ಚೆನ್ನೈ(ಫೆ.18): ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಇಂಗ್ಲೆಂಡ್ ಕ್ರಿಕೆಟಿಗ ಮೊಯಿನ್ ಆಲಿ, ಈ ಬಾರಿಯ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ. ಸಿಎಸ್‌ಕೆ ತಂಡ ಬರೋಬ್ಬರಿ 7 ಕೋಟಿ ರೂಪಾಯಿ ನೀಡಿದ ಮೊಯಿನ್ ಆಲಿ ಖರೀದಿಸಿದ್ದಾರೆ.

IPL Auction 2021 Live Updates: ಮ್ಯಾಕ್ಸ್‌ವೆಲ್ ಖರೀದಿಗೆ ಬಿಗ್ ಫೈಟ್!.

ಇಂಗ್ಲೆಂಡ್ ಆಲ್ರೌಂಡರ್ ಮೋಯಿನ್ ಅಲಿ ಖರೀದಿಸಲು ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ನಡುವೆ ಭಾರೀ ಪೈಪೋಟಿ ನಡೆದಿತ್ತು. ಆದರೆ ಬಿಡ್ಡಿಂಗ್‌ನಲ್ಲಿ ಚೆನ್ನೈ ದುಬಾರಿ ಮೊತ್ತ ನೀಡಿ ಮೊಯಿನ್ ಆಲಿಯನ್ನು ಖರೀದಿಸಿದೆ.

ಇನ್ನು ಬಾಂಗ್ಲಾದೇಶ ಆಲ್ರೌಂಡರ್ ಶಕೀಬ್ ಅಲ್ ಹಸನ್ 3.20 ಕೋಟಿ ರುಪಾಯಿಗೆ ಕೋಲ್ಕತ ನೈಟ್‌ ರೈಡರ್ಸ್‌ ಪಾಲಾಗಿದ್ದಾರೆ.