ಐಪಿಎಲ್ 2023ಯ 40ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 9 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದೆ. ಇದು ಐಪಿಎಲ್‌ನಲ್ಲಿ ಡೆಲ್ಲಿ ವಿರುದ್ಧ ಸತತ ಐದು ಪಂದ್ಯಗಳ ಸೋಲಿನ ಬಳಿಕ ಸನ್‌ರೈಸರ್ಸ್ ತಂಡದ ಮೊದಲ ಗೆಲುವು ಎನಿಸಿದೆ.
ನವದೆಹಲಿ (ಏ.29): ಐಪಿಎಲ್ 2023ಯ 40ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 9 ರನ್‌ಗಳಿಂದ ಸೋಲಿಸಿದೆ. ಡೆಲ್ಲಿ ವಿರುದ್ಧ ಸತತ 5 ಸೋಲಿನ ನಂತರ ಹೈದರಾಬಾದ್‌ಗೆ ಇದು ಮೊದಲ ಗೆಲುವು ಎನಿಸಿದೆ. ದೆಹಲಿ ತಂಡದ ತವರು ಮೈದಾನದಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್‌ರೈಸರ್ಸ್ ಗೆಲುವು ಕಂಡಿದೆ. ಇದು ಹಾಲಿ ಋತುವಿನಲ್ಲಿ ಸನ್‌ರೈಸರ್ಸ್ ತಂಡದ ಮೂರನೇ ಗೆಲುವಾಗಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರನೇ ಸೋಲು ಎನಿಸಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 197 ರನ್ ಗಳಿಸಿತು. 198 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಬ್ಯಾಟ್ಸ್‌ಮನ್‌ಗಳು 20 ಓವರ್‌ಗಳಲ್ಲಿ 6 ವಿಕೆಟ್‌ಗೆ 188 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. 198 ರನ್ಗ್ಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ ಮೊದಲ ಓವರ್‌ನಲ್ಲಿಯೇ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡಿತು. ಆದರೆ, ಆ ನತರ ಫಿಲಿಪ್ ಸಾಲ್ಟ್ ಹಾಗೂ ಮಿಚೆಲ್ ಮಾರ್ಷ್ 2ನೇ ವಿಕೆಟ್‌ಗೆ ಅಮೂಲ್ಯ 112 ರನ್‌ಗಳ ಜೊತೆಯಾಟವಾಡಿದರು. ಪ್ರತಿ ಓವರ್‌ಗೆ 10ಕ್ಕೂ ಹೆಚ್ಚಿನ ರನ್‌ರೇಟ್‌ನಲ್ಲಿ ಇವರು ಸ್ಕೋರ್ ಮಾಡಿದರು. ಆದರೆ, 12ನೇ ಓವರ್ ನಲ್ಲಿ ಮಯಾಂಕ್ ಮಾರ್ಕಂಡೆ ತಮ್ಮದೇ ಬೌಲಿಂಗ್ ನಲ್ಲಿ ಅದ್ಭುತ ಕ್ಯಾಚ್ ಪಡೆದು ಸಾಲ್ಟ್ ರನ್ನು ಪೆವಿಲಿಯನ್ ಗೆ ಕಳುಹಿಸಿದರು. ಸಾಲ್ಟ್ ನಂತರ, ಡೆಲ್ಲಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. 14 ನೇ ಓವರ್‌ನಲ್ಲಿ ಮಾರ್ಷ್ ಕೂಡ ಔಟಾಗಿದ್ದರಿಂದ ಡೆಲ್ಲಿ ತಂಡವು ಗುರಿಯಿಂದ 9 ರನ್‌ಗಳ ಅಂತರದಿಂದ ದೂರವುಳಿಯಿತು.
