ಚೆನ್ನೈ(ಫೆ.18): ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇದೀಗ ಪಂಜಾಬ್ ಕಿಂಗ್ಸ್ ಆಗಿ ಬದಲಾಗಿದೆ. ಹೊಸ ಹೆಸರು, ಹೊಸ ಲೋಗೋದೊಂದಿದೆ ಕಣಕ್ಕಿಳಿಯುತ್ತಿರುವ ಪಂಜಾಬ್ ಕಿಂಗ್ಸ್ ಈ ಬಾರಿಯ ಆಕ್ಷನ್‌ನಲ್ಲಿ ಕೆಲ ಪ್ರಮುಖ ಆಟಗಾರರನ್ನು ಹಾಗೂ ತಂಡಕ್ಕೆ ಅವಶ್ಯಕತೆ ಇರುವ ಕ್ರಿಕೆಟಿಗರನ್ನು ಖರೀದಿಸಲು ಮುಂದಾಗಿದೆ. ಇದಕ್ಕಾಗಿ ಕೋಚ್ ಅನಿಲ್ ಕುಂಬ್ಳೆ ಡ್ರಾಫ್ಟ್ ಸಿದ್ದಪಡಿಸಿದ್ದಾರೆ.

ಐಪಿಎಲ್‌ ಹರಾಜಿನಿಂದ ಕೊನೆ ಕ್ಷಣದಲ್ಲಿ ಹಿಂದೆ ಸರಿದ ಇಂಗ್ಲೆಂಡ್‌ ಸ್ಟಾರ್ ಕ್ರಿಕೆಟಿಗ..!..

ಕೋಚ್ ಅನಿಲ್ ಕುಂಬ್ಳೆ ಈ ಬಾರಿಯ ಹರಾಜಿನಲ್ಲಿ ಮಾಜಿ ಟೇಮ್ ಮೇಟ್, ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಖರೀದಿಗೆ ಪ್ಲಾನ್ ಮಾಡಿದ್ದಾರೆ. ಟೀಂ ಇಂಡಿಯಾದಲ್ಲಿ ಅನಿಲ್ ಕುಂಬ್ಳೆ ಜೊತೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದ ಹರ್ಭಜನ್ ಸಿಂಗ್ ಖರೀದಿಗೆ ಕುಂಬ್ಳೆ ಒಲವು ತೋರಿದ್ದಾರೆ.

ಐಪಿಎಲ್ 2020ರಲ್ಲಿ ವೈಯುಕ್ತಿಕ ಕಾರಣ ನೀಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರಬಂದಿದ್ದ ಹರ್ಭಜನ್ ಸಿಂಗ್, ಈ ಬಾರಿಯ ಐಪಿಎಲ್ ಟೂರ್ನಿ ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದರು. ಸ್ಪಿನ್ನರ್ ಮೇಲೆ ಹೆಚ್ಚು ಒಲವು ಹೊಂದಿರುವ ಕುಂಬ್ಳೆ, ಟರ್ಭನೇಟರ್ ಖರೀದಿಸುವ ಎಲ್ಲಾ ಸಾಧ್ಯತೆ ಇದೆ.

2 ಕೋಟಿ ಮೂಲ ಬೆಲೆಯ ಹರ್ಭಜನ್ ಸಿಂಗ್ ಯಾವ ತಂಡಕ್ಕೆ, ಎಷ್ಟು ಮೊತ್ತಕ್ಕೆ ಬಿಕರಿಯಾಗಲಿದ್ದಾರೆ ಅನ್ನೋ ಕುತೂಹಲ ಇದೀಗ ಮನೆ ಮಾಡಿದೆ.