ಫೆಬ್ರವರಿ 11ಕ್ಕೆ ಐಪಿಎಲ್ ಆಟಗಾರರ ಹರಾಜು..?
14ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಫೆಬ್ರವರಿ ಎರಡನೇ ವಾರದಲ್ಲಿ ಆಟಗಾರರ ಹರಾಜು ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜ.08): 2021ರ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಫೆಬ್ರವರಿ 11ರಂದು ನಡೆಯುವ ಸಾಧ್ಯತೆ ಇದೆ. ಹರಾಜು ನಡೆಯುವ ಸ್ಥಳವನ್ನು ಬಿಸಿಸಿಐ ಇನ್ನಷ್ಟೇ ಪ್ರಕಟಿಸಬೇಕಿದೆ.
ಇದೇ ವೇಳೆ ಉಳಿಸಿಕೊಳ್ಳಲು ಇಚ್ಛಿಸುವ ಹಾಗೂ ಕೈಬಿಡುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಎಲ್ಲ 8 ತಂಡಗಳಿಗೆ ಜ.21ರ ಗಡುವು ನೀಡಲಾಗಿದೆ. ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಆಟಗಾರರನ್ನು ಬದಲಿಸಿಕೊಳ್ಳಲು ಫೆ.4ರ ವರೆಗೂ ಸಮಯ ನೀಡಲಾಗಿದೆ ಎಂದು ಗುರುವಾರ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ತಿಳಿಸಿದರು.
RCB ತಂಡಕ್ಕೆ ಭಾವನಾತ್ಮಕ ವಿದಾಯ ಹೇಳಿದ ಡೇಲ್ ಸ್ಟೇನ್..!
14 ಆವೃತ್ತಿಯ ಐಪಿಎಲ್ ಆಯೋಜನೆ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಬ್ರಿಜೇಶ್ ಹಾಗೂ ಆಡಳಿತ ಮಂಡಳಿ ಸದಸ್ಯರು ಸಭೆ ನಡೆಸಿ ಚರ್ಚಿಸಿದ್ದು, ಈ ಬಾರಿ ಹರಾಜಿನಲ್ಲಿ ಆಟಗಾರರ ಖರೀದಿಗೆ ಹೆಚ್ಚುವರಿ ಮೊತ್ತ ಬಳಕೆಗೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ. ಹೀಗಾಗಿ ಈ ವರ್ಷವೂ ತಂಡವೂ ಆಟಗಾರರ ಖರೀದಿಗೆ ಒಟ್ಟಾರೆ 85 ಕೋಟಿ ರುಪಾಯಿ ಖರ್ಚು ಮಾಡಬಹುದಾಗಿದೆ. ತಂಡಗಳು ಉಳಿಸಿಕೊಳ್ಳುವ ಆಟಗಾರರ ಸಂಭಾವನೆಯೂ ಈ 85 ಕೋಟಿಯಲ್ಲೇ ಸೇರಿರಲಿದೆ. ಹೀಗಾಗಿ ಹರಾಜಿಗೂ ಮುನ್ನ ಕೆಲ ದುಬಾರಿ ಆಟಗಾರರನ್ನು ತಂಡಗಳು ಕೈಬಿಡುವ ಸಾಧ್ಯತೆ ಇದೆ.