IPL Auction 2022: ಎರಡನೇ ದಿನ ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳ ಬಳಿ ಉಳಿದಿರುವ ಹಣವೆಷ್ಟು..?
ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ ಆಟಗಾರರ ಮೆಗಾ (IPL Mega Auction) ಹರಾಜಿಗೆ ಭರ್ಜರಿ ಚಾಲನೆ ಸಿಕ್ಕಿದ್ದು, ಎಲ್ಲಾ 10 ಫ್ರಾಂಚೈಸಿಗಳು ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಿದೆ. ಮೊದಲ ದಿನವೇ 97 ಆಟಗಾರರ ಹರಾಜು ನಡೆಯಿತು. ಈ ಪೈಕಿ 74 ಆಟಗಾರರು ವಿವಿಧ ಫ್ರಾಂಚೈಸಿಗಳ ತೆಕ್ಕೆಗೆ ಜಾರಿದರು. ಮೊದಲ ದಿನದ ಹರಾಜಿನ ಬಳಿಕ ಯಾವ ಫ್ರಾಂಚೈಸಿಯ ಪರ್ಸ್‌ನಲ್ಲಿ ಎಷ್ಟು ಹಣ ಉಳಿದಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
1. ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಕಗಿಸೋ ರಬಾಡ, ಶಾರುಕ್ ಖಾನ್ ಸೇರಿದಂತೆ ಒಟ್ಟು 9 ಆಟಗಾರರನ್ನು ಖರೀದಿದ್ದು, ಇನ್ನೂ ಖಾತೆಯಲ್ಲಿ 28. 65 ಕೋಟಿಗಳನ್ನು ಉಳಿಸಿಕೊಂಡಿದೆ.
2. ಮುಂಬೈ ಇಂಡಿಯನ್ಸ್
ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಮೊದಲ ದಿನ ಇಶಾನ್ ಕಿಶನ್ ಸೇರಿದಂತೆ ಕೇವಲ 4 ಆಟಗಾರರನ್ನು ಮಾತ್ರ ಖರೀದಿಸಿದ್ದು, ಇನ್ನೂ ಖಾತೆಯಲ್ಲಿ 27.85 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.
3. ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಫ್ರಾಂಚೈಸಿಯು ತನ್ನ ಮಾಜಿ ಆಟಗಾರರಾದ ರಾಯುಡು, ದೀಪಕ್ ಚಹರ್, ಉತ್ತಪ್ಪ, ಬ್ರಾವೋ ಸೇರಿದಂತೆ 6 ಆಟಗಾರರನ್ನು ಖರೀದಿಸಿದ್ದು, ಇನ್ನೂ ಖಾತೆಯಲ್ಲಿ 20.45 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ
4. ಸನ್‌ರೈಸರ್ಸ್ ಹೈದರಾಬಾದ್
ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ನಿಕೋಲಸ್ ಪೂರನ್ ಸೇರಿದಂತೆ ಮೊದಲ ದಿನ 10 ಆಟಗಾರರನ್ನು ಖರೀಸಿದ್ದು, ಇನ್ನೂ ಪರ್ಸ್‌ನಲ್ಲಿ ಎರಡನೇ ದಿನದ ಹರಾಜಿಗೆ ಆಟಗಾರರನ್ನು ಖರೀದಿಸಲು 20.15 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ
5. ಗುಜರಾತ್ ಟೈಟಾನ್ಸ್
ನೂತನ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ ಮೊದಲ ದಿನ ರಾಹುಲ್ ತೆವಾಟಿಯಾ, ಜೇಸನ್ ರಾಯ್ ಸೇರಿದಂತೆ 7 ಆಟಗಾರರನ್ನು ಖರೀದಿಸಿದ್ದು, ಇನ್ನೂ ಖಾತೆಯಲ್ಲಿ 18.85 ರುಪಾಯಿಗಳನ್ನು ಉಳಿಸಿಕೊಂಡಿದೆ.
6. ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್ ಮೊದಲ ದಿನ ಶಾರ್ದೂಲ್ ಠಾಕೂರ್, ಮಿಚೆಲ್ ಮಾರ್ಶ್ ಸೇರಿದಂತೆ 9 ಆಟಗಾರರನ್ನು ಖರೀದಿಸಿದ್ದು, ಇನ್ನೂ ಖಾತೆಯಲ್ಲಿ 16.50 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.
7. ಕೋಲ್ಕತಾ ನೈಟ್ ರೈಡರ್ಸ್:
ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೆಕೆಆರ್ ಮೊದಲ ದಿನದ ಹರಾಜಿನಲ್ಲಿ ಶ್ರೇಯಸ್ ಅಯ್ಯರ್, ಪ್ಯಾಟ್ ಕಮಿನ್ಸ್ ಸೇರಿದಂತೆ ಒಟ್ಟು 5 ಆಟಗಾರರನ್ನು ಖರೀದಿಸಿದ್ದು, ಎರಡನೇ ದಿನಕ್ಕೆ 12.65 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.
8. ರಾಜಸ್ಥಾನ ರಾಯಲ್ಸ್ :
ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಮೊದಲ ದಿನದ ಹರಾಜಿನಲ್ಲಿ ದೇವದತ್ ಪಡಿಕ್ಕಲ್, ಟ್ರೆಂಟ್ ಬೌಲ್ಟ್ ಸೇರಿದಂತೆ 10 ಆಟಗಾರರನ್ನು ಖರೀದಿಸಿದ್ದು, ಇನ್ನೂ ತನ್ನ ಖಾತೆಯಲ್ಲಿ 12.15 ರುಪಾಯಿಗಳನ್ನು ಉಳಿಸಿಕೊಂಡಿದೆ.
9. ರಾಯಲ್ ಚಾಲೆಂಜರ್ಸ್ ಬೆಂಗಳೂರು: 9.25
ಆರ್‌ಸಿಬಿ ಫ್ರಾಂಚೈಸಿಯು ಮೊದಲ ದಿನ ಹರ್ಷಲ್ ಪಟೇಲ್, ವನಿಂದು ಹಸರಂಗ, ಫಾಫ್ ಡು ಪ್ಲೆಸಿಸ್ ಸೇರಿದಂತೆ 8 ಆಟಗಾರರನ್ನು ಖರೀದಿಸಿದ್ದು, ಇನ್ನೂ ಖಾತೆಯಲ್ಲಿ ಎರಡನೇ ದಿನಕ್ಕೆ 9.25 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.
10. ಲಖನೌ ಸೂಪರ್ ಜೈಂಟ್ಸ್: 6.90
ನೂತನ ಫ್ರಾಂಚೈಸಿ ಲಖನೌ ಮೊದಲ ದಿನದ ಹರಾಜಿನಲ್ಲಿ ಮನೀಶ್ ಪಾಂಡೆ, ಜೇಸನ್ ಹೋಲ್ಡರ್ ಸೇರಿದಂತೆ 8 ಆಟಗಾರರನ್ನು ಖರೀದಿಸಿದ್ದು, ಇನ್ನು ಎರಡನೇ ದಿನಕ್ಕೆ ತನ್ನ ಪರ್ಸ್‌ನಲ್ಲಿ ಕೇವಲ 6.90 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.