ಕೆಕೆಆರ್ ವಿರುದ್ಧ ೧೧೧ ರನ್ ಗಳಿಸಿದ ಪಂಜಾಬ್, ಐಪಿಎಲ್ ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತ ರಕ್ಷಿಸಿಕೊಂಡ ದಾಖಲೆ ನಿರ್ಮಿಸಿತು. ಚಹಲ್ (೪-೨೮) ಮತ್ತು ಯಾನ್ಸನ್ (೩-೧೭) ಮಾರಕ ದಾಳಿಗೆ ಕೆಕೆಆರ್ ೯೫ಕ್ಕೆ ಆಲೌಟ್. ಪಂಜಾಬ್ ೨ ಅಂಕ ಗಳಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ರಾಣಾ ಕೆಕೆಆರ್ ಪರ ೩ ವಿಕೆಟ್ ಪಡೆದರು.
ಮುಲ್ಲಾನ್‌ಪುರ: ಕಳೆದ ವರ್ಷ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ವಿರುದ್ಧ ಆಡಿದಾಗ, ಐಪಿಎಲ್ ಇತಿಹಾಸದಲ್ಲೇ ಅತಿದೊಡ್ಡ ಮೊತ್ತವನ್ನು ಬೆನ್ನತ್ತಿ ಗೆದ್ದ ದಾಖಲೆ ಬರೆದಿದ್ದ ಪಂಜಾಬ್ ಕಿಂಗ್ಸ್, ಈ ಬಾರಿ ಐಪಿಎಲ್ ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತವನ್ನು ರಕ್ಷಿಸಿಕೊಂಡ ದಾಖಲೆ ನಿರ್ಮಿಸಿದೆ.
ಮಂಗಳವಾರ ನವ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಪಂಜಾಬ್, ಬ್ಯಾಟಿಂಗ್ ವೈಫಲ್ಯದಿಂದಾಗಿ 15.3 ಓವರಲ್ಲಿ 111 ರನ್‌ಗೆ ಆಲೌಟ್ ಆಯಿತು. ಸುಲಭ ಗುರಿ ಬೆನ್ನತ್ತಿದ ಹಾಲಿ ಚಾಂಪಿಯನ್ ಕೆಕೆಆರ್, ಪಂಜಾಬ್‌ನ ಮನಮೋಹಕ ಬೌಲಿಂಗ್ ದಾಳಿ ಎದುರು, 15.1 ಓವರಲ್ಲಿ ಕೇವಲ 95 ರನ್‌ಗೆ ಆಲೌಟ್ ಆಯಿತು. ಇದರ ಫಲವಾಗಿ, ಪಂಜಾಬ್ 2 ಅಂಕ ಸಂಪಾದಿಸಿ, ತನ್ನ ಒಟ್ಟು ಅಂಕ ಗಳಿಕೆಯನ್ನು 8ಕ್ಕೆ ಹೆಚ್ಚಿಸಿಕೊಂಡಿತು. ಅಲ್ಲದೇ, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು.
ಐಪಿಎಲ್ 2025: ಪಂಜಾಬ್ ಕಿಂಗ್ಸ್‌ಗೆ ಬಿಗ್ ಶಾಕ್; ಸ್ಟಾರ್ ಕ್ರಿಕೆಟಿಗ ಟೂರ್ನಿಯಿಂದ ಔಟ್
ಸ್ಫೋಟಕ ಆರಂಭ: ಪ್ರಿಯಾನ್ಶ್ ಆರ್ಯಾ (22) ಹಾಗೂ ಪ್ರಭ್‌ಸಿಮ್ರನ್ ಸಿಂಗ್ (30) ಮೊದಲ ವಿಕೆಟ್‌ಗೆ 39 ರನ್ ಸೇರಿಸಿದರು. ಆದರೆ ಇವರಿಬ್ಬರ ಜೊತೆಯಾಟವನ್ನು ಮುರಿದಿದ್ದು ವೇಗಿ ಹರ್ಷಿತ್ ರಾಣಾ. ಶ್ರೇಯಸ್ ಅಯ್ಯರ್ (0), ಜೋಶ್ ಇಂಗ್ಲಿಸ್ (2) ಸಹ ಬೇಗನೆ ಔಟಾದರು. ದಿಢೀರನೆ ಪಂಜಾಬ್ 54 ರನ್‌ಗೆ 4 ವಿಕೆಟ್ ಕಳೆದುಕೊಂಡಿತು. 86 ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದ ತಂಡ, ಚೇತರಿಕೆ ಕಾಣುವುದು ಕಷ್ಟ ಎನಿಸಿತ್ತು.
ಕೆಳ ಕ್ರಮಾಂಕದ ಬ್ಯಾಟರ್‌ಗಳು ಸಹ ದೊಡ್ಡ ಕೊಡುಗೆ ನೀಡಲಿಲ್ಲ. ಆದರೂ, ಶಶಾಂಕ್ ಸಿಂಗ್ (18) ಹಾಗೂ ಕ್ಸೇವಿಯರ್ ಬಾರೆಟ್ (11)ರ ಹೋರಾಟದದಿಂದ ತಂಡದ ಮೊತ್ತ 100 ರನ್ ದಾಟಿತು. ಕೆಕೆಆರ್ ಪರ ಹರ್ಷಿತ್ ರಾಣಾ 3 ವಿಕೆಟ್ ಪಡೆದರೆ, ಮಿಸ್ಟ್ರಿ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಹಾಗೂ ಸುನಿಲ್ ನರೈನ್ ತಲಾ ಎರಡು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ಲಖನೌ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ! ಬ್ಯಾನ್ ಮಾಡಲು ಆಗ್ರಹ
ದಿಢೀರ್ ಕುಸಿತ: ಸುಲಭ ಗೆಲುವು ಸಾಧಿಸಲು ಕಣಕ್ಕಿಳಿದ ಕೆಕೆಆರ್, ಮೊದಲ ಓವರಲ್ಲೇ ಸುನಿಲ್ ನರೈನ್ ವಿಕೆಟ್ ಕಳೆದುಕೊಂಡಿತು. 3ನೇ ಓವರಲ್ಲಿ ಕ್ವಿಂಟನ್ ಡಿ ಕಾಕ್ ವಿಕೆಟ್ ಕಳೆದುಕೊಂಡ ಕೆಕೆಆರ್‌ಗೆ ಆಸರೆಯಾಗಿದ್ದು, ಅಜಿಂಕ್ಯ ರಹಾನೆ (17) ಹಾಗೂ ಅಂಗ್‌ಕೃಷ್ ರಘುವಂಶಿ (37). ಆದರೂ, ವಿಕೆಟ್‌ಗಳನ್ನು ಕಾಪಾಡಿಕೊಳ್ಳಲು ಕೆಕೆಆರ್ ವಿಫಲವಾಯಿತು. 15 ಓವರಲ್ಲಿ ತಂಡದ ಇನ್ನಿಂಗ್ಸ್ ಮುಕ್ತಾಯಗೊಂಡಿತು.
ಪಂಜಾಬ್ ಕಿಂಗ್ಸ್ ಪರ ಆರಂಭಿಕ ಪಂದ್ಯಗಳಲ್ಲಿ ಬೌಲಿಂಗ್ ವೈಫಲ್ಯ ಅನುಭವಿಸಿದ್ದ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್, ಕೆಕೆಆರ್ ಎದುರು ತಾವೆಷ್ಟು ಅಪಾಯಕಾರಿ ಟಿ20 ಬೌಲರ್ ಎನ್ನುವುದನ್ನು ಮತ್ತೊಮ್ಮೆ ನೆನಪಿಸಿಕೊಟ್ಟರು. ಶಿಸ್ತುಬದ್ದ ದಾಳಿ ನಡೆಸಿದ ಚಹಲ್ 4 ಓವರ್‌ನಲ್ಲಿ ಕೇವಲ 28 ರನ್ ನೀಡಿ ಕೆಕೆಆರ್‌ನ ಪ್ರಮುಖ 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇನ್ನು ದಕ್ಷಿಣ ಆಫ್ರಿಕಾ ಮೂಲದ ಎಡಗೈ ವೇಗಿ ಮಾರ್ಕೊ ಯಾನ್ಸೆನ್ ಮೂರು ವಿಕೆಟ್ ಕಬಳಿಸುವ ಮೂಲಕ ಹಾಲಿ ಚಾಂಪಿಯನ್ ಕೆಕೆಆರ್‌ಗೆ ಸೋಲಿನ ಕಹಿಯುಣಿಸುವಲ್ಲಿ ಯಶಸ್ವಿಯಾದರು.
ಅತಿಕಡಿಮೆ ಸ್ಕೋರ್ ರಕ್ಷಿಸಿಕೊಂಡ ತಂಡ
ತಂಡ ಸ್ಕೋರ್ ವಿರುದ್ಧ ವರ್ಷ
ಪಂಜಾಬ್ 111 ಕೆಕೆಆರ್ 2025
ಚೆನ್ನೈ 116 ಪಂಜಾಬ್ 2009
ಸನ್‌ರೈಸರ್ಸ್ 118 ಮುಂಬೈ 2018
ಪಂಜಾಬ್ 119 ಮುಂಬೈ 2009
ಸನ್‌ರೈಸರ್ಸ್ 119 ಪುಣೆ 2013
ಸ್ಕೋರ್: ಪಂಜಾಬ್ 15.3 ಓವರಲ್ಲಿ 111/10 (ಪಭ್‌ಸಿಮ್ರನ್ 30, ಪ್ರಿಯಾನ್ಶ್ 22, ರಾಣಾ 3-25), ಕೆಕೆಆರ್ 15.1 ಓವರಲ್ಲಿ 95/10 (ರಘುವಂಶಿ 37, ರಹಾನೆ 17, ಚಹಲ್ 4-28, ಯಾನ್ಸನ್ 3-17)
