ಧೋನಿ ನೇತೃತ್ವದ ಚೆನ್ನೈಗೆ ಪಂಜಾಬ್‌ ಕಿಂಗ್ಸ್‌ ಸವಾಲುದೊಡ್ಡ ಸೋಲಿನ ಆಘಾತದಿಂದ ಹೊರಬರಬೇಕಾದ ಒತ್ತಡಎರಡೂ ತಂಡಗಳು ಕಳೆದ ಪಂದ್ಯದಲ್ಲಿ ಸೋಲುಂಡಿವೆ

ಚೆನ್ನೈ(ಏ.30): ಪಂಜಾಬ್‌ ಕಿಂಗ್‌್ಸ ಹಾಗೂ ಚೆನ್ನೈ ಸೂಪರ್‌ ಕಿಂಗ್‌್ಸ ಎರಡೂ ತಂಡಗಳು ದೊಡ್ಡ ಸೋಲಿನ ಆಘಾತದಿಂದ ಹೊರಬರಬೇಕಾದ ಒತ್ತಡದಲ್ಲಿವೆ. 2 ದಿನಗಳ ಹಿಂದಷ್ಟೇ ಲಖನೌ ಸೂಪರ್ ಕಿಂಗ್ಸ್‌ ವಿರುದ್ಧ ಪಂಜಾಬ್‌ ಕಿಂಗ್ಸ್‌ 56 ರನ್‌ ಸೋಲು ಕಂಡರೆ, ಜೈಪುರದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಚೆನ್ನೈ 32 ರನ್‌ಗಳಿಂದ ಸೋಲುಂಡಿತ್ತು. ಹೀಗಾಗಿ ಈ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಲು ಎರಡೂ ತಂಡಗಳು ಕಾಯುತ್ತಿವೆ.

ತವರಿನಲ್ಲಿ ಆಡಲಿರುವ ಕಾರಣ ಚೆನ್ನೈ ಸೂಪರ್‌ ಸಹಜವಾಗಿಯೇ ಫೇವರಿಟ್‌ ಎನಿಸಿದ್ದು, ತನ್ನ ಸ್ಪಿನ್‌ ಬೌಲಿಂಗ್‌ ದಾಳಿಯಿಂದ ಪಂಜಾಬ್‌ ಕಿಂಗ್ಸ್‌ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಕಾಯುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಡೆವೊನ್‌ ಕಾನ್‌ವೇ, ಋತುರಾಜ್ ಗಾಯಕ್ವಾಡ್‌, ಅಜಿಂಕ್ಯ ರಹಾನೆ ಹಾಗೂ ಶಿವಂ ದುಬೆ ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಇನ್ನು ಇಂದಿನ ಪಂದ್ಯಕ್ಕೂ ಆಲ್ರೌಂಡರ್‌ಗಳಾದ ಬೆನ್‌ ಸ್ಟೋಕ್ಸ್‌ ಹಾಗೂ ದೀಪಕ್ ಚಹರ್ ಅಲಭ್ಯರಾಗುವುದು ದಟ್ಟವಾಗಿದೆ. ತುಷಾರ್ ದೇಶ್‌ಪಾಂಡೆ, ಮಹೀಶ್ ತೀಕ್ಷಣ, ಮತೀಶ್‌ ಪತಿರಣ ತಂಡದ ಟ್ರಂಪ್‌ ಕಾರ್ಡ್‌ ಬೌಲರ್ ಎನಿಸಿದ್ದಾರೆ.

ಇನ್ನು ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್‌ ತಂಡವು ಪ್ರಭ್‌ಸಿಮ್ರನ್ ಸಿಂಗ್, ಅಥರ್ವ ಟೈಡೆ, ಶಿಖರ್ ಧವನ್, ಸಿಕಂದರ್ ರಾಜಾ, ಲಿಯಾಮ್‌ ಲಿವಿಂಗ್‌ಸ್ಟೋನ್‌ ಬ್ಯಾಟಿಂಗ್‌ ಆಧಾರಸ್ತಂಭ ಎನಿಸಿದ್ದಾರೆ. ಬೌಲಿಂಗ್‌ನಲ್ಲಿ ಆರ್ಶದೀಪ್ ಸಿಂಗ್, ಕಗಿಸೋ ರಬಾಡ, ಹಪ್ರೀತ್ ಬ್ರಾರ್, ರಾಹುಲ್‌ ಚಹರ್‌ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

IPL 2023: ಡೆಲ್ಲಿ ವಿರುದ್ಧ ಸತತ ಐದು ಪಂದ್ಯಗಳ ಸೋಲಿನ ಬಳಿಕ ಗೆಲುವು ಕಂಡ ಸನ್‌ರೈಸರ್ಸ್‌!

ಐಪಿಎಲ್‌ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಒಟ್ಟು 27 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಕೊಂಚ ಮೇಲುಗೈ ಸಾಧಿಸಿದೆ. 27 ಪಂದ್ಯಗಳ ಪೈಕಿ ಸಿಎಸ್‌ಕೆ ತಂಡವು 15 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಪಂಜಾಬ್ ಕಿಂಗ್ಸ್‌ ತಂಡವು 12 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ ಸೂಪರ್ ಕಿಂಗ್ಸ್‌: ಡೆವೊನ್‌ ಕಾನ್‌ವೇ, ಋುತುರಾಜ್‌ ಗಾಯಕ್ವಾಡ್‌, ಅಜಿಂಕ್ಯ ರಹಾನೆ, ಮೋಯಿನ್‌ ಅಲಿ, ಶಿವಂ ದುಬೆ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂ ಎಸ್ ಧೋನಿ(ನಾಯಕ), ಮತೀಶ್‌ ಪತಿರನ, ತುಷಾರ್‌ ದೇಶಪಾಂಡೆ, ಮಹೀಶ್ ತೀಕ್ಷಣ, ಆಕಾಶ್‌ ಸಿಂಗ್.

ಪಂಜಾಬ್‌ ಕಿಂಗ್ಸ್‌: ಶಿಖರ್ ಧವನ್‌(ನಾಯಕ), ಪ್ರಭ್‌ಸಿಮ್ರನ್‌ ಸಿಂಗ್, ಅಥರ್ವ ಟೈಡೆ, ಸಿಕಂದರ್‌ ರಾಜಾ, ಲಿವಿಂಗ್‌ ಲಿವಿಂಗ್‌ಸ್ಟೋನ್‌, ಸ್ಯಾಮ್‌ ಕರ್ರನ್‌, ಜಿತೇಶ್‌ ಶರ್ಮಾ, ಶಾರುಖ್‌ ಖಾನ್‌, ಕಗಿಸೋ ರಬಾಡ, ರಾಹುಲ್‌ ಚಹರ್‌, ಹಪ್ರೀತ್‌ ಬ್ರಾರ್‌, ಆರ್ಶದೀಪ್‌ ಸಿಂಗ್‌.

ಪಂದ್ಯ: ಮಧ್ಯಾಹ್ನ 3.30ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್‌

ಚೆಪಾಕ್‌ ಕ್ರೀಡಾಂಗಣದ ಪಿಚ್‌ ಸ್ಪಿನ್‌ ಸ್ನೇಹಿಯಾಗಿದ್ದು, ಇಲ್ಲಿ ಕಳೆದೆರಡು ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗಿಲ್ಲ. ಅಲ್ಲದೇ ಈ ಆವೃತ್ತಿಯಲ್ಲಿ ಇಲ್ಲಿ ಮೊದಲ ಮಧ್ಯಾಹ್ನದ ಪಂದ್ಯ. ಮಳೆ ಸಂಭವವೂ ಇದ್ದು, ಟಾಸ್‌ ನಿರ್ಣಾಯಕವಾಗಬಹುದು.