* ಐಪಿಎಲ್ ಹರಾಜಿನಲ್ಲಿ ಹಲವು ಪ್ರತಿಭಾನ್ವಿತ ಆಟಗಾರರಿಗೆ ಜಾಕ್‌ಪಾಟ್* ಕಳೆದ ವರ್ಷ 20 ಲಕ್ಷ ಪಡೆದಿದ್ದ ಆಟಗಾರರಿಗೆ ಈ ಬಾರಿ ಕೋಟಿ ಕೋಟಿ ಲೆಕ್ಕದಲ್ಲಿ ಹರಾಜು* 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಪರ್ಪಲ್ ಪಟೇಲ್‌ 10.75 ಕೋಟಿ ರುಪಾಯಿಗೆ ಆರ್‌ಸಿಬಿ ಪಾಲು 

ಬೆಂಗಳೂರು(ಫೆ.13): ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ ಮೆಗಾ ಹರಾಜಿಗೆ ಶನಿವಾರ(ಫೆ.12) ಅದ್ಧೂರಿ ಚಾಲನೆ ಸಿಕ್ಕಿದ್ದು, ಮೊದಲ ದಿನವೇ ಹಲವು ಆಟಗಾರರಿಗೆ ಜಾಕ್‌ ಪಾಟ್‌ ಹೊಡಿದಿದೆ. ಕಳೆದ ಆವೃತ್ತಿಯಲ್ಲಿ ಮಿಂಚಿನ ಪ್ರದರ್ಶನ ತೋರಿದ ಹಲವು ಆಟಗಾರರು ಈ ಬಾರಿ ಕೋಟಿ-ಕೋಟಿ ರುಪಾಯಿಗಳನ್ನು ಬಾಚಿಕೊಂಡಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಲಕ್ಷದ ಬೆಲೆಯಲ್ಲಿ ತಂಡ ಕೂಡಿಕೊಂಡು ಅಮೋಘ ಪ್ರದರ್ಶನ ತೋರಿ ಈ ಬಾರಿ ಹುಬ್ಬೇರಿಸುವ ಮೊತ್ತಕ್ಕೆ ಹಲವು ಆಟಗಾರರು ಬಿಕರಿಯಾಗಿದ್ದಾರೆ.

ಹೌದು, ಕಳೆದ ಆವೃತ್ತಿಯಲ್ಲಿ 32 ವಿಕೆಟ್‌ ಕಬಳಿಸಿ ಪರ್ಪಲ್‌ ಕ್ಯಾಪ್‌ ಪಡೆದಿದ್ದ ಹರ್ಷಲ್‌ ಪಟೇಲ್‌ಗೆ (Harshal Patel) ಈ ವರ್ಷ ಭರ್ಜರಿ ಲಾಟರಿ ಹೊಡೆದಿದೆ. 2018ರಲ್ಲಿ ಹರ್ಷಲ್‌ರನ್ನು ಡೆಲ್ಲಿ ತಂಡ 20 ಲಕ್ಷಕ್ಕೆ ಖರೀದಿಸಿತ್ತು. ಕಳೆದ ವರ್ಷ ಹರಾಜಿಗೂ ಮುನ್ನ ಡೆಲ್ಲಿ ತಂಡ ಹರ್ಷಲ್‌ರನ್ನು ಆರ್‌ಸಿಬಿಗೆ (RCB) ಅದೇ ಮೊತ್ತಕ್ಕೆ ಮಾರಾಟ ಮಾಡಿತ್ತು. ಈ ವರ್ಷ ಹರಾಜಿಗೂ ಮುನ್ನ ಹರ್ಷಲ್‌ರನ್ನು ಉಳಿಸಿಕೊಳ್ಳದ ಆರ್‌ಸಿಬಿ, 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಅವರನ್ನು 10.75 ಕೋಟಿ ರು. ನೀಡಿ ಖರೀದಿ ಮಾಡಿದೆ.

ಆವೇಶ್‌ಗೆ 10 ಕೋಟಿ ರುಪಾಯಿ: ದುಬಾರಿ ಅನ್‌ಕ್ಯಾಪ್ಡ್‌ ಆಟಗಾರ!

ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡದಿದ್ದರೂ, ಐಪಿಎಲ್‌ ಸೇರಿ ದೇಸಿ ಟೂರ್ನಿಗಳಲ್ಲಿ ಮಿಂಚಿರುವ ಭಾರತದ ಯುವ ಆಟಗಾರರಿಗೆ ಹರಾಜಿನಲ್ಲಿ ಭಾರೀ ಬೇಡಿಕೆ ಕಂಡುಬಂತು. ಮಧ್ಯ ಪ್ರದೇಶದ ವೇಗಿ ಆವೇಶ್‌ ಖಾನ್‌ (Avesh Khan) ಬರೋಬ್ಬರಿ 10 ಕೋಟಿ ರು.ಗೆ ಲಖನೌ ಸೂಪರ್‌ ಜೈಂಟ್ಸ್‌ ತಂಡಕ್ಕೆ ಬಿಕರಿಯಾದರು. ಐಪಿಎಲ್‌ ಹರಾಜಿನಲ್ಲಿ ಅತಿ ದುಬಾರಿ ಮೊತ್ತಕ್ಕೆ ಬಿಕರಿಯಾದ ಅಂತಾರರಾಷ್ಟ್ರೀಯ ಕ್ರಿಕೆಟ್‌ ಆಡದ (ಅನ್‌ಕ್ಯಾಪ್ಡ್‌) ಆಟಗಾರ ಎನ್ನುವ ದಾಖಲೆ ಬರೆದರು. ಕೆ.ಗೌತಮ್‌ 2021ರ ಐಪಿಎಲ್‌ನಲ್ಲಿ 9.25 ಕೋಟಿ ರುಪಾಯಿಗೆ ಬಿಕರಿಯಾಗಿದ್ದು ದಾಖಲೆ ಎನಿಸಿತ್ತು. 

IPL Auction 2022 : ಈ ಟೀಮ್ ಕಟ್ಕೊಂಡು IPL ಗೆಲ್ಲೋಕೆ ಆಗಲ್ಲ, ಕರ್ನಾಟಕ ಪ್ಲೇಯರ್ ಕಡೆಗಣಿಸಿದ RCB ವಿರುದ್ಧ ಫ್ಯಾನ್ಸ್ ಗರಂ

ರಾಹುಲ್ ಹೆಸರಿನ ಆಟಗಾರರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌

ಇನ್ನು ತಮಿಳುನಾಡಿನ ಶಾರುಖ್‌ ಖಾನ್‌ ಹಾಗೂ ಹರ್ಯಾಣದ ರಾಹುಲ್‌ ತೆವಾಟಿಯ ಕ್ರಮವಾಗಿ ಪಂಜಾಬ್‌ ಹಾಗೂ ಗುಜರಾತ್‌ಗೆ ತಲಾ 9 ಕೋಟಿ ರುಪಾಯಿಗೆ ಬಿಕರಿಯಾದರು. ರಾಹುಲ್‌ ತ್ರಿಪಾಠಿ (8.50 ಕೋಟಿ ರುಪಾಯಿ), ಅಭಿಷೇಕ್‌ ಶರ್ಮಾ(6.5 ಕೋಟಿ ರು.)ರನ್ನು ಹೈದಾರಾಬಾದ್‌ ಖರೀದಿಸಿದರೆ, ಶಿವಂ ಮಾವಿ 7.25 ಕೋಟಿ ರು.ಗೆ ಕೆಕೆಆರ್‌ಗೆ ಮರಳಿದರು.

ಭಾರತದ ಯುವ ಆಟಗಾರರಿಗೆ ಲಾಟರಿ!

ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡದಿದ್ದರೂ, ಐಪಿಎಲ್‌ ಸೇರಿ ದೇಸಿ ಟೂರ್ನಿಗಳಲ್ಲಿ ಮಿಂಚಿರುವ ಭಾರತದ ಯುವ ಆಟಗಾರರಿಗೆ ಹರಾಜಿನಲ್ಲಿ ಭಾರೀ ಬೇಡಿಕೆ ಕಂಡುಬಂತು. ತಮಿಳುನಾಡಿನ ಶಾರುಖ್‌ ಖಾನ್‌ ಹಾಗೂ ಹರ್ಯಾಣದ ರಾಹುಲ್‌ ತೆವಾಟಿಯ, ಐಪಿಎಲ್‌ ಹರಾಜಿನಲ್ಲಿ ದುಬಾರಿ ಮೊತ್ತ ಪಡೆದ ಅಂ.ರಾ.ಕ್ರಿಕೆಟ್‌ ಆಡದ (ಅನ್‌ಕ್ಯಾಪ್‌್ಡ) ಆಟಗಾರರು ಎನ್ನುವ ದಾಖಲೆ ಬರೆದರು.

IPL Auction 2022 ಹರಾಜಿನಲ್ಲಿ ಕನ್ನಡಿಗರಿಗೆ ಭಾರಿ ಬೇಡಿಕೆ, ಎಲ್ಲರೂ ಸೋಲ್ಡ್!

ಇವರಿಬ್ಬರೂ ಕ್ರಮವಾಗಿ ಪಂಜಾಬ್‌ ಹಾಗೂ ಗುಜರಾತ್‌ಗೆ ತಲಾ 9 ಕೋಟಿ ರು.ಗೆ ಬಿಕರಿಯಾದರು. ಇನ್ನು, ರಾಹುಲ್‌ ತ್ರಿಪಾಠಿ (8.50 ಕೋಟಿ ರು.), ಅಭಿಷೇಕ್‌ ಶರ್ಮಾ(6.5 ಕೋಟಿ ರು.)ರನ್ನು ಹೈದಾರಾಬಾದ್‌ ಖರೀದಿಸಿದರೆ, ಶಿವಂ ಮಾವಿ 7.25 ಕೋಟಿ ರು.ಗೆ ಕೆಕೆಆರ್‌ಗೆ ಮರಳಿದರು.