ಸತತ 4 ಪಂದ್ಯಗಳನ್ನು ಗೆದ್ದಿದ್ದ ರಾಜಸ್ಥಾನ ರಾಯಲ್ಸ್‌, ಕಳೆದ ಪಂದ್ಯದಲ್ಲಿ ಗುಜರಾತ್‌ಗೆ ಶರಣಾಗಿತ್ತು. ರಾಜಸ್ಥಾನ ಕಳೆದ 6 ಆವೃತ್ತಿಗಳಲ್ಲಿ ಕೇವಲ 2ರಲ್ಲಿ ಪ್ಲೇ-ಆಫ್‌ ಪ್ರವೇಶಿಸಿದ್ದು, ಈ ಸಲ ಪ್ಲೇ-ಆಫ್‌ಗೇರಬೇಕಿದ್ದರೆ, ಜಯದ ಲಯಕ್ಕೆ ಮರಳಬೇಕಿದೆ.

ಮುಲ್ಲಾನ್‌ಪುರ(ಏ.13): ರಾಜಸ್ಥಾನ ರಾಯಲ್ಸ್‌ ಪ್ರತಿ ಬಾರಿಯಂತೆ ಈ ಸಲವೂ ಆರಂಭದಲ್ಲಿ ಅಬ್ಬರಿಸಿ ಬಳಿಕ ಮಂಕಾಗುತ್ತದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಶುರುವಾಗಿರುವಾಗಲೇ, ತಂಡಕ್ಕೆ ಶನಿವಾರ ಮಹತ್ವದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರಾಗಲಿದೆ. 

ಸತತ 4 ಪಂದ್ಯಗಳನ್ನು ಗೆದ್ದಿದ್ದ ರಾಜಸ್ಥಾನ ರಾಯಲ್ಸ್‌, ಕಳೆದ ಪಂದ್ಯದಲ್ಲಿ ಗುಜರಾತ್‌ಗೆ ಶರಣಾಗಿತ್ತು. ರಾಜಸ್ಥಾನ ಕಳೆದ 6 ಆವೃತ್ತಿಗಳಲ್ಲಿ ಕೇವಲ 2ರಲ್ಲಿ ಪ್ಲೇ-ಆಫ್‌ ಪ್ರವೇಶಿಸಿದ್ದು, ಈ ಸಲ ಪ್ಲೇ-ಆಫ್‌ಗೇರಬೇಕಿದ್ದರೆ, ಜಯದ ಲಯಕ್ಕೆ ಮರಳಬೇಕಿದೆ. ತಂಡದ ಬ್ಯಾಟಿಂಗ್‌ ಪಡೆ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಮೊದಲು ಬ್ಯಾಟ್‌ ಮಾಡಿದಾಗ ತಂಡ ಗಳಿಸಿದ ಕನಿಷ್ಠ ಮೊತ್ತವೇ 185 ರನ್‌. ಈ ಪಂದ್ಯದಲ್ಲಿ ಬೌಲಿಂಗ್‌ ಪ್ರದರ್ಶನ ತೋರಬೇಕಿದೆ.

ನನ್ನ ವಿರುದ್ಧ ಕುಸ್ತಿ ಫೆಡರೇಶನ್‌ ಷಡ್ಯಂತ್ರ: ವಿನೇಶ್‌ ಫೋಗಟ್‌ ಗಂಭೀರ ಆರೋಪ

ರಾಜಸ್ಥಾನ ರಾಯಲ್ಸ್ ತಂಡದ ಪರ ನಾಯಕ ಸಂಜು ಸ್ಯಾಮ್ಸನ್, ರಿಯಾನ್ ಪರಾಗ್ ಅದ್ಭುತ ಲಯದಲ್ಲಿದ್ದು, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ ಹಾಗೂ ಶಿಮ್ರೊನ್ ಹೆಟ್ಮೇಯರ್ ಅಬ್ಬರಿಸಿದರೆ, ಪಂಜಾಬ್ ಬೌಲರ್‌ಗಳು ಕಂಗಾಲಾಗೋದು ಗ್ಯಾರಂಟಿ. ಇನ್ನು ಬೌಲಿಂಗ್‌ನಲ್ಲಿ ಟ್ರೆಂಟ್ ಬೌಲ್ಟ್ ಜತೆಗೆ ಚಹಲ್ ಹಾಗೂ ಅಶ್ವಿನ್ ಕರಾರುವಕ್ಕಾದ ದಾಳಿ ನಡೆಸಬೇಕಿದೆ.

ಮತ್ತೊಂದೆಡೆ 5 ಪಂದ್ಯಗಳಲ್ಲಿ 3ರಲ್ಲಿ ಸೋತಿರುವ ಪಂಜಾಬ್‌ ಕಿಂಗ್ಸ್‌ ಸ್ಥಿರತೆ ಕಾಯ್ದುಕೊಳ್ಳಬೇಕಿದ್ದು, ತಂಡದಲ್ಲಿ ಕೆಲ ಬದಲಾವಣೆ ಅವಶ್ಯಕತೆಯೂ ಇದೆ. ಶಿಖರ್ ಧವನ್, ಜಾನಿ ಬೇರ್‌ಸ್ಟೋವ್ ಜತೆಗೆ ದುಬಾರಿ ಆಟಗಾರ ಸ್ಯಾಮ್ ಕರ್ರನ್ ಜವಾಬ್ದಾರಿಯುತ ಆಟ ಆಡಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಕಗಿಸೋ ರಬಾಡ, ಆರ್ಶದೀಪ್ ಸಿಂಗ್ ಜತೆಗೆ ಹರ್ಷಲ್ ಪಟೇಲ್ ಹಾಗೂ ಹರ್ಪ್ರಿತ್ ಬ್ರಾರ್ ಬಲಿಷ್ಠ ರಾಯಲ್ಸ್ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

ಭಾರತ ತೊರೆದು ಕೆನಡಾ ಪರ ಕ್ರಿಕೆಟ್ ಆಡಲು ಮುಂದಾಗಿದ್ದ ಬುಮ್ರಾ..! ಅಚ್ಚರಿ ಮಾಹಿತಿ ಬಿಚ್ಚಿಟ್ಟ ಪತ್ನಿ ಸಂಜನಾ

ಒಟ್ಟು ಮುಖಾಮುಖಿ: 26

ರಾಜಸ್ಥಾನ: 15

ಪಂಜಾಬ್‌: 11

ಸಂಭವನೀಯ ಆಟಗಾರರ ಪಟ್ಟಿ

ರಾಜಸ್ಥಾನ: ಯಶಸ್ವಿ ಜೈಸ್ವಾಲ್‌, ಜೋಸ್ ಬಟ್ಲರ್‌, ಸಂಜು ಸ್ಯಾಮ್ಸನ್‌ (ನಾಯಕ), ರಿಯಾನ್‌ ಪರಾಗ್, ಶಿಮ್ರೊನ್ ಹೆಟ್ಮೇಯರ್‌, ಧೃವ್ ಜುರೆಲ್‌, ರವಿಚಂದ್ರನ್ ಅಶ್ವಿನ್‌, ಕೇಶವ್‌ ಮಹರಾಜ್, ಟ್ರೆಂಟ್ ಬೌಲ್ಟ್‌, ಆವೇಶ್‌ ಖಾನ್, ಕುಲ್ದೀಪ್‌ ಸೇನ್‌, ಯುಜುವೇಂದ್ರ ಚಹಲ್‌.

ಪಂಜಾಬ್‌: ಶಿಖರ್ ಧವನ್‌ (ನಾಯಕ), ಜಾನಿ ಬೇರ್‌ಸ್ಟೋವ್‌, ಪ್ರಭ್‌ಸಿಮ್ರನ್‌, ಸ್ಯಾಮ್ ಕರ್ರನ್‌, ಸಿಕಂದರ್‌ ರಾಜಾ, ಶಶಾಂಕ್‌ ಸಿಂಗ್, ಜಿತೇಶ್‌ ಶರ್ಮಾ, ಅಶುತೋಷ್‌, ಹಪ್ರೀತ್ ಬ್ರಾರ್‌, ಹರ್ಷಲ್‌ ಪಟೇಲ್, ಕಗಿಸೋ ರಬಾಡ, ಅರ್ಶ್‌ದೀಪ್‌ ಸಿಂಗ್.

ಪಂದ್ಯ ಆರಂಭ: ಸಂಜೆ 7.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ