿನ ಅವಕಾಶ ಸಿಕ್ಕಿತ್ತು. 13 ಐಪಿಎಲ್ ಪಂದ್ಯಗಳನ್ನು ಆಡಿ 10 ವಿಕೆಟ್ ಕಬಳಿಸಿದ್ದರು. ಆದರೆ ಉಳಿದ ಆವೃತ್ತಿಗಳಲ್ಲಿ ಸುಚಿತ್‌ಗೆ ಅಕಾಶವೇ ಸಿಗಲಿಲ್ಲ. 2016ರಲ್ಲಿ ಒಂದು ಪಂದ್ಯ, 2019ರಲ್ಲಿ 1 ಪಂದ್ಯ ಹಾಗೂ ಕಳೆದ ಆವತ್ತಿಯಲ್ಲಿ ಕೇವಲ 2 ಪಂದ್ಯ ಆಡಿದ್ದಾರೆ.

