ಚೆನ್ನೈ(ಫೆ.18):  ಈ ಬಾರಿಯ ಹರಾಜಿನಲ್ಲಿ ವಿದೇಶಿ ಕ್ರಿಕೆಟಿಗರ ಇನ್ನಿಲ್ಲದ ಬೇಡಿಕೆ ವ್ಯಕ್ತವಾಗುತ್ತಿದೆ. ಸದ್ಯ ದುಬಾರಿ ಮೊತ್ತಕ್ಕೆ ಸೇಲಾಗಿರುವ ಎಲ್ಲಾ ಆಟಗಾರರು ವಿದೇಶಿ ಕ್ರಿಕೆಟಿಗರಾಗಿದ್ದಾರೆ. ಕ್ರಿಸ್ ಮೊರಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ‌ಬಳಿಕ ಆಸ್ಟ್ರೇಲಿಯಾ ಕ್ರಿಕೆಟಿಗ ಜೇ ರಿಚರ್ಡ್ಸನ್‌ ದುಬಾರಿ ಮೊತ್ತಕ್ಕೆ ಸೇಲಾಗಿದ್ದಾರೆ.

IPL Auction 2021: ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಕ್ರಿಸ್ ಮೊರಿಸ್ ಸೇಲ್!

ಜೇ ರಿಚರ್ಡ್ಸನ್‌ಗೆ ಬರೋಬ್ಬರಿ 14 ಕೋಟಿ ರೂಪಾಯಿ ನೀಡಿದ  ಪಂಜಾಬ್ ಕಿಂಗ್ಸ್ ತಂಡ ಖರೀದಿ ಮಾಡಿದೆ.  ಜೇ ರಿಚರ್ಡ್‌ಸನ್‌ ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್  ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡ ಪ್ರಯತ್ನಿಸಿತ್ತು. ಆದರೆ ಪಂಜಾಬ್ ಬಡ್ಡಿಂಗ್ ಯಶಸ್ವಿಯಾಗಿಸಿತು.

ಇನ್ನು 1 ಕೋಟಿ ರುಪಾಯಿಗೆ ಬಾಂಗ್ಲಾದೇಶ ವೇಗಿ ಮುಷ್ತಾಫಿಜುರ್ ರಹೀಂ ರಾಜಸ್ಥಾನ ರಾಯಲ್ಸ್ ಪಾಲಾಗಿದ್ದಾರೆ. ಇನ್ನು ನ್ಯೂಜಿಲೆಂಡ್ ವೇಗಿ ಆ್ಯಡಂ ಮಿಲ್ನೆ 3.20 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.