IPL 2025, RCB vs SRH: ಜಿತೇಶ್ ಶರ್ಮಾ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಆರ್‌ಸಿಬಿಯನ್ನು ಮುನ್ನಡೆಸಿದರು, ರಜತ್ ಪಾಟಿದಾರ್ ಬದಲಿಗೆ ಸ್ಥಾನ ಪಡೆದುಕೊಂಡಿದ್ದಾರೆ. ಲಕ್ನೋದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಅವರ ಕೊನೆಯ ಲೀಗ್ ಪಂದ್ಯಕ್ಕೆ ಇಂಪ್ಯಾಕ್ಟ್ ಬದಲಿ ಆಟಗಾರನಾಗಿ ಆಯ್ಕೆಯಾದರು.
ಲಕ್ನೋ (ಮೇ.23): ಶುಕ್ರವಾರ ಲಕ್ನೋದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ 2025 ರ ನಿರ್ಣಾಯಕ ಪಂದ್ಯದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದರು. ರಜತ್ ಪಾಟಿದಾರ್ ಆಟ ಆಡಲು ಲಭ್ಯವಿದ್ದರೂ, ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಎಂದು ಹೆಸರಿಸಲಾಯಿತು. ಮೇ 3 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಆರ್‌ಸಿಬಿಯ ಕೊನೆಯ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರಜತ್ ಬೆರಳಿಗೆ ಗಾಯವಾಗಿತ್ತು.
20 ದಿನಗಳ ವಿರಾಮದ ಹೊರತಾಗಿಯೂ, ರಜತ್ ಪಟಿದಾರ್ ಬೆರಳಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ತಂಡವನ್ನು ಮುನ್ನಡೆಸಲು ಸಾಧ್ಯವಾಗಲಿಲ್ಲ. ಅಲ್ಲದೆ, ಆರ್‌ಸಿಬಿಯ ಮುನ್ನೆಚ್ಚರಿಕೆ ಕ್ರಮವೂ ಇದಾಗಿದ್ದು, ಪ್ಲೇಆಫ್‌ನಲ್ಲಿ ರಜತ್ ಪಾಟೀದಾರ್ ಲಭ್ಯವಿರಬೇಕು ಎನ್ನುವ ಕಾರಣಕ್ಕೆ ಈ ನಿರ್ಧಾರ ಮಾಡಿದೆ.
ಈ ನಡುವೆ, ಗಾಯಗೊಂಡ ದೇವದತ್ ಪಡಿಕ್ಕಲ್ ಬದಲಿಗೆ ಮಯಾಂಕ್ ಅಗರ್ವಾಲ್ ಅವರನ್ನು ತಂಡಕ್ಕೆ ಆರ್‌ಸಿಬಿ ಸೇರಿಸಿಕೊಂಡಿತ್ತು. ಇದರಿಂದಾಗಿ ಮಯಾಂಕ್ ಅಗರ್ವಾಲ್‌ಹಾಲಿ ಋತುವಿನ ತಮ್ಮ ಮೊದಲ ಪಂದ್ಯ ಆಡಲು ಸಜ್ಜಾಗಿದ್ದಾರೆ. ಜಾಕೋಬ್ ಬೆಥೆಲ್ ಬದಲಿಗೆ ಫಿಲ್ ಸಾಲ್ಟ್ ಪ್ಲೇಯಿಂಗ್ ಇಲೆವೆನ್‌ಗೆ ಆಯ್ಕೆಯಾದರು. ಜೋಶ್ ಹ್ಯಾಸಲ್‌ವುಡ್ ಈ ಪಂದ್ಯಕ್ಕೆ ಅಲಭ್ಯರಾಗಿದ್ದು, ಅವರ ಬದಲಿಗೆ, ಲುಂಗಿ ಎನ್‌ಗಿಡಿ XI ತಂಡದಲ್ಲಿ ಆಡುವುದನ್ನು ಮುಂದುವರೆಸಿದರು. ಶುಕ್ರವಾರ ರಾಯಲ್ ಚಾಲೆಂಜರ್ಸ್ ಪರ ಸಾಲ್ಟ್, ರೊಮಾರಿಯೊ ಶೆಫರ್ಡ್, ಟಿಮ್ ಡೇವಿಡ್ ಮತ್ತು ಎನ್‌ಗಿಡಿ ನಾಲ್ವರು ವಿದೇಶಿ ಆಟಗಾರರಾಗಿದ್ದರು.
ಮತ್ತೊಂದೆಡೆ, ಸನ್‌ರೈಸರ್ಸ್ ತಂಡವು ಈ ಋತುವಿನ ತಮ್ಮ ಕೊನೆಯ ಲೀಗ್ ಪಂದ್ಯಕ್ಕೆ ಟ್ರಾವಿಸ್ ಹೆಡ್ ಅವರನ್ನು ಮರಳಿ ಪ್ಲೇಯಿಂಗ್ ಇಲೆವೆನ್‌ಗೆ ಆಯ್ಕೆ ಮಾಡಿದೆ.. ಕೋವಿಡ್ -19 ನಿಂದ ಸಮಯಕ್ಕೆ ಚೇತರಿಸಿಕೊಳ್ಳಲು ವಿಫಲವಾದ ನಂತರ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಹಿಂದಿನ ಪಂದ್ಯವನ್ನು ತಪ್ಪಿಸಿಕೊಂಡಿದ್ದರು.
RCB vs SRH: ಟೀಮ್ ನ್ಯೂಸ್
RCB XI: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಮಯಾಂಕ್ ಅಗರ್ವಾಲ್, ಜಿತೇಶ್ ಶರ್ಮಾ (C/WK), ರೊಮಾರಿಯೋ ಶೆಫರ್ಡ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಲುಂಗಿ ಎನ್ಗಿಡಿ, ಯಶ್ ದಯಾಲ್, ಸುಯಾಶ್ ಶರ್ಮಾ.
ಇಂಪ್ಯಾಕ್ಟ್ ಸಬ್ಸ್: ರಜತ್ ಪಾಟಿದಾರ್, ರಾಸಿಖ್ ಸಲಾಮ್, ಮನೋಜ್ ಭಾಂಡಗೆ, ಜಾಕೋಬ್ ಬೆಥೆಲ್, ಸ್ವಪ್ನಿಲ್ ಸಿಂಗ್.
SRH XI: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (WK), ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮ್ಮಿನ್ಸ್ (C), ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಈಶಾನ್ ಮಾಲಿಂಗ.
ಇಂಪ್ಯಾಕ್ಟ್ ಸಬ್ಸ್: ಮೊಹಮ್ಮದ್ ಶಮಿ, ಹರ್ಷ್ ದುಬೆ, ಸಚಿನ್ ಬೇಬಿ, ಜೀಶನ್ ಅನ್ಸಾರಿ, ಸಿಮರ್ಜೀತ್ ಸಿಂಗ್.
ಸನ್‌ರೈಸರ್ಸ್ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿದ್ದರೆ, 12 ಪಂದ್ಯಗಳಿಂದ 17 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿ, ಟಾಪ್-2 ಸ್ಥಾನದಲ್ಲಿ ಲೀಗ್ ಮುಗಿಸುವ ಇರಾದೆಯಲ್ಲಿದೆ.
