ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಕೆಕೆಆರ್ ವಿರುದ್ಧ 80 ರನ್‌ಗಳಿಂದ ಸೋತಿದೆ. ಕೆಕೆಆರ್ 200 ರನ್ ಗಳಿಸಿತು, ಆದರೆ ಹೈದರಾಬಾದ್ 120 ರನ್‌ಗಳಿಗೆ ಆಲೌಟ್ ಆಯಿತು. ಕೆಕೆಆರ್ ಪರ ವೆಂಕಟೇಶ್ ಅಯ್ಯರ್ 60 ರನ್ ಗಳಿಸಿದರು. ಕಮಿಂಡು ಮೆಂಡಿಸ್ ಎರಡೂ ಕೈಗಳಿಂದ ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು. ಕೆಕೆಆರ್ ಅತಿ ಹೆಚ್ಚು ಬಾರಿ 200+ ರನ್ ಗಳಿಸಿದ ತಂಡಗಳಲ್ಲಿ 3ನೇ ಸ್ಥಾನದಲ್ಲಿದೆ.

ಕೋಲ್ಕತಾ: ಈ ಬಾರಿ ಇನ್ನಿಂಗ್ಸ್‌ನಲ್ಲಿ 300 ರನ್ ಗಳಿಸುವ ಸ್ಪಷ್ಟ ಗುರಿಯೊಂದಿಗೆ ಟೂರ್ನಿಗೆ ಕಾಲಿರಿಸಿದ್ದ ಸನ್‌ರೈಸರ್ಸ್ ಹೈದರಾಬಾದ್
ಈಗ ಒಂದೊಂದು ರನ್ ಗಳಿಸಲೂ ಪರದಾಡುತ್ತಿದೆ. 3ನೇ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾಗಿರುವ ತಂಡ, ಹ್ಯಾಟ್ರಿಕ್ ಸೋಲಿನ ಮುಖಭಂಗಕ್ಕೆ ಒಳಗಾಗಿದೆ. 

ಗುರುವಾರ ಕೆಕೆಆರ್ ವಿರುದ್ಧ ಹೈದ್ರಾಬಾದ್ 80 ರನ್ ಸೋಲು ಕಂಡಿತು. ಮೊದಲು ಬ್ಯಾಟ್ ಮಾಡಿದ ಕೆಕೆಆರ್ 6 ವಿಕೆಟ್‌ಗೆ 200 ರನ್
ಗಳಿಸಿತು. ಹೈದರಾಬಾದ್‌ನ ಬ್ಯಾಟಿಂಗ್ ಶಕ್ತಿ ಮುಂದೆ ಈ ಸ್ಕೋರ್ ದೊಡ್ಡದೇನೂ ಅಲ್ಲ, ಆದರೆ ಕೆಕೆಆರ್ ಬೌಲರ್ಸ್ ಪ್ರಾಬಲ್ಯ ಸಾಧಿಸಿದರು. ಹೈದರಾಬಾದ್ 16.4 ಓವರ್ ಗಳಲ್ಲಿ 120 ರನ್‌ಗೆ ಆಲೌಟಾಯಿತು. ಹೆಡ್ (4 ರನ್), ಅಭಿಷೇಕ್ (2), ಇಶಾನ್ ಕಿಶನ್ (2) ತಂಡದ ಸ್ಕೋರ್ 9 ಆಗುವಷ್ಟರಲ್ಲೇ ಪೆವಿಲಿಯನ್ ಸೇರಿದ್ದರು. ಬಳಿಕ ತಂಡ ಚೇತರಿಸಿಕೊಳ್ಳಲಿಲ್ಲ. ಕ್ಲಾಸೆನ್ 33, ಕಮಿಂಡು 27, ನಿತೀಶ್ 19 ರನ್ ಗಳಿಸಿದರು.

ಬೆಂಗಳೂರು: RCB ಅಭಿಮಾನಿಗಳ 7 ಮೊಬೈಲ್ ಕದ್ದ ಇಬ್ಬರು ಕಳ್ಳರನ್ನು ಹಿಡಿದ ಭದ್ರತಾ ಸಿಬ್ಬಂದಿ!

ಕೊನೆಯಲ್ಲಿ ಅಬ್ಬರ: ಇದಕ್ಕೂ ಮುನ್ನ ಕೆಕೆಆರ್ ಪವರ್-ಪ್ಲೇನಲ್ಲಿ 53 ರನ್ ದೋಚಿತು. ಆದರೆ ಮುಂದಿನ 9 ಓವರ್‌ಗಳಲ್ಲಿ ತಂಡ ಗಳಿಸಿದ್ದು 69 ರನ್‌, 15 ಓವರ್‌ಗಳಲ್ಲಿ ತಂಡದ ಸ್ಕೋರ್ 4 ವಿಕೆಟ್‌ಗೆ 122 ರನ್, ರಘುವಂತಿ 32 ಎಸೆತಗಳಲ್ಲಿ 50 ರನ್ ಸಿಡಿಸಿದರು. ಬಳಿಕ ವೆಂಕಟೇಶ್ ಅಯ್ಯರ್-ರಿಂಕು ಸಿಂಗ್ ಅಬ್ಬರಿಸಿದರು. ಮುಂದಿನ 5 ಓವರ್‌ಗಳಲ್ಲಿ ಕ್ರಮವಾಗಿ 12, 15, 17, 21, 13 ರನ್ ಸೇರ್ಪಡೆ ಗೊಂಡಿತು. ವೆಂಕಟೇಶ್ 29 ಎಸೆತಗಳಲ್ಲಿ 60, ರಿಂಕು 17 ಎಸೆತಗಳಲ್ಲಿ ಔಟಾಗದೆ 32 ರನ್ ಸಿಡಿಸಿದರು. 

ಸ್ಕೋರ್: ಕೆಕೆಆರ್ 200/6 (ವೆಂಕ ಟೇಶ್ 60, ರಘುವಂಶಿ 50, ಕಮಿಂಡು 1-4, ಶಮಿ 1-29), ಹೈದರಾಬಾದ್ 16.4 ಓವರಲ್ಲಿ 120/10 (ಕ್ಲಾಸೆನ್ 33, ಕಮಿಂಡು 27, ವೈಭವ್ 3-29)

2025ರ ಟೀಂ ಇಂಡಿಯಾ ತವರಿನ ಸೀಸನ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ!

ಎರಡೂ ಕೈಗಳಲ್ಲಿ ಕಮಿಂಡು ಬೌಲಿಂಗ್‌!

ಶ್ರೀಲಂಕಾ ಕ್ರಿಕೆಟಿಗ, ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಪರ ಆಡುತ್ತಿರುವ ಕಮಿಂಡು ಮೆಂಡಿಸ್‌ ಗುರುವಾರ ಕೋಲ್ಕತಾ ವಿರುದ್ಧ ಪಂದ್ಯದಲ್ಲಿ ಎರಡೂ ಕೈಗಳಲ್ಲಿ ಬೌಲ್‌ ಮಾಡಿ ಗಮನ ಸೆಳೆದರು. ಇನ್ನಿಂಗ್ಸ್‌ನ 13ನೇ ಓವರ್‌ನಲ್ಲಿ ದಾಳಿಗಿಳಿದ ಕಮಿಂಡು, ಮೊದಲ ಎಸೆತದಲ್ಲಿ ಬಲಗೈ ಬ್ಯಾಟರ್‌ ರಘುವಂಶಿಗೆ ಎಡಗೈನಲ್ಲಿ ಸ್ಪಿನ್‌ ಬೌಲ್‌ ಮಾಡಿದರು. ಮುಂದಿನ ಎಸೆತದಲ್ಲಿ ಎಡಗೈ ಬ್ಯಾಟರ್‌ ವೆಂಕಟೇಶ್‌ ಅಯ್ಯರ್‌ಗೆ ಬಲಗೈನಲ್ಲಿ ಚೆಂಡನ್ನು ಎಸೆದರು.

ಅತಿ ಹೆಚ್ಚು ಬಾರಿ 200: 3ನೇ ಸ್ಥಾನಕ್ಕೆ ಕೆಕೆಆರ್‌

ಐಪಿಎಲ್‌ನಲ್ಲಿ ಅತಿ ಹೆಚ್ಚು 200+ ರನ್‌ ಕಲೆಹಾಕಿದ ತಂಡಗಳ ಪಟ್ಟಿಯಲ್ಲಿ ಕೆಕೆಆರ್‌ 3ನೇ ಸ್ಥಾನಕ್ಕೇರಿದೆ. ಕೆಕೆಆರ್‌ ಗುರುವಾರ ಹೈದರಾಬಾದ್‌ ವಿರುದ್ಧ 200 ರನ್‌ ಗಳಿಸಿತು. ತಂಡ ಈ ವರೆಗೂ ಐಪಿಎಲ್‌ನಲ್ಲಿ 26 ಬಾರಿ ಈ ಸಾಧನೆ ಮಾಡಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ 32 ಬಾರಿ 200+ ರನ್‌ ಗಳಿಸಿದ್ದು, ಅಗ್ರಸ್ಥಾನದಲ್ಲಿದೆ. ಆರ್‌ಸಿಬಿ(30 ಬಾರಿ) ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಪಂಜಾಬ್‌, ಮುಂಬೈ ತಲಾ 25 ಬಾರಿ ಈ ಸಾಧನೆ ಮಾಡಿವೆ.

200 ವಿಕೆಟ್‌ಗಳು:
ಪುರುಷರ ಟಿ20 ಕ್ರಿಕೆಟ್‌ನಲ್ಲಿ ತಂಡವೊಂದರ ಪರ 200+ ವಿಕೆಟ್ ಕಿತ್ತ ಕೇವಲ 2ನೇ ಬೌಲರ್ ಸುನಿಲ್ ನರೈನ್. ಅವರು ಕೆಕೆಆರ್ ಪರ 200 ವಿಕೆಟ್ ಪಡೆದಿದ್ದಾರೆ. ನಾಟಿಂಗ್ ಹ್ಯಾಮ್‌ಶೆ‌ ಪರ ಸಮಿತ್ ಪಟೇಲ್ 208 ವಿಕೆಟ್ ಪಡೆದಿದ್ದಾರೆ.