Asianet Suvarna News Asianet Suvarna News

IPL 2024 ರೋಹಿತ್ ಶರ್ಮಾ ಔಟಾಗಿದ್ದಕ್ಕೆ ಸಂಭ್ರಮಿಸಿದ ವೃದ್ಧನ ಹತ್ಯೆ!

ಬುಧವಾರ ಮುಂಬೈ-ಹೈದರಾಬಾದ್ ನಡುವಿನ ಪಂದ್ಯದ ವೇಳೆ ಯುವಕರಿಬ್ಬರು ಬಂಡೂಪಂತ್‌ ಎಂಬವರ ಮೇಲೆ ಕೋಲುಗಳಿಂದ ಹಲ್ಲೆ ಮಾಡಿದ್ದಾರೆ. ಅವರ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

IPL 2024 Thrashed for cheering Rohit Sharma wicket IPL fan dies in Kolhapur kvn
Author
First Published Apr 1, 2024, 1:41 PM IST

ಕೋಲ್ಹಾಪುರ: ರೋಹಿತ್‌ ಶರ್ಮಾ ವಿಕೆಟ್‌ ಬಿದ್ದಾಗ ಸಂಭ್ರಮಿಸಿದ್ದಕ್ಕೆ ಇಬ್ಬರು ಯುವಕರು ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೆ 65ರ ವೃದ್ಧ ಶನಿವಾರ ಮೃತಪಟ್ಟಿದ್ದಾರೆ.

ಬುಧವಾರ ಮುಂಬೈ-ಹೈದರಾಬಾದ್ ನಡುವಿನ ಪಂದ್ಯದ ವೇಳೆ ಯುವಕರಿಬ್ಬರು ಬಂಡೂಪಂತ್‌ ಎಂಬವರ ಮೇಲೆ ಕೋಲುಗಳಿಂದ ಹಲ್ಲೆ ಮಾಡಿದ್ದಾರೆ. ಅವರ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಹಲ್ಲೆಗೈದಿದ್ದ ಬಲ್ವಂತ್‌, ಸಾಗರ್‌ ಎಂಬವರನ್ನು ಬಂಧಿಸಲಾಗಿದೆ.

ಪೊಲೀಸ್‌ ಕಾವಲಿನಲ್ಲಿ ಆಡಲಿರುವ ಹಾರ್ದಿಕ್‌!

ಮುಂಬೈ: ಮುಂಬೈ ನಾಯಕ ಹಾರ್ದಿಕ್‌ ಪಾಂಡ್ಯ ಅವರನ್ನು ಅಭಿಮಾನಿಗಳು ಕಿಚ್ಚಾಯಿಸುವುದನ್ನು ತಪ್ಪಿಸಲು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಇನ್ನು ಮುಂದೆ ಪೊಲೀಸ್‌ ಕಾವಲು ಇರಲಿದೆ. ನಾಯಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಹಾರ್ದಿಕ್‌ರನ್ನು ಅಭಿಮಾನಿಗಳು ಹೀಯಾಳಿಸುತ್ತಿದ್ದಾರೆ. ಆದರೆ ಇದನ್ನು ತಪ್ಪಿಸಲು ಮುಂಬೈ ಕ್ರಿಕೆಟ್‌ ಸಂಸ್ಥೆ ಕ್ರಮಕೈಗೊಂಡಿದ್ದು, ಪಂದ್ಯ ನಡೆಯುವಾಗ ಯಾರಾದರೂ ಪಾಂಡ್ಯಗೆ ಹೀಯಾಳಿಸಿದರೆ ಅವರನ್ನು ಕ್ರೀಡಾಂಗಣದಿಂದ ಹೊರಹಾಕಲು ಪೊಲೀಸರಿಗೆ ಮನವಿ ಮಾಡಿದೆ.

ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿರುವ ಮುಂಬೈಗಿಂದು ರಾಜಸ್ಥಾನ ರಾಯಲ್ಸ್ ಸವಾಲು..!

ಹಸರಂಗ ಐಪಿಎಲ್‌ಗಿಲ್ಲ: ಸನ್‌ರೈಸರ್ಸ್‌ಗೆ ಹಿನ್ನಡೆ

ಹೈದರಾಬಾದ್‌: ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಶ್ರೀಲಂಕಾದ ಆಲ್ರೌಂಡರ್‌ ವಾನಿಂಡು ಹಸರಂಗ 17ನೇ ಆವೃತ್ತಿ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಇದರಿಂದ ಸನ್‌ರೈಸರ್ಸ್‌ ಹೈದರಬಾದ್‌ಗೆ ತೀವ್ರ ಹಿನ್ನಡೆಯುಂಟಾಗುವ ಸಾಧ್ಯತೆಯಿದೆ. ಕಳೆದ ಬಾರಿ ಆರ್‌ಸಿಬಿ ತಂಡದಲ್ಲಿದ್ದ ಹರಸಂಗರನ್ನು ಈ ಬಾರಿ ಹರಾಜಿನಲ್ಲಿ ಸನ್‌ರೈಸರ್ಸ್‌ ಫ್ರಾಂಚೈಸಿಯು ₹1.5 ಕೋಟಿ ರನೀಡಿ ಖರೀದಿಸಿತ್ತು. ಇತ್ತೀಚೆಗೆ ಬಾಂಗ್ಲಾ ವಿರುದ್ಧ ಏಕದಿನ ಸರಣಿಯಲ್ಲಿ ಹಸರಂಗ ಗಾಯದ ನಡುವೆಯೇ ಆಡಿದ್ದರು.

ಡೇವಿಡ್ ವಿಲ್ಲಿ ಬದಲಿಗೆ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಮ್ಯಾಟ್‌ ಹೆನ್ರಿ

ನವದೆಹಲಿ: ಇಂಗ್ಲೆಂಡ್‌ ಆಲ್ರೌಂಡರ್‌ ಡೇವಿಡ್‌ ವಿಲ್ಲಿ ವೈಯಕ್ತಿಕ ಕಾರಣಗಳಿಂದ ಐಪಿಎಲ್‌ನಿಂದ ಹಿಂದೆ ಸರಿದಿದ್ದು, ಅವರ ಬದಲಿಗೆ ನ್ಯೂಜಿಲೆಂಡ್‌ನ ವೇಗಿ ಮ್ಯಾಟ್‌ ಹೆನ್ರಿ ಅವರನ್ನು ₹1.25 ಕೋಟಿ ರು. ನೀಡಿ ಲಖನೌ ಫ್ರಾಂಚೈಸಿಯು ತಂಡಕ್ಕೆ ಸೇರಿಸಿಕೊಂಡಿದೆ. 32 ವರ್ಷದ ಹೆನ್ರಿ ನ್ಯೂಜಿಲೆಂಡ್‌ ಪರ 25 ಟೆಸ್ಟ್‌, 82 ಏಕದಿನ ಹಾಗೂ 17 ಟಿ20 ಪಂದ್ಯಗಳನ್ನಾಡಿದ್ದಾರೆ. ಐಪಿಎಲ್‌ನಲ್ಲಿ ಅವರು ಚೆನ್ನೈ, ಪಂಜಾಬ್‌ ಪರ ಆಡಿದ್ದರು.

ಐಪಿಎಲ್ 2022 ಮತ್ತು 2023ರ ಅವಧಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ವಿಲ್ಲಿ ಅವರನ್ನು ಸೂಪರ್ ಜೈಂಟ್ಸ್‌ ತಂಡ ಕಳೆದ ವರ್ಷ ಹರಾಜಿನಲ್ಲಿ ಖರೀದಿಸಿತ್ತು. ಕಳೆದ ಎರಡು ತಿಂಗಳುಗಳಿಂದ ಬಿಡುವಿಲ್ಲದ ಆಟದಿಂದಾಗಿ ಆಯಾಸಗೊಂಡಿದ್ದಾಗಿ ಹೇಳಿರುವ ವಿಲ್ಲಿ, ಐಎಲ್‌ಟಿ ಲೀಗ್‌ನಲ್ಲಿ ಅಬುಧಾಬಿ ನೈಟ್‌ ರೈಡರ್ಸ್‌ ಮತ್ತು ಪಿಎಸ್‌ಎಲ್‌ನಲ್ಲಿ ಮುಲ್ತಾನ್‌ ಸುಲ್ತಾನ್ಸ್‌ ಪರ ಆಡಿದ್ದರು.

1500+ ಸಿಕ್ಸರ್ ಸಿಡಿಸಿ 2ನೇ ಸ್ಥಾನದಲ್ಲಿದ್ರೂ RCB ಕಪ್ ಗೆದ್ದಿಲ್ಲ, ಫಸ್ಟ್ ಪ್ಲೇಸಲ್ಲಿರೋ ತಂಡ ಕಪ್ ಗೆದ್ದಿದ್ಯಾ?

ವಿಲ್ಲಿ ಲಖನೌ ತಂಡದಿಂದ ಹೊರಬೀಳುತ್ತಿರುವ ಇಂಗ್ಲೆಂಡ್‌ನ 2ನೇ ಆಟಗಾರ. ಈ ಮುಂಚೆ ಮಾರ್ಕ್‌ ವುಡ್‌ ಅವರನ್ನು ಮುಂಬರುವ ಟಿ20 ವಿಶ್ವಕಪ್‌ ಹಿನ್ನೆಲೆ ಕಾರ್ಯದೊತ್ತಡ ತಗ್ಗಿಸುವ ಸಲುವಾಗಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಯು ಐಪಿಎಲ್‌ನಿಂದ ಹೊರಗಿರಲು ಸೂಚಿಸಿತ್ತು. ನಂತರ ವುಡ್‌ ಐಪಿಎಲ್‌ನಿಂದ ಹಿಂದೆ ಸರಿದಿದ್ದರು. ಅವರ ಬದಲಿಗೆ ವೆಸ್ಟ್ ಇಂಡೀಸ್‌ನ ವೇಗಿ ಶಮಾರ್‌ ಜೋಜೆಫ್‌ ಲಖನೌ ತಂಡ ಸೇರ್ಪಡೆಯಾಗಿದ್ದರು.

Follow Us:
Download App:
  • android
  • ios