ಮತ್ತೊಮ್ಮೆ ಕರ್ನಾಟಕ ಪ್ಲೇಯರ್ ಅನ್ನು ಕಡೆಗಣಿಸಿದ ಆರ್ ಸಿಬಿಕೋರ್ ಟೀಮ್ ಪ್ಲೇಯರ್ಸ್ ಆಯ್ಕೆಯಲ್ಲೂ ವಿಫಲಸಾಮಾಜಿಕ ಜಾಲತಾಣದಲ್ಲಿ ಆರ್ ಸಿಬಿ ಥಿಂಕ್ ಟ್ಯಾಂಕ್ ಬಗ್ಗೆ ಟೀಕೆ 

ಬೆಂಗಳೂರು (ಫೆ.12): ಮಾಜಿ ಚಾಂಪಿಯನ್ ಗಳಾದ ಮುಂಬೈ ಇಂಡಿಯನ್ಸ್ (Mumbai Indians) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಗಳು ತೀರಾ ಎಚ್ಚರಿಕೆಯಲ್ಲಿ ಐಪಿಎಲ್ ಹರಾಜಿನಲ್ಲಿ(IPL Auction 2022) ಪ್ಲೇಯರ್ ಗಳನ್ನು ಆಯ್ಕೆ ಮಾಡಿಕೊಂಡರೆ, ಆರ್ ಸಿಬಿ (RCB) ತಂಡದ ಆಯ್ಕೆಗಳ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಒಂದೆಡೆ ಈಗಾಗಲೇ ತಂಡದಲ್ಲಿದ್ದ ಪ್ಲೇಯರ್ ಗಳನ್ನು ಉಳಿಸಿಕೊಳ್ಳಲು ತಂಡ ವಿಫಲವಾಗಿದ್ದು ಮಾತ್ರವಲ್ಲದೆ ಸ್ಥಳೀಯ ಕರ್ನಾಟಕದ ಆಟಗಾರರನ್ನು ಆಯ್ಕೆ ಮಾಡಲು ಆರ್ ಸಿಬಿ ವಿಫಲವಾಗಿದ್ದು ಇನ್ನೊಂದು ಕಾರಣವಾಗಿದೆ.

ಇದರ ಬೆನ್ನಲ್ಲಿಯೇ ಆರ್ ಸಿಬಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿದೆ. ಮನಿಧನ್ (@Manidhan027) ಎನ್ನುವ ಅಭಿಮಾನಿ ಈ ಕುರಿತಾಗಿ ಟ್ವೀಟ್ ಮಾಡಿದ್ದು, "ಆರ್ ಸಿಬಿಯ ಈವರೆಗಿನ ಅತ್ಯಂತ ಕೆಟ್ಟ ಐಪಿಎಲ್ ಹರಾಜು ಇದಾಗಿದೆ. ಇಂಥ ಟೀಮ್ ಕಟ್ಕೊಂಡು ಮುಂದಿನ ಮೂರು ವರ್ಷದಲ್ಲೂ ಐಪಿಎಲ್ ಕಪ್ ಗೆಲ್ಲೋಕೆ ಆಗಲ್ಲ' ಎಂದು ಟ್ವೀಟ್ ಮಾಡಿದ್ದಾರೆ.

ರಾಜ್ಯ ತಂಡದ ಪ್ರಮುಖ ಪ್ಲೇಯರ್ ಗಳಾದ ಮನೀಷ್ ಪಾಂಡೆ (Manish Pandey), ಪ್ರಸಿದ್ಧಕೃಷ್ಣ (Prasidh Krishna) ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಆದರೆ, ಈ ಇಬ್ಬರೂ ಪ್ಲೇಯರ್ ಗಳಿಗೆ ಹರಾಜಿನಲ್ಲಿದ್ದ ಬಹುತೇಕ ತಂಡಗಳು ಆಸಕ್ತಿ ತೋರಿಸಿದರೆ, ಆರ್ ಸಿಬಿ ಮಾತ್ರ ಕನಿಷ್ಠ ಬಿಡ್ ಕೂಡ ಮಾಡಲಿಲ್ಲ. ಇನ್ನೊಂದೆಡೆ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದ ಅಭಿನವ್ ಮನೋಹರ್ (Abhinav Manohar) ಅವರನ್ನು ಗುಜರಾತ್ ಟೈಟಾನ್ಸ್ ತಂಡ 2.6 ಕೋಟಿ ರೂಪಾಯಿಗೆ ಖರೀದಿ ಮಾಡಿತು. ಆದರೆ, ಸ್ಥಳೀಯ ತಂಡವಾಗಿದ್ದ ಆರ್ ಸಿಬಿಗೆ ಅಭಿನವ್ ಮನೋಹರ್ ನಂಥ ಆಟಗಾರನ ಮೌಲ್ಯ ಅರ್ಥವಾಗಲಿಲ್ಲ.

Scroll to load tweet…

IPL Auction 2022 ಕನ್ನಡಿಗ ಅಭಿನವ್‌ಗೆ ಜಾಕ್‌ಪಾಟ್, 2.6 ಕೋಟಿಗೆ ಗುಜರಾತ್ ಪಾಲು!
ಇನ್ನೊಂದೆಡೆ ಈಗಾಗಲೇ ಆರ್ ಸಿಬಿ ತಂಡದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ದೇವದತ್ ಪಡಿಕ್ಕಲ್ ರನ್ನು(Devdutt Padikkal) ಆರ್ ಸಿಬಿ ಖರೀದಿ ಮಾಡೇ ಮಾಡುತ್ತದೆ ಎಂದು ಅಂದಾಜು ಮಾಡಲಾಗಿತ್ತು. ಉತ್ತಮ ನಿರ್ವಹಣೆ ತೋರಿದ್ದ ದೇವದತ್ ಪಡಿಕ್ಕಲ್ ಅವರ ಹೆಸರು ಹರಾಜಿನಲ್ಲಿ ಬಂದಾಗ ಹುಮ್ಮಸ್ಸಿನಿಂದಲೇ ಬಿಡ್ ಮಾಡಿದ ಆರ್ ಸಿಬಿ ಆಮೇಲೆ ಮಂಕಾಯಿತು. ಕೊನೆಗೆ 10 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ತಂಡದ ಪಾಲಾದರು. ಕೋರ್ ಟೀಮ್ ಪ್ಲೇಯರ್ ನ ಉಳಿಸಿಕೊಳ್ಳುವಲ್ಲಿ ಆರ್ ಸಿಬಿ ಇಲ್ಲಿ ಎಡವಿತು. ಇನ್ನೊಂದೆಡೆ, ಮುಂಬೈ ಇಂಡಿಯನ್ಸ್ ತಂಡ ತನ್ನ ಐಪಿಎಲ್ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಶಾನ್ ಕಿಶನ್ ಅವರ ಆಯ್ಕೆ ವೇಳೆ ಆರಂಭದಿಂದಲೂ ಬಿಡ್ ಮಾಡಿದ ಮುಂಬೈ, ದಾಖಲೆಯ ಮೊತ್ತಕ್ಕೆ ಅವರನ್ನು ಖರೀದಿ ಮಾಡಿತು. ಹಲವು ತಂಡಗಳು ಈ ನಡುವೆ ಬಿಡ್ ಮಾಡಿದರೂ, ಮುಂಬೈ ತಲೆಕೆಡಿಸಿಕೊಂಡಿಲ್ಲ. ಆದರೆ, ಆರ್ ಸಿಬಿ ಮಾತ್ರ ಪಡಿಕ್ಕಲ್ ವಿಚಾರದಲ್ಲಿ ನೆಪ ಮಾತ್ರಕ್ಕೆ ಬಿಡ್ ಮಾಡಿ ಆಮೇಲೆ ಸುಮ್ಮನಾಯಿತು.

Scroll to load tweet…


IPL Auction 2022 ಯಜುವೇಂದ್ರ ಚಹಾಲ್ 8 ವರ್ಷದ ಆರ್‌ಸಿಬಿ ಪಯಣ ಅಂತ್ಯ, 6.5 ಕೋಟಿಗೆ ರಾಜಸ್ಥಾನ ಪಾಲು!
ಪಡಿಕ್ಕಲ್ ಮಾತ್ರವಲ್ಲ, ಚಾಹಲ್ ವಿಚಾರದಲ್ಲೂ ಆರ್ ಸಿಬಿ ಇದನ್ನೇ ಮಾಡಿತು. ಒಂದೆಡೆ ಚೆನ್ನೈ ಸೂಪರ್ ಕಿಂಗ್ಸ್, ಕಳೆದ ವರ್ಷ ತನ್ನ ಟೀಮ್ ನಲ್ಲಿದ್ದ ಆಟಗಾರರನ್ನೇ ಈ ಬಾರಿ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಪ್ಲ್ಯಾನ್ ನಲ್ಲಿ ಹೋರಾಟ ನಡೆಸಿದರೆ, ಆರ್ ಸಿಬಿ ವಿಚಾರದಲ್ಲಿ ಅಂಥ ಯಾವುದೇ ಪ್ಲ್ಯಾನ್ ಗಳು ಕಾಣಲಿಲ್ಲ. 

Scroll to load tweet…


ಈ ಎಲ್ಲಾ ವಿಚಾರಗಳಲ್ಲಿ ಆರ್ ಸಿಬಿ ತಂಡದ ಯೋಚನೆಗಳಿಗೆ ಅಭಿಮಾನಿಗಳು ಗರಂ ಆಗಿದ್ದಾರೆ. ಅದರಲ್ಲೂ ಅಭಿನವ್ ಮನೋಹರ್ ಅವರನ್ನು ಆಯ್ಕೆ ಮಾಡದ ವಿಚಾರಕ್ಕೆ ರಾಷ್ಟ್ರೀಯ ಮಹಿಳಾ ತಂಡದ ಆಟಗಾರ್ತಿ, ಕರ್ನಾಟಕದ ವೇದಾ ಕೃಷ್ಣಮೂರ್ತಿ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Scroll to load tweet…


"14 ವರ್ಷದಿಂದ ನಾನು ಆರ್ ಸಿಬಿ ಅಭಿಮಾನಿ, ಆದರೆ, ಇಂಥ ಕೆಟ್ಟ ಆಯ್ಕೆ ಎಂದೂ ನೋಡಿಲ್ಲ" ಎಂದು ಆಶೀಶ್ ಎನ್ನುವ ಅಭಿಮಾನಿ ಟ್ವೀಟ್ ಮಾಡಿದ್ದರೆ, ಆರ್ ಸಿಬಿ ಈಗ ತನ್ನ ಬಲಿ ಇರುವ 9 ಕೋಟಿಯಿಂದ 8 ಪ್ಲೇಯರ್ ಗಳನ್ನು ಆಯ್ಕೆ ಮಾಡಲೇಬೇಕಿದೆ. ಅವರ ಈ ತಂತ್ರ ನನಗೆ ಕುತೂಹಲ ಕೆರಳಿಸಿದೆ ಎಂದಿದ್ದಾರೆ. ಮೈದಾನದಲ್ಲಿ ಹೇಗೆ ಇರಲಿ, ಕೆಟ್ಟ ಹರಾಜಿನ ವಿಚಾರದಲ್ಲಿ ಆರ್ ಸಿಬಿ ಪ್ರತಿ ವರ್ಷವೂ ಒಳ್ಳೆ ಫಾರ್ಮ್ ನಲ್ಲಿರುತ್ತದೆ ಎಂದು ಅಭಿಮಾನಿಯೊಬ್ಬ ಬರೆದಿದ್ದಾನೆ.