Asianet Suvarna News Asianet Suvarna News

ಡಬ್ಲ್ಯುಪಿಎಲ್‌: ಡೆಲ್ಲಿ ಕ್ಯಾಪಿಟಲ್ಸ್‌ಗೆ ಶರಣಾದ ಮುಂಬೈ ಇಂಡಿಯನ್ಸ್

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಜೆಮಿಮಾ ರೋಡ್ರಿಗ್ಸ್‌ ಹಾಗೂ ನಾಯಕಿ ಮೆಗ್‌ ಲ್ಯಾನಿಂಗ್‌ರ ಅರ್ಧಶತಕಗಳ ನೆರವಿನಿಂದ 20 ಓವರಲ್ಲಿ 4 ವಿಕೆಟ್‌ ನಷ್ಟಕ್ಕೆ 192 ರನ್‌ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಮುಂಬೈ 20 ಓವರಲ್ಲಿ 8 ವಿಕೆಟ್‌ಗೆ 162 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

WPL 2024 Delhi Capitals thrash Mumbai Indians by 29 runs kvn
Author
First Published Mar 6, 2024, 9:20 AM IST

ನವದೆಹಲಿ(ಮಾ.6): ಡೆಲ್ಲಿ ಕ್ಯಾಪಿಟಲ್ಸ್‌ ಡಬ್ಲ್ಯುಪಿಎಲ್‌ 2ನೇ ಆವೃತ್ತಿಯಲ್ಲಿ ತನ್ನ ಅಮೋಘ ಪ್ರದರ್ಶನವನ್ನು ಮುಂದುವರಿಸಿದ್ದು, 4ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಮಂಗಳವಾರ ನಡೆದ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ 29 ರನ್‌ಗಳ ಗೆಲುವು ಸಾಧಿಸಿದ ಡೆಲ್ಲಿ, ತನ್ನ ನೆಟ್‌ ರನ್‌ರೇಟ್‌ ಅನ್ನೂ ಉತ್ತಮಪಡಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಜೆಮಿಮಾ ರೋಡ್ರಿಗ್ಸ್‌ ಹಾಗೂ ನಾಯಕಿ ಮೆಗ್‌ ಲ್ಯಾನಿಂಗ್‌ರ ಅರ್ಧಶತಕಗಳ ನೆರವಿನಿಂದ 20 ಓವರಲ್ಲಿ 4 ವಿಕೆಟ್‌ ನಷ್ಟಕ್ಕೆ 192 ರನ್‌ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಮುಂಬೈ 20 ಓವರಲ್ಲಿ 8 ವಿಕೆಟ್‌ಗೆ 162 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

Ranji Trophy Semifinal ಜಯಕ್ಕಾಗಿ ವಿದರ್ಭ-ಮ.ಪ್ರದೇಶ ಹೋರಾಟ

ಪವರ್‌-ಪ್ಲೇನಲ್ಲೇ ಮುಂಬೈ, ಯಸ್ತಿಕಾ (06), ನಥಾಲಿ ಸ್ಕೀವರ್‌ ಬ್ರಂಟ್‌ (05), ಹರ್ಮನ್‌ಪ್ರೀತ್‌ ಕೌರ್‌ (06) ಹಾಗೂ ಹೇಯ್ಲಿ ಮ್ಯಾಥ್ಯೂಸ್‌ (29)ರ ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊನೆಯಲ್ಲಿ ಅಮನ್‌ಜೋತ್‌ ಕೌರ್‌ 27 ಎಸೆತದಲ್ಲಿ 42, ಸಜೀವನ್‌ ಸಜನಾ 14 ಎಸೆತದಲ್ಲಿ ಔಟಾಗದೆ 24 ರನ್‌ ಗಳಿಸಿ ತಂಡವನ್ನು ಹೀನಾಯ ಸೋಲಿನಿಂದ ಪಾರು ಮಾಡಿದರು.

ಇದಕ್ಕೂ ಮುನ್ನ ಜೆಮಿಮಾ 33 ಎಸೆತದಲ್ಲಿ 69 ರನ್‌, ಲ್ಯಾನಿಂಗ್‌ 38 ಎಸೆತದಲ್ಲಿ 53 ರನ್‌ ಸಿಡಿಸಿದ ಪರಿಣಾಮ ಡೆಲ್ಲಿ ಬೃಹತ್‌ ಮೊತ್ತ ಕಲೆಹಾಕಿತು.

ಸ್ಕೋರ್‌: ಡೆಲ್ಲಿ 192/4 (ಜೆಮಿಮಾ 69*, ಲ್ಯಾನಿಂಗ್‌ 53, ಪೂಜಾ 1-20), ಮುಂಬೈ 163/8 (ಅಮನ್‌ಜೋನ್‌ 42, ಸಜನಾ 24*, ಜೊನಾನ್ಸನ್‌ 3-21)

ಬೆಂಗಳೂರು ಫ್ಯಾನ್ಸ್‌ ಬಗ್ಗೆ ಸ್ಮೃತಿ ಮಂಧನಾ ಮೆಚ್ಚುಗೆ

ಬೆಂಗಳೂರು: ಆರ್‌ಸಿಬಿ ಅಭಿಮಾನಿಗಳ ಬಗ್ಗೆ ತಂಡದ ನಾಯಕಿ ಸ್ಮೃತಿ ಮಂಧನಾ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) 2ನೇ ಆವೃತ್ತಿಗೆ ಬೆಂಗಳೂರಲ್ಲಿ ಸಿಕ್ಕ ಪ್ರತಿಕ್ರಿಯೆ ಮಹಿಳಾ ಕ್ರಿಕೆಟ್‌ಗೆ ದೊರೆತ ಅತಿದೊಡ್ಡ ಯಶಸ್ಸು ಎಂದು ಬಣ್ಣಿಸಿರುವ ಸ್ಮೃತಿ, ಇದೇ ರೀತಿ ಎಲ್ಲೆಡೆ ಪ್ರೋತ್ಸಾಹ ಸಿಗಲಿ ಎಂದು ಆಶಿಸುವುದಾಗಿ ಹೇಳಿದ್ದಾರೆ. ಬೆಂಗಳೂರಲ್ಲಿ ಆರ್‌ಸಿಬಿ ಆಡಿದ ಪ್ರತಿ ಪಂದ್ಯಕ್ಕೂ ಕನಿಷ್ಠ 25ರಿಂದ 30 ಸಾವಿರ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದರು. 

Ranji Trophy: ತಮಿಳುನಾಡು ಮಣಿಸಿ 48ನೇ ಬಾರಿ ಫೈನಲ್‌ಗೆ ಮುಂಬೈ..!

ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ಒಟ್ಟು 5 ಪಂದ್ಯಗಳನ್ನಾಡಿ ಮೂರು ಗೆಲುವು ಹಾಗೂ ಎರಡು ಸೋಲು ಅನುಭವಿಸಿದೆ. ಇದೀಗ ವುಮೆನ್ಸ್ ಪ್ರೀಮಿಯರ್ ಲೀಗ್ ದ್ವಿತಿಯಾರ್ಧದ ಚರಣ ಡೆಲ್ಲಿಯಲ್ಲಿ ಆರಂಭವಾಗಿದೆ. 
 

Follow Us:
Download App:
  • android
  • ios