ಐಪಿಎಲ್‌ನಲ್ಲಿ ಸತತ ಸೋಲಿನಿಂದ 8ನೇ ಸ್ಥಾನದಲ್ಲಿರುವ ಚೆನ್ನೈ ತಂಡವು ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಚೆಪಾಕ್ ಕ್ರೀಡಾಂಗಣದಲ್ಲಿ ಸ್ಪಿನ್ನರ್‌ಗಳ ಪೈಪೋಟಿ ನಡೆಯಲಿದೆ. ಚೆನ್ನೈನ ನೂರ್ ಅಹ್ಮದ್ ಮತ್ತು ಡೆಲ್ಲಿಯ ಕುಲ್ದೀಪ್ ಯಾದವ್ ಪ್ರಮುಖ ಆಟಗಾರರಾಗಿದ್ದಾರೆ. ಡೆಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಚೆನ್ನೈ ಸೋಲು ತಪ್ಪಿಸಲು ಹೋರಾಡಲಿದೆ. ಗಾಯಗೊಂಡಿರುವ ಋತುರಾಜ್ ಗಾಯಕ್ವಾಡ್ ಬದಲಿಗೆ ಧೋನಿ ನಾಯಕತ್ವ ವಹಿಸುವ ಸಾಧ್ಯತೆಯಿದೆ. ಪಂದ್ಯ ಮಧ್ಯಾಹ್ನ 3.30ಕ್ಕೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.
ಚೆನ್ನೈ: ಸತತ 2 ಪಂದ್ಯಗಳಲ್ಲಿ ಸೋಲುವ ಮೂಲಕ ಈ ಬಾರಿ ಐಪಿಎಲ್‌ನ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿರುವ 5 ಬಾರಿ ಚಾಂಪಿಯನ್ ಚೆನ್ನೈ ತಂಡಕ್ಕೆ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ಸವಾಲು ಎದುರಾಗಲಿದೆ. ಸ್ಪಿನ್ ಸ್ನೇಹಿ ಚೆಪಾಕ್ ಕ್ರೀಡಾಂಗಣದಲ್ಲಿ ಉಭಯ ತಂಡಗಳ ಸ್ಪಿನ್ನರ್‌ಗಳ ನಡುವೆ ತೀವ್ರ ಪೈಪೋಟಿ ಕಂಡುಬರುವ ನಿರೀಕ್ಷೆಯಿದೆ.
ಚೆನ್ನೈನ ನೂರ್ ಅಹ್ಮದ್ 6.83ರ ಎಕಾನಮಿಯಲ್ಲಿ 9 ವಿಕೆಟ್ ಕಿತ್ತಿದ್ದು, ಟೂರ್ನಿಯ ಗರಿಷ್ಠ ವಿಕೆಟ್ ಸರದಾರ ಎನಿಸಿಕೊಂಡಿದ್ದಾರೆ. ಮತ್ತೊಂದೆಡೆ ಡೆಲ್ಲಿಯ ಕುಲ್ದೀಪ್ ಯಾದವ್ 5.25ರ ಎಕಾನಮಿಯಲ್ಲಿ 5 ವಿಕೆಟ್ ಪಡೆದಿದ್ದು, ಟೂರ್ನಿಯ ಶ್ರೇಷ್ಠ ಎಕಾನಮಿ ಹೊಂದಿರುವ ಆಟಗಾರ. ಈ ಪಂದ್ಯದಲ್ಲಿ ಇವರಿಬ್ಬರ ನಡುವಿನ ಹಣಾಹಣಿಗೆ ಸಾಕ್ಷಿಯಾಗಲಿದೆ. ಇವರ ಜೊತೆಗೆ ಚೆನ್ನೈ ತಂಡದಲ್ಲಿ ಅಶ್ವಿನ್, ಜಡೇಜಾರಂತಹ ಶ್ರೇಷ್ಠ ಸ್ಪಿನ್ನರ್‌ಗಳಿದ್ದಾರೆ.
ಲಖನೌ ಎದುರಿನ ಸೋಲಿನ ಬೆನ್ನಲ್ಲೇ ಮುಂಬೈಗೆ ಮತ್ತೊಂದು ಶಾಕ್, ಆದ್ರೆ ಆರ್‌ಸಿಬಿಗೆ ಲಾಭ?
ಡೆಲ್ಲಿ ತಂಡದಲ್ಲಿರುವ ಕೆ.ಎಲ್.ರಾಹುಲ್ ತಮ್ಮ ದೊಡ್ಡ ಇನ್ನಿಂಗ್ಸ್‌ಗಾಗಿ ಕಾಯುತ್ತಿದ್ದಾರೆ. ತಂಡ ಆರಂಭಿಕ ಎರಡೂ ಪಂದ್ಯಗಳಲ್ಲಿ ಗೆದ್ದಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳಬೇಕಾದ ಒತ್ತಡದಲ್ಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚೆಪಾಕ್ ಮೈದಾನದಲ್ಲಿ ಈ ಹಿಂದಿನ 7 ಏಳು ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಗೆದ್ದು ಬೀಗಿದೆ. ಇದೀಗ ಇನ್ನೊಂದು ಪಂದ್ಯವನ್ನು ಗೆಲ್ಲುವ ಮೂಲಕ ಗೆಲುವಿನ ನಾಗಾಲೋಟ ಮುಂದುವರೆಸಿಕೊಂಡು ಹೋಗಲು ಸಿಎಸ್‌ಕೆ ತಂಡವು ಎದುರು ನೋಡುತ್ತಿದೆ.
ತಿಲಕ್ ವರ್ಮ ರಿಟೈರ್ಡ್ ಹರ್ಟ್ ಮಾಡಿ ಸರಿಯಾಗಿ ಉಗಿಸಿಕೊಂಡ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್!
ಇಂದು ಚೆನ್ನೈಗೆ ಧೋನಿ ನಾಯಕ?
ರಾಜಸ್ಥಾನ ವಿರುದ್ಧ ಪಂದ್ಯದ ವೇಳೆ ಮೊಣಕೈಗೆ ಚೆಂಡು ಬಡಿದು ಗಾಯಗೊಂಡಿದ್ದ ಚೆನ್ನೈ ನಾಯಕ ಋತುರಾಜ್ ಗಾಯಕ್ವಾಡ್ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಚೆನ್ನೈ ತಂಡವನ್ನು ಎಂ.ಎಸ್.ಧೋನಿ ಮುನ್ನಡೆಸುವ ಸಾಧ್ಯತೆಯಿದೆ. ಈ ಬಗ್ಗೆ ತಂಡದ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಸುಳಿವು ನೀಡಿದ್ದಾರೆ. ‘ಋತುರಾಜ್ ಆಡುವ ಬಗ್ಗೆ ಗೊಂದಲವಿದೆ. ಅವರು ಪಂದ್ಯಕ್ಕೆ ಗೈರಾದರೆ ವಿಕೆಟ್ ಕೀಪರ್ ಆಗಿರುವ ಯುವ ಆಟಗಾರ ತಂಡ ಮುನ್ನಡೆಸಬಹುದು. ಅವರಿಗೆ ಅದರಲ್ಲಿ ಅನುಭವವಿದೆ’ ಎಂದಿದ್ದಾರೆ.
ಸಂಭಾವ್ಯ ತಂಡ:
ಚೆನ್ನೈ ಸೂಪರ್ ಕಿಂಗ್ಸ್: ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ಋತುರಾಜ್ ಗಾಯಕ್ವಾಡ್(ನಾಯಕ), ಶಿವಂ ದುಬೆ, ಸ್ಯಾಮ್ ಕರ್ರನ್, ವಿಜಯ್ ಶಂಕರ್, ರವೀಂದ್ರ ಜಡೇಜಾ, ಎಂ ಎಸ್ ಧೋನಿ(ವಿಕೆಟ್ ಕೀಪರ್), ನೂರ್ ಅಹಮದ್, ಮತೀಶ್ ಪತಿರಣ, ಖಲೀಲ್ ಅಹಮದ್.
ಡೆಲ್ಲಿ ಕ್ಯಾಪಿಟಲ್ಸ್: ಜೇಕ್ ಪ್ರೇಸರ್-ಮೆಕ್‌ಗುರ್ಕ್, ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್(ನಾಯಕ), ಟ್ರಿಸ್ಟಿನ್ ಸ್ಟಬ್ಸ್, ಅಶುತೋಶ್ ಶರ್ಮಾ, ವಿಪ್ರಾಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮೋಹಿತ್ ಶರ್ಮಾ, ಮುಕೇಶ್ ಕುಮಾರ್.
ಪಂದ್ಯ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಜಿಯೋ ಹಾಟ್‌ಸ್ಟಾರ್
