IPL Auction ಪ್ರಕ್ರಿಯೆಗೆ ವೇದಿಕೆ ರೆಡಿಯಾಗಿದೆ. 8 ಫ್ರಾಂಚೈಸಿಗಳು ಹರಾಜಿನಲ್ಲಿ ಆಟಗಾರರನ್ನು ಖರೀದಿಸಲು ಸಜ್ಜಾಗಿದೆ. ಚೆನ್ನೈನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆ ಕೆಲವೇ ಕ್ಷಣಗಳಲ್ಲಿ ಹರಾಜು ಪ್ರಕ್ರಿಯೆ ಆರಂಭಗೊಳ್ಳುತ್ತಿದೆ. ಹೆಚ್ಚಿನ ವಿವರ ಇಲ್ಲಿದೆ.
ಚೆನ್ನೈ(ಫೆ.18): 2021ರ ಐಪಿಎಲ್ ಹರಾಜಿನಲ್ಲಿ 291 ಆಟಗಾರರು ಕಣದಲ್ಲಿದ್ದಾರೆ. ಇದೀಗ ಹೊಸ ಮಾರ್ಗಸೂಚಿಗಳ ಪ್ರಕಾರ ನಡೆಯುತ್ತಿರುವ ಐಪಿಲ್ ಹರಾಜು 2021ರ ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳುತ್ತಿದೆ. 8 ಫ್ರಾಂಚೈಸಿಗಳು ಚೆನ್ನೈನಲ್ಲಿ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿರುವ ಹರಾಜಿಗೆ ಹಾಜರಾಗಿದ್ದಾರೆ.
IPL Auction 2021 Live Updates: ಹರಾಜಿನ ಕ್ಷಣ ಕ್ಷಣದ ಮಾಹಿತಿ ನಿಮಗಾಗಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ರಿಕೆಟ್ ಆಪರೇಶನ್ ಹೆಡ್ ಮೈಕ್ ಹಸನ್, ದೊಡ್ಡ ಲಿಸ್ಟ್ ಹಿಡಿದು ಹಾಜರಾಗಿದ್ದಾರೆ. ಈ ಮೂಲಕ ಅಳದು ತೂಗಿ ಆಟಗಾರರನ್ನು ಖರೀದಿಸಲು ಆರ್‌ಸಿಬಿ ಸಜ್ಜಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಹೊಸ ಮಾರ್ಗಸೂಚಿಯಿಂತೆ ಮಾಸ್ ಹಾಕಿ, ಸಾಮಾಜಿಕ ಅಂತರ ಪಾಲಿಸಿಕೊಂಡು ಹರಾಜಿಗೆ ಹಾಜರಾಗಿದೆ. ಇತ್ತ ಕೆಕೆಆರ್ ಸೇರಿದಂತೆ ಎಲ್ಲಾ ಫ್ರಾಂಚೈಸಿ ಆಟಗಾರರ ಖರೀದಿಗೆ ಸಜ್ಜಾಗಿದೆ
