ಐಪಿಎಲ್ 2025ರ ಕೊನೆಯ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿದೆ. ತಂಡದಲ್ಲಿ 2 ಮಹತ್ವದ ಬದಲಾವಣೆ ಮಾಡಲಾಗಿದೆ.
ಲಖನೌ(ಮೇ.27) ಐಪಿಎಲ್ ಟೂರ್ನಿನಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಪ್ಲೇ ಆಫ್ ಸ್ಥಾನಕ್ಕೇರಿದೆ. ಆದರೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲು ಇದೀಗ ಆರ್‌ಸಿಬಿ ಕೊನೆಯ ಲೀಗ್ ಪಂದ್ಯದಲ್ಲಿ ಹೋರಾಟ ನಡೆಸಲಿದೆ. ಲಖನೌ ಸೂಪರ್ ಜೈಂಟ್ಸ್ ವಿರುದ್ದ ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯಕ್ಕಾಗಿ ಆರ್‌ಸಿಬಿ ಎರಡು ಮಹತ್ವದ ಬದಲಾವಣೆ ಮಾಡಲಾಗಿದೆ. ಟಿಮ್ ಡೇವಿಡ್ ಬದಲು ಲಿಯಾಮ್ ಲಿವಿಂಗ್‌ಸ್ಟೋನ್ ತಂಡ ಸೇರಿಕೊಂಡಿದ್ದಾರೆ. ಇನ್ನು ಲುಂಗಿ ಎನ್‌ಗಿಡಿ ಬದಲು ನುವಾನ್ ತುಷಾರ್ ತಂಡ ಸೇರಿಕೊಂಡಿದ್ದಾರೆ
ಆರ್‌ಸಿಬಿ ಪ್ಲೇಯಿಂಗ್ 11
ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(ನಾಯಕ), ರೊಮಾರಿಯೋ ಶೆಫರ್ಡ್, ಕ್ರುನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ನುವಾನ್ ತುಷಾರ
ಲಖನೌ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11
ಮಿಚೆಲ್ ಮಾರ್ಶ್, ಮಾಥ್ಯೂ ಬ್ರೇಟ್ಜ್, ನಿಕೋಲಸ್ ಪೂರನ್, ರಿಷಬ್ ಪಂತ್ (ನಾಯಕ), ಆಯುಷ್ ಬದೋನಿ, ಅಬ್ದುಲ್ ಸಮಾದ್, ಹಿಮ್ಮತ್ ಸಿಂಗ್, ಶಹಬಾಜ್ ಅಹಮ್ಮದ್, ದಿಗ್ವೇಶ್ ಸಿಂಗ್ ರಾಥಿ, ಅವೇಶ್ ಖಾನ್, ವಿಲಿಯಮ್ ರೂರ್ಕಿ,
ಹೇಜಲ್‌ವುಡ್‌ಗೆ ವಿಶ್ರಾಂತಿ
ಜೋಶ್ ಹೇಜಲ್‌ವುಡ್ ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ. ಆದರೆ ಲಖನೌ ವಿರುದ್ದದ ಲೀಗ್ ಪಂದ್ಯಕ್ಕೆ ಹೇಜಲ್‌ವುಡ್ ಕಣಕ್ಕಿಳಿದಿಲ್ಲ. ಸದ್ಯ ಹೇಜಲ್‌ವುಡ್‌ಗೆ ವಿಶ್ರಾಂತಿ ನೀಡಲಾಗಿದೆ. ಪ್ಲೇ ಆಫ್ ಪಂದ್ಯದಲ್ಲಿ ಹೇಜಲ್‌ವುಡ್ ಕಣಕ್ಕಿಳಿಯಲಿದ್ದಾರೆ.
ಅಂಕಪಟ್ಟಿ
ಲೀಗ್ ಹಂತದ ಎಲ್ಲಾ ಪಂದ್ಯ ಮುಗಿಸಿರುವ ಪಂಜಾಬ್ ಕಿಂಗ್ಸ್ ಸದ್ಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 19 ಅಂಕ ಗಳಿಸಿರುವ ಪಂಜಾಬ್ ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್ ಟೈಟಾನ್ಸ್ 14 ಲೀಗ್ ಪಂದ್ಯದಿಂದ 18 ಅಂಕ ಗಳಿಸಿದೆ. ಆರ್‌ಸಿಬಿ 13 ಲೀಗ್ ಪಂದ್ಯದಿಂದ 17 ಅಂಕ ಗಳಿಸಿದ್ದರೆ, ಮುಂಬೈ ಇಂಡಿಯನ್ಸ್ 14 ಪಂದ್ಯದಿಂದ 16 ಅಂಕಗಳಿಸಿದೆ. ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಉತ್ತಮ ಅಂತರದಿಂದ ಗೆಲುವು ಸಾಧಿಸಿದರೆ ಪಂಜಾಬ್ ಕಿಂಗ್ಸ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಲಿದೆ. ಜಸ್ಟ್ ವಿನ್ ಆದರೂ 2ನೇ ಸ್ಥಾನಕ್ಕೆ ತಲುಪಲಿದೆ.
ಎಲಿಮೀನೇಟರ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದಿಲ್ಲ
ಆರ್‌ಸಿಬಿ ನಾಲ್ಕು ಬಾರಿ ಪ್ಲೇ ಆಫ್ ಹಂತದಲ್ಲಿ ಎಲಿಮಿನೇಟರ್ ಪಂದ್ಯ ಆಡಿದೆ. ಆಧರೆ ನಾಲ್ಕೂ ಬಾರಿ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಆರ್‌ಸಿಬಿ ಟಾಪ್ 2 ಸ್ಥಾನ ಗಿಟ್ಟಿಸಿಕೊಳ್ಳಬೇಕು ಅನ್ನೋದು ಅಭಿಮಾನಿಗಳ ಆಗ್ರಹ. ಟಾಪ್ 2 ತಂಡಕ್ಕೆ ಫೈನಲ್ ಪ್ರವೇಶಿಸಲು 2 ಅವಕಾಶಗಳಿವೆ. ಹೀಗಾಗಿ ಆರ್‌ಸಿಬಿ ಟಾಪಪ್ 2ನಲ್ಲಿ ಕಾಣಿಸಿಕೊಂಡು ಫೈನಲ್ ಪ್ರವೇಶಿಸಲಿ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.


