Asianet Suvarna News Asianet Suvarna News

ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಗೆಲುವಿನ ಬೆನ್ನಲ್ಲೇ ರಿಷಭ್ ಪಂತ್‌ಗೆ ಬಿಗ್ ಶಾಕ್..!

ಇಲ್ಲಿನ ಡಾ. ವೈ ಎಸ್ ರಾಜಶೇಖರ್ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಧಾನಗತಿಯ ಬೌಲಿಂಗ್ ಮಾಡಿದ ತಪ್ಪಿಗೆ ರಿಷಭ್ ಪಂತ್‌ಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ.

IPL 2024 Rishabh Pant fined Rs 12 lakh for slow over rate in DC vs CSK kvn
Author
First Published Apr 1, 2024, 2:57 PM IST

ವಿಶಾಖಪಟ್ಟಣಂ(ಏ.01): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗೆಲುವಿನ ಖಾತೆ ತೆರೆದಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎದುರು ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ಸಾಧಿಸಿದೆ. ಇದು ಈ ಆವೃತ್ತಿಯಲ್ಲಿ ಡೆಲ್ಲಿಗೆ ಮೊದಲ ಗೆಲುವಾದರೆ, ಚೆನ್ನೈ ಸೂಪರ್ ಕಿಂಗ್ಸ್‌ಗೆ ಮೊದಲ ಸೋಲು ಎನಿಸಿದೆ. ಈ ಗೆಲುವಿನ ಸಂಭ್ರಮದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್‌ಗೆ ಬಿಗ್ ಶಾಕ್ ಎದುರಾಗಿದೆ.

ಹೌದು, ಇಲ್ಲಿನ ಡಾ. ವೈ ಎಸ್ ರಾಜಶೇಖರ್ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಧಾನಗತಿಯ ಬೌಲಿಂಗ್ ಮಾಡಿದ ತಪ್ಪಿಗೆ ರಿಷಭ್ ಪಂತ್‌ಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ಈ ಮೂಲಕ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿ ದಂಡ ತೆತ್ತ ಎರಡನೇ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ ರಿಷಭ್ ಪಂತ್. ಈ ಮೊದಲು ಗುಜರಾತ್ ಟೈಟಾನ್ಸ್ ತಂಡದ ಶುಭ್‌ಮನ್ ಗಿಲ್, ಇದೇ ಕಾರಣಕ್ಕಾಗಿ ದಂಡ ಪಾವತಿಸಿದ್ದರು.

ಪಾಕ್ ತಂಡಕ್ಕೆ ಮತ್ತೆ ಬಾಬರ್ ಅಜಂ ನಾಯಕ: ಕೇವಲ ಒಂದು ಸರಣಿ ಸೋಲಿನ ಬೆನ್ನಲ್ಲೇ ಕ್ಯಾಪ್ಟನ್ಸಿ ಕಳೆದುಕೊಂಡ ಅಫ್ರಿದಿ

ಇನ್ನು ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೆ, ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್‌ಮನ್ ಗಿಲ್ ಕೂಡಾ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದ ವೇಳೆಯಲ್ಲೇ ನಿಧಾನಗತಿಯ ಬೌಲಿಂಗ್ ನಡೆಸಿ ದಂಡ ಪಾವತಿಸಿದ್ದರು. ಇದೀಗ ರಿಷಭ್ ಪಂತ್ ಕೊಂಚ ಎಚ್ಚರಿಕೆಯಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಬೇಕಿದೆ. ಒಂದು ವೇಳೆ ಇನ್ನೆರಡು ಬಾರಿ ತಂಡ ಇದೇ ರೀತಿಯ ತಪ್ಪನ್ನು ಮರುಕಳಿಸಿದರೆ, ರಿಷಭ್ ಪಂತ್ ಒಂದು ಪಂದ್ಯದ ಮಟ್ಟಿಗೆ ತಂಡದಿಂದ ಹೊರಗುಳಿಯಬೇಕಾಗುತ್ತಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೊದಲ ಬಾರಿಗೆ ಈ ತಪ್ಪು ಮಾಡಿರುವುದರಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರಿಗೆ ಯಾವುದೇ ದಂಡ ವಿಧಿಸಲಾಗಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಮೊದಲ ಜಯ

ವಿಶಾಖಪಟ್ಟಣಂ: ಎಂ.ಎಸ್‌.ಧೋನಿ ಕೊನೆಯಲ್ಲಿ ಪ್ರದರ್ಶಿಸಿದ ಹೋರಾಟದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಚೆನ್ನೈ ತಂಡ 20 ರನ್‌ ಸೋಲನುಭವಿಸಿದೆ. ಇದರೊಂದಿಗೆ ಚೆನ್ನೈ ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನಗೊಂಡರೆ, ಆರಂಭಿಕ 2 ಪಂದ್ಯ ಸೋತಿದ್ದ ಡೆಲ್ಲಿ ಮೊದಲ ಗೆಲುವು ದಾಖಲಿಸಿತು.

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ತಂಡ, ವಾರ್ನರ್‌, ಪೃಥ್ವಿ ಶಾ ಹಾಗೂ ಪಂತ್‌ ಅಬ್ಬರದಿಂದಾಗಿ 5 ವಿಕೆಟ್‌ಗೆ 191 ರನ್‌ ಕಲೆಹಾಕಿತು. ಆರಂಭದಲ್ಲೇ ಸ್ಫೋಟಕ ಆಟಕ್ಕೆ ಒತ್ತು ಕೊಟ್ಟ ವಾರ್ನರ್‌-ಪೃಥ್ವಿ ಮೊದಲ ವಿಕೆಟ್‌ಗೆ 93 ರನ್‌ ಜೊತೆಯಾಟವಾಡಿದರು. ಪೃಥ್ವಿ 27 ಎಸೆತಕ್ಕೆ 43, ವಾರ್ನರ್‌ 35 ಎಸೆತಗಳಲ್ಲಿ 52 ರನ್‌ ಚಚ್ಚಿದರು. ಪಂತ್‌ 51 ರನ್‌ ಸಿಡಿಸಿ ತಂಡವನ್ನು 200ರ ಸನಿಹಕ್ಕೆ ತಲುಪಿಸಿದರು. ಪತಿರನ್‌ 3 ವಿಕೆಟ್‌ ಪಡೆದರು.

IPL 2024 ರೋಹಿತ್ ಶರ್ಮಾ ಔಟಾಗಿದ್ದಕ್ಕೆ ಸಂಭ್ರಮಿಸಿದ ವೃದ್ಧನ ಹತ್ಯೆ!

ದೊಡ್ಡ ಗುರಿಯನ್ನು ಬೆನ್ನತ್ತಿದ ಚೆನ್ನೈ ಆರಂಭದಲ್ಲೇ ಎಡವಿತು. 7ಕ್ಕೆ 2 ವಿಕೆಟ್ ಕಳೆದುಕೊಂಡ ತಂಡ ಪವರ್‌-ಪ್ಲೇನಲ್ಲಿ ಗಳಿಸಿದ್ದು 32 ರನ್‌. ಬಳಿಕ ರಹಾನೆ(45), ಡ್ಯಾರಿಲ್‌ ಮಿಚೆಲ್‌(34), ಜಡೇಜಾ(21) ಗಳಿಸಿದರೆ, ಕೊನೆಯಲ್ಲಿ 16 ಎಸೆತದಲ್ಲಿ 3 ಸಿಕ್ಸರ್‌, 4 ಬೌಂಡರಿಗಳೊಂದಿಗೆ 37 ರನ್‌ ಚಚ್ಚಿದ ಧೋನಿ ತಮ್ಮಲ್ಲಿ ಇನ್ನೂ ಸಾಮರ್ಥ್ಯವಿದೆ ಎಂದು ತೋರಿಸಿಕೊಟ್ಟರು.

ಸ್ಕೋರ್‌: ಡೆಲ್ಲಿ 191/5 (ವಾರ್ನರ್‌ 52, ಪಂತ್‌ 51, ಪತಿರನ 3-31), ಚೆನ್ನೈ 171/6(ರಹಾನೆ 45, ಧೋನಿ 37*, ಮುಕೇಶ್‌ 3-21) ಪಂದ್ಯಶ್ರೇಷ್ಠ: 
 

Follow Us:
Download App:
  • android
  • ios