ಲಖನೌ ಸೂಪರ್ ಜೈಂಟ್ಸ್ ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು 2 ರನ್‌ಗಳಿಂದ ಸೋಲಿಸಿತು. 14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಆಡಿದ ಅತಿ ಕಿರಿಯ ಆಟಗಾರ ಎನಿಸಿಕೊಂಡರು.
ಜೈಪುರ: ತಮ್ಮ ಕೊನೆ 2 ಓವರ್‌ಗಳಲ್ಲಿ ಕೇವಲ 11 ರನ್ ನೀಡಿ, ಮೂವರು ಪ್ರಮುಖ ಬ್ಯಾಟರ್‌ಗಳನ್ನು ಔಟ್ ಮಾಡಿದ ಆವೇಶ್ ಖಾನ್ ಲಖನೌ ಜೈಂಟ್ಸ್‌ಗೆ ಟೂರ್ನಿಯಲ್ಲಿ 5ನೇ ಗೆಲುವು ತಂದುಕೊಟ್ಟಿದ್ದಾರೆ. ಶನಿವಾರ ರಾಜಸ್ಥಾನ ವಿರುದ್ಧ ಲಖನೌ 2 ರನ್ ಗೆಲುವು ಸಾಧಿಸಿತು. ಇದು ರಾಜಸ್ಥಾನಕ್ಕೆ 8 ಪಂದ್ಯಗಳಲ್ಲಿ ಎದುರಾದ 6ನೇ ಸೋಲು.
ಲಖನೌ 5 ವಿಕೆಟ್‌ಗೆ 180 ರನ್ ಗಳಿಸಿತು. ಮಾರ್ಕ್‌ರಮ್ 45 ಎಸೆತಕ್ಕೆ 66 ರನ್ ಸಿಡಿಸಿದರೆ, ಆಯುಶ್ ಬದೋನಿ 34 ಎಸೆತಗಳಲ್ಲಿ 50 ರನ್ ಬಾರಿಸಿದರು. ಕೊನೆ ಓವರ್‌ನಲ್ಲಿ ಅಬ್ದುಲ್ ಸಮದ್ 4 ಸಿಕ್ಸರ್ ಸೇರಿದಂತೆ 10 ಎಸೆತಗಳಲ್ಲಿ 30 ರನ್ ಸಿಡಿಸಿದರು.
ದೊಡ್ಡ ಗುರಿ ಬೆನ್ನತ್ತಿದ ರಾಜಸ್ಥಾನ 5 ವಿಕೆಟ್‌ಗೆ 178 ರನ್ ಗಳಿಸಿ ಸೋಲೊಪ್ಪಿಕೊಂಡಿತು. ತಾವೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗಟ್ಟಿದ್ದ ವೈಭವ್ ಸೂರ್ಯವಂಶಿ 20 ಎಸೆತಕ್ಕೆ 34 ರನ್ ಗಳಿಸಿದರು. ಬಳಿಕ ಜೈಸ್ವಾಲ್ 52 ಎಸೆತಕ್ಕೆ 74, ರಿಯಾನ್ ಪರಾಗ್ 39 ರನ್ ಸಿಡಿಸಿದರು. ಕೊನೆ 3 ಓವರ್‌ಗೆ 25 ರನ್ ಬೇಕಿದ್ದಾಗ ಆವೇಶ್ 18ನೇ ಓವರಲ್ಲಿ 5 ರನ್ ನೀಡಿ, ಜೈಸ್ವಾಲ್, ರಿಯಾನ್‌ರನ್ನು ಔಟ್ ಮಾಡಿದರು. ಕೊನೆ ಓವರಲ್ಲಿ 9 ರನ್ ಬೇಕಿದ್ದಾಗ ಹೆಟ್ಮೇಯರ್‌ರನ್ನು ಔಟ್ ಮಾಡಿ ಲಖನೌಗೆ ಗೆಲುವು ತಂದುಕೊಟ್ಟರು. ಕೊನೆ ಎಸೆತಕ್ಕೆ 4 ರನ್ ಬೇಕಿದ್ದಾಗ ರಾಯಲ್ಸ್ ಸೋತಿತು.
IPL 2025: ಸಿಎಸ್‌ಕೆಗೆ ಹೊಸ ನಾಯಕ? ಧೋನಿಗೆ ಏನಾಯ್ತು?
ಸ್ಕೋರ್: ಲಖನೌ 180/5 (ಮಾರ್ಕ್‌ರಮ್ 66, ಬದೋನಿ 50, ಹಸರಂಗ 2-31), ರಾಜಸ್ಥಾನ 178/5 (ಜೈಸ್ವಾಲ್ 74, ರಿಯಾನ್ 39, ಆವೇಶ್ 3-37)
ಪಂದ್ಯಶ್ರೇಷ್ಠ: ಆವೇಶ್ ಖಾನ್
03ನೇ ಜಯ: ಲಖನೌ 2 ಅಥವಾ ಅದಕ್ಕಿಂತ ಕಡಿಮೆ ರನ್ ಅಂತರದಲ್ಲಿ 3ನೇ ಬಾರಿ ಜಯಗಳಿಸಿತು.
14ರ ವೈಭವ್ ಐಪಿಎಲ್ ಪಂದ್ಯವಾಡಿದ ಅತಿ ಕಿರಿಯ
ಜೈಪುರ: 14 ವರ್ಷ 23 ದಿನ ವಯಸ್ಸಿನ ವೈಭವ್ ಸೂರ್ಯವಂಶಿ ಶನಿವಾರ ಲಖನೌ ವಿರುದ್ಧ ರಾಜಸ್ಥಾನ ಪರ ಕಣಕ್ಕಿಳಿದರು. ಈ ಮೂಲಕ ಐಪಿಎಲ್ ಆಡಿದ ಅತಿ ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 2019ರಲ್ಲಿ ಪ್ರಯಾಸ್ ರೇ ಬರ್ಮನ್ ತಮಗೆ 16 ವರ್ಷ, 157 ದಿನಗಳಾಗಿದ್ದಾಗ ಆರ್‌ಸಿಬಿ ಪರ ಕಣಕ್ಕಿಳಿದು, ಐಪಿಎಲ್ ಆಡಿದ ಅತಿ ಕಿರಿಯ ಎನಿಸಿಕೊಂಡಿದ್ದರು. ಆ ದಾಖಲೆಯನ್ನು ವೈಭವ್ ಮುರಿದಿದ್ದಾರೆ.
ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಅಡಿ ಪುರಾತನ ದೇವಾಲಯ: ಪಿಚ್ ಅಗೆಯಲು ನೆಟ್ಟಿಗರ ಆಗ್ರಹ!
ಗುಜರಾತ್‌ಗೆ 5ನೇ ಗೆಲುವಿನ ಜೋಸ್!
ಅಹಮದಾಬಾದ್: ಜೋಸ್ ಬಟ್ಲರ್ ಸ್ಫೋಟಕ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ 1 ವಿಕೆಟ್ ಜಯಗಳಿಸಿದೆ. ತಂಡ ಅಂಕಪಟ್ಟಿಯಲ್ಲಿ 5ನೇ ಜಯದೊಂದಿಗೆ ಅಗ್ರಸ್ಥಾನಕ್ಕೇರಿದೆ. 7 ಪಂದ್ಯಗಳಲ್ಲಿ 2ನೇ ಸೋಲುಂಡ ಡೆಲ್ಲಿ 2ನೇ ಸ್ಥಾನಕ್ಕೆ ಕುಸಿಯಿತು.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ 8 ವಿಕೆಟ್‌ಗೆ 203 ರನ್ ಕಲೆಹಾಕಿತು. ತಂಡದ ಯಾರೊಬ್ಬರೂ ಅರ್ಧಶತಕ ಗಳಿಸದಿದ್ದರೂ ಉತ್ತಮ ಮೊತ್ತ ಮೂಡಿಬಂತು. ಕರುಣ್ ನಾಯ 18 ಎಸೆತಕ್ಕೆ 31, ಕೆ.ಎಲ್. ರಾಹುಲ್ 14 ಎಸೆತಕ್ಕೆ 28 ರನ್ ಗಳಿಸಿದರು. ಇವರಿಬ್ಬರನ್ನೂ ಕರ್ನಾಟಕದವರೇ ಆದ ಪ್ರಸಿದ್ ಕೃಷ್ಣ ಪೆವಿಲಿಯನ್‌ಗೆ ಅಟ್ಟಿದರು. ನಾಯಕ ಅಕ್ಷರ್ ಪಟೇಲ್ 39, ಅಶುತೋಷ್ ಶರ್ಮಾ 37, ಟ್ರಿಸ್ಟನ್ ಸ್ಟಬ್ಸ್ 31 ರನ್ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಪ್ರಸಿದ್ಧ ಕೃಷ್ಣ 41 ರನ್ ನೀಡಿ 4 ವಿಕೆಟ್ ಕಿತ್ತರು.
ದೊಡ್ಡ ಗುರಿ ಬೆನ್ನತ್ತಿದ ಗುಜರಾತ್, 19.2 ಓವರ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು. 3ನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಬಟ್ಲರ್ ಹಾಗೂ ರುಥರ್ ಫೋರ್ಡ್(43) ತಂಡವನ್ನು ಗೆಲ್ಲಿಸಿದರು. ಬಟ್ಲರ್ 54 ಎಸೆತಕ್ಕೆ ಔಟಾಗದೆ 97 ರನ್ ಗಳಿಸಿದರು.
ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ದಾಖಲೆ ಮುರಿದ ರಜತ್ ಪಾಟೀದಾರ್!
ಸ್ಕೋರ್:
ಡೆಲ್ಲಿ 203/8 (ಅಕ್ಷರ್ 39, ಅಶುತೋಷ್ 37, ಕರುಣ್ 31, ಸ್ಟಬ್ 31, ಪ್ರಸಿದ್ 4-41)
ಗುಜರಾತ್ 19.2 ಓವರಲ್ಲಿ 204/3 (ಬಟ್ಲರ್ 97*, ರುಥರ್‌ಫೋರ್ಡ್ 43, ಕುಲೀಪ್ 1-30)
ವೇಗವಾಗಿ 200 ಸಿಕ್ಸರ್: ಕೆ.ಎಲ್.ರಾಹುಲ್ ದಾಖಲೆ
ಅಹಮದಾಬಾದ್: ಶನಿವಾರ ಗುಜರಾತ್ ವಿರುದ್ಧ 1 ಸಿಕ್ಸರ್ ಬಾರಿಸಿದ ಡೆಲ್ಲಿ ತಂಡದ ಕೆ.ಎಲ್.ರಾಹುಲ್, ಐಪಿಎಲ್‌ನಲ್ಲಿ ಅತಿ ವೇಗವಾಗಿ 200 ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಅವರು 129 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ದಾಖಲೆ ಸಂಜು ಸ್ಯಾಮ್ಸನ್(159 ಇನ್ನಿಂಗ್ಸ್) ಹೆಸರಲ್ಲಿತ್ತು. ಒಟ್ಟಾರೆ ವೇಗದ 200 ಸಿಕ್ಸರ್‌ನಲ್ಲಿ ರಾಹುಲ್‌ಗೆ 3ನೇ ಸ್ಥಾನ. ಕ್ರಿಸ್ ಗೇಲ್ 69, ಆ್ಯಂಡ್ರೆ ರಸೆಲ್ 97 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. ಐಪಿಎಲ್‌ನಲ್ಲಿ ಒಟ್ಟು 11 ಮಂದಿ 200+ ಸಿಕ್ಸರ್ ಬಾರಿಸಿದ್ದಾರೆ. ಇದರಲ್ಲಿ 6 ಮಂದಿ ಭಾರತೀಯರು. ರೋಹಿತ್(286), ಕೊಹ್ಲಿ(282), ಧೋನಿ(260), ಸ್ಯಾಮ್ಸನ್(216), ರೈನಾ(203) ಇತರ ಸಾಧಕರು. ಗೇಲ್ 357 ಸಿಕ್ಸರ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.


