ಸೋಲಿನಿಂದ ಕಂಗೆಟ್ಟರೂ ಬೆಂಗಳೂರಿಗರ ಹೃದಯ ಗೆದ್ದ ಆರ್‌ಸಿಬಿ, ಕೆರೆ ಮರುಜೀವಕ್ಕೆ ನೆರವು!
ಐಪಿಎಲ್ 2024 ಟೂರ್ನಿಯಲ್ಲಿ ಆರ್‌ಸಿಬಿ ಸತತ ಸೋಲಿನಿಂದ ಕಂಗೆಟ್ಟಿದೆ. ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಆರ್‌ಸಿಬಿ ಆಟ ಅಭಿಮಾನಿಗಳಿಗೆ ಬೇಸರ ತರಿಸಿದೆ.ಆದರೆ ಆರ್‌ಸಿಬಿ ಬೆಂಗಳೂರಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬೆಂಗಳೂರಿನ 3 ಕೆರೆಗಳ ಅಭಿವೃದ್ಧಿಗೆ ಆರ್‌ಸಿಬಿ ನೆರವು ನೀಡಿದೆ.
ಬೆಂಗಳೂರು(ಏ.19) ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. 7 ಪಂದ್ಯದಲ್ಲಿ 6 ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆರ್‌ಸಿಬಿಯ ಸತತ ಸೋಲು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಆನ್‌ಫೀಲ್ಡ್‌ನಲ್ಲಿ ಆರ್‌ಸಿಬಿ ಆಟ ಬೇಸರ ತರಿಸಿದರೆ , ಆಫ್ ದಿ ಫೀಲ್ಡ್‌ನಲ್ಲಿ ಆರ್‌ಸಿಬಿ ನಡೆಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಆರ್‌ಸಿಬಿಯ ಹಸಿರೀಕರಣ ಯೋಜನೆ ಭಾಗವಾಗಿ ಬೆಂಗಳೂರಿನ ಮೂರು ಕೆರೆಗಳ ಅಭಿವೃದ್ಧಿಗೆ ನೆರವು ನೀಡಿದೆ.
ಇಂಡಿಯಾ ಕೇರ್ಸ್ ಫೌಂಡೇಶನ್ ವರದಿ ಪ್ರಕಾರ, ಇಟ್ಟಗಲಪುರ ಕೆರೆ, ಸದೇನಹಳ್ಳಿ ಕೆರೆ ಹಾಗೂ ಕಣ್ಣೂರು ಕೆರೆಗಳ ಅಭಿವೃದ್ಧಿಗೆ ಆರ್‌ಸಿಬಿ ಆರ್ಥಿಕೆ ನರೆವು ನೀಡಿದೆ. ಮೂಲಕ ಬೆಂಗಳೂರಿನ ನೀರು ಸಮಸ್ಯೆಗೆ ಆರ್‌ಸಿಬಿ ತನ್ನ ಕೈಲಾದಷ್ಟು ನರೆವು ನೀಡಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಆರ್‌ಸಿಬಿ ಫ್ರಾಂಚೈಸಿ ಈ ಕುರಿತು ಬೆಂಗಳೂರು ಅಧಿಕಾರಿಗಳ ಜೊತೆ ಚರ್ಚಿಸಿತ್ತು
ಕಾಮೆಂಟೇಟರ್ To ಗ್ರೇಟ್ ಫಿನಿಶರ್: ಟೀಕಾಕಾರರ ಬಾಯಿ ಮುಚ್ಚಿಸಿದ ಡಿಕೆ ಬಾಸ್..!
ಕಾವೇರಿ ನೀರು ಪೂರೈಕೆಯಾಗದ ಪ್ರದೇಗಳನ್ನು ಗುರುತಿಸಿ ಇಲ್ಲಿನ ಕೆರೆಗಳನ್ನು ಅಭಿವೃದ್ಧಿಪಡಿಸಲು ನೀಲ ನಕ್ಷೆ ತಯಾರಿಸಲಾಗಿತ್ತು. ಆರ್‌ಸಿಬಿಯ ಗೋ ಗ್ರೀನ್ ಯೋಜನೆ ಭಾಗವಾಗಿ ಮೂರು ಕೆರೆಗಳ ಮರು ಜೀವನಕ್ಕೆ ನರೆವು ನೀಡಿದೆ. ಇಟ್ಟಗಲಪುರ ಕೆರೆಯಿಂದ ಬರೋಬ್ಬರಿ 1.20 ಲಕ್ಷ ಟನ್ ಹೂಳೆತ್ತಲಾಗಿದೆ. ಪ್ಲಾಸ್ಟಿಕ್, ಕಸಗಳನ್ನು ತೆಗೆದು ಕೆರೆಗೆ ಸಂಪೂರ್ಣವಾಗಿ ಮರು ಜೀವನ ನೀಡಲಾಗಿದೆ. ಇಟ್ಟಗಲಪುರ ಕೆರೆಯಿಂದ 52 ರೈತ ಕುಟುಂಬಗಳು ತಮ್ಮ ಜಮೀನಿಗೆ ನೀರು ಬಳಸಿಕೊಳ್ಳುತ್ತಿದೆ. ಇದೀಗ ಕೆರೆ ಹೂಳೆತ್ತೆ, ಸ್ವಚ್ಚ ಮಾಡಿದ ಬಳಿಕ ಕೆರೆಯ ವಿಸ್ತೀರ್ಣ, ನೀರಿನ ಪ್ರಮಾಣ 17 ಏಕರೆಗೆ ವಿಸ್ತಾರಗೊಂಡಿದೆ.
ಕಣ್ಣೂರು ಕೆರೆ ಬಳಿಕ ಔಷಧಿ ಸಸ್ಯಗಳ ಪಾರ್ಕ್, ಬಿದಿರಿನ ಪಾರ್ಕ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಕೆರೆಗಳ ಅಭಿವೃದ್ಧಿಯಿಂದ ಇಲ್ಲಿನ ನೀರಿನ ಸಮಸ್ಯೆಗಳಿಗೆ ಉತ್ತರವಾಗಲಿದೆ. ಹಲವು ಕುಟುಂಬಗಳಿಗೆ ಇದೇ ಕೆರೆಗಳೇ ಆಸರೆಯಾಗಿದೆ. ಕಸ, ಪ್ಲಾಸ್ಟಿಕ್, ಹೂಳುಗಳಿಂದ ತುಂಬಿದ್ದ ಕೆರೆಯಲ್ಲಿ ಶುದ್ದ ನೀರಿನ ಕೊರತೆ ಇತ್ತು. ಇದೀಗ ಪರಿಸ್ಥಿತಿ ಬದಲಾಗಿದೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 6 ಪಂದ್ಯ ಸೋತಿರುವ ಆರ್‌ಸಿಬಿ ಪ್ಲೇ ಆಫ್ ಕನಸು ಕಮರಿಹೋಗಿಲ್ಲ. ಇನ್ನುಳಿದ ಪಂದ್ಯ ಗೆದ್ದು ಪ್ಲೇ ಆಫ್ ಸ್ಥಾನಕ್ಕೇರುವ ಅವಕಾಶವಿದೆ. ಆರ್‌ಸಿಬಿ ಬೌನ್ಸ್ ಬ್ಯಾಕ್ ಮಾಡಲಿದೆ ಅನ್ನೋ ವಿಶ್ವಾಸ ಅಭಿಮಾನಿಗಳಲ್ಲಿದೆ. ಜೊತೆಗೆ ಆತಂಕವೂ ಇದೆ.
549 ರನ್, 81 ಬೌಂಡ್ರಿ: ಆರ್‌ಸಿಬಿ-ಸನ್‌ರೈಸರ್ಸ್ ನಡುವಿನ ಪಂದ್ಯದಲ್ಲಿ ಹಲವು ರೆಕಾರ್ಡ್ಸ್ ನುಚ್ಚುನೂರು..!