IPL 2024: ಹೊಸ ಸೀಸನ್‌ನಲ್ಲಿ ಮೂವರು ಹೊಸ ನಾಯಕರು ರೆಡಿ...!
ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್ IPL ಆರಂಭಕ್ಕಿನ್ನು ಎರಡೇ ಎರಡು ವಾರ ಬಾಕಿಯಿದೆ. ಈಗಾಗ್ಲೇ ಎಲ್ಲಾ ತಂಡಗಳು ಟೂರ್ನಿಗಾಗಿ ಭರ್ಜರಿ ಪ್ರಿಪರೇಷನ್ ನಡೆಸಿವೆ. ಈ ನಡುವೆ ಕೆಲ ತಂಡಗಳು ಹೊಸ ನಾಯಕರೊಂದಿಗೆ ಅಖಾಡಕ್ಕಿಳಿಯುತ್ತಿವೆ.
ಬೆಂಗಳೂರು(ಮಾ.06): ಐಪಿಎಲ್ ಸೀಸನ್ 17 ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಅಭಿಮಾನಿಗಳು ಕಲರ್‌ಫುಲ್ ಟೂರ್ನಿಗಾಗಿ ಚಾತಕ ಪಕ್ಷಯಂತೆ ಕಾಯ್ತಿದ್ದಾರೆ. ಅದರಲ್ಲೂ ಈ ಬಾರಿಯ ಸೀಸನ್ ಈ ಮೂರು ತಂಡಗಳಿಗೆ ಸಖತ್ ಸ್ಪೆಷಲ್ ಆಗಿರಲಿದೆ. ಯಾವು ಆ ತಂಡಗಳು..? ಏನ್ ಸ್ಪೆಷಲ್ ಅಂತೀರಾ..? ಇಲ್ಲಿದೆ ನೋಡಿ ಡಿಟೇಲ್ಸ್...!
ಕಳೆದ ಬಾರಿ ಕ್ಯಾಪ್ಟನ್ ಆಗಿದ್ದವ್ರು ಈ ಬಾರಿ ಪ್ಲೇಯರ್ಸ್..!
ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್ IPL ಆರಂಭಕ್ಕಿನ್ನು ಎರಡೇ ಎರಡು ವಾರ ಬಾಕಿಯಿದೆ. ಈಗಾಗ್ಲೇ ಎಲ್ಲಾ ತಂಡಗಳು ಟೂರ್ನಿಗಾಗಿ ಭರ್ಜರಿ ಪ್ರಿಪರೇಷನ್ ನಡೆಸಿವೆ. ಈ ನಡುವೆ ಕೆಲ ತಂಡಗಳು ಹೊಸ ನಾಯಕರೊಂದಿಗೆ ಅಖಾಡಕ್ಕಿಳಿಯುತ್ತಿವೆ. ಇನ್ನು ಕೆಲ ತಂಡಗಳಿಗೆ ಹಳೆಯ ನಾಯಕರ ರೀ ಎಂಟ್ರಿ ಪಕ್ಕಾ ಆಗಿದೆ. ಆದ್ರೆ, ಕಳೆದ ಸೀಸನ್ನಲ್ಲಿ ನಾಯಕರಾಗಿದ್ದವ್ರು ಈ ಬಾರಿ ಆಟಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.
IPL 2024: ಈ ಬಾರಿ ಐಪಿಎಲ್ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಈ ಕ್ರಿಕೆಟ್ ಸ್ಟಾರ್ಸ್..!
ರೋಹಿತ್ ಶರ್ಮಾ..! ಮುಂಬೈ ಇಂಡಿಯನ್ಸ್ ತಂಡದ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್. ರೋಹಿತ್ ನಾಯಕತ್ವದ್ಲಲಿ ಮುಂಬೈ 5 ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು. ಇಷ್ಟೆಲ್ಲಾ ಇದ್ರೂ, ಮುಂಬೈ ಫ್ರಾಂಚೈಸಿ, ರೋಹಿತ್ ಶರ್ಮಾರನ್ನ ನಾಯಕತ್ವದಿಂದ ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದೆ. ರೋಹಿತ್ ಜಸ್ಟ್ ಪ್ಲೇಯರ್ ಆಗಿ ಬ್ಯಾಟ್ ಬೀಸಲಿದ್ದಾರೆ.
IPL 16ರ ಸೀಸನ್‌ಗೂ ಮುನ್ನ, ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಬಿಟ್ಟು, ಗುಜರಾತ್ ತಂಡ ಸೇರಿದ್ರು. ಎರಡು ಸೀಸನ್‌ಗಳಲ್ಲಿ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ರು. ನಾಯಕನಾಗಿ ಮೊದಲ ಪ್ರಯತ್ನದಲ್ಲೇ ಕಪ್ ಗೆದ್ದಿದ್ರು. ಆದ್ರೀಗ, ಟ್ರೇಡ್ ವೀಂಡೋ ಮೂಲಕ ಮತ್ತೆ ಹಳೆಯ ತಂಡ ಸೇರಿದ್ದಾರೆ. ಅಲ್ಲದೇ, ತಂಡದ ನಾಯಕನ ಪಟ್ಟ ಅಲಂಕರಿಸಿದ್ದಾರೆ.
ಡಬ್ಲ್ಯುಪಿಎಲ್: ಡೆಲ್ಲಿ ಕ್ಯಾಪಿಟಲ್ಸ್‌ಗೆ ಶರಣಾದ ಮುಂಬೈ ಇಂಡಿಯನ್ಸ್
ನಾಯಕನಾಗಿ ಸಕ್ಸಸ್ ಆಗ್ತಾರಾ ಪಂಜಾಬ್ ಫುತ್ತರ್ ಗಿಲ್..!
ಶುಭ್‌ಮನ್ ಗಿಲ್..! ಕ್ರಿಕೆಟ್ ಜಗತ್ತಿನ ಫ್ಯೂಚರ್ ಸೂಪರ್ ಸ್ಟಾರ್. ಭಾರತೀಯ ಕ್ರಿಕೆಟ್ನ ಪ್ರಿನ್ಸ್. ಈ ಪಂಜಾಬ್ ಪುತ್ತರ್ ಅದ್ಭುತ ಬ್ಯಾಟಿಂಗ್ ಮೂಲಕ ಹವಾ ಸೃಷ್ಟಿಸಿದ್ದಾರೆ. ಈಗಾಗಲೇ ಹಲವು ದಾಖಲೆಗಳನ್ನ ಬ್ರೇಕ್ ಮಾಡಿದ್ದಾರೆ. IPLನಲ್ಲೂ ಗುಜರಾತ್ ಟೈಟನ್ಸ್ ಪರ ಆರಂಭಿಕರಾಗಿ ಅಬ್ಬರಿಸ್ತಿದ್ದಾರೆ. ಆದ್ರೆ, 2024ರ IPL ಗಿಲ್ ಪಾಲಿಗೆ ಸಖತ್ ಸ್ಪೆಷಲ್ ಅಗಿರಲಿದೆ. ಯಾಕಂದ್ರೆ, ನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಬ್ಯಾಟಿಂಗ್ ಜೊತೆಗೆ ಕ್ಯಾಪ್ಟೆನ್ಸಿಯಲ್ಲೂ ಮಿಂಚಲು ರೆಡಿಯಾಗಿದ್ದಾರೆ.
IPLನಲ್ಲೂ ಕ್ಯಾಪ್ಟನ್ ಆಗಿ ಮಿಂಚ್ತಾರಾ ಪ್ಯಾಟ್ ಕಮಿನ್ಸ್..!
ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೂ ಹೊಸ ನಾಯಕನ ನೇಮಕ ವಾಗಿದೆ. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ಗೆ, ಆರೇಂಜ್ ಆರ್ಮಿಯ ಕ್ಯಾಪ್ಟನ್ ಪಟ್ಟ ಒಲಿದಿದೆ. IPL ಮಿನಿ ಆಕ್ಷನ್ನಲ್ಲಿ ಸನ್ರೈಸರ್ಸ ಹೈದ್ರಾಬಾದ್ ಫ್ರಾಂಚೈಸಿ, 20.50 ಕೋಟಿ ನೀಡಿ ಕಮಿನ್ಸ್ರನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ನಾಯಕರಾಗಿ ಕಮಿನ್ಸ್ ಸೂಪರ್ ಟ್ರ್ಯಾಕ್ ರೆಕಾರ್ಡ್, ಹೊಂದಿದ್ದಾರೆ. ಕಮಿನ್ಸ್ ನಾಯಕತ್ವದಲ್ಲಿ ಕಳೆದ ವರ್ಷ ಆಸ್ಟ್ರೇಲಿಯಾ ಎರಡು ICC ಟ್ರೋಫಿ ಗೆದ್ದುಕೊಂಡಿತ್ತು.
KKR ಸೈನ್ಯಕ್ಕೆ ಮತ್ತೆ ಶ್ರೇಯಸ್ ಅಯ್ಯರ್ ನಾಯಕ..!
ಈ ಮೂವರ ಜೊತೆಗೆ ಶ್ರೇಯಸ್ ಅಯ್ಯರ್ ಕೂಡ ಕ್ಯಾಪ್ಟನ್ ಆಗಿ ಕಮ್ಬ್ಯಾಕ್ ಮಾಡಲು ಕಾಯ್ತಿದ್ದಾರೆ. 2022ರಲ್ಲಿ KKR ತಂಡವನ್ನ ಮುನ್ನಡೆಸಿದ್ದ ಶ್ರೇಯಸ್, ಇಂಜುರಿಯಿಂದಾಗಿ ಕಳೆದ ಸೀಸನ್ನಲ್ಲಿ ಆಡಿರಲಿಲ್ಲ. ಅಯ್ಯರ್ ಜೊತೆಗೆ ರಿಷಭ್ ಪಂತ್ ಸಹಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಾರಥಿ ಯಾಗೋಕೆ ಕಾಯ್ತಿದ್ದಾರೆ. ಆದ್ರೆ, ಪಂತ್ IPL ಆಡ್ತಾರೋ..ಇಲ್ವೋ ಅನ್ನೋದೆ ಇನ್ನು ಪಕ್ಕಾ ಆಗಿಲ್ಲ.
ಅದೇನೆ ಇರಲಿ, ಹೊಸ ನಾಯಕರು ತಮ್ಮ ತಂಡಗಳಿಗೆ ಸಕ್ಸಸ್ ತಂದುಕೊಡ್ತಾರಾ..? ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಪ್ರೂವ್ ಮಾಡ್ತಾರಾ..? ಅನ್ನೋದನ್ನ ಕಾದು ನೋಡಬೇಕಿದೆ.