Asianet Suvarna News Asianet Suvarna News

IPL 2024 ಇಂದು ಮುಂಬೈ ಇಂಡಿಯನ್ಸ್ vs ಗುಜರಾತ್ ಟೈಟಾನ್ಸ್ ಫೈಟ್

5 ಬಾರಿ ಮುಂಬೈಯನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ರೋಹಿತ್ ಶರ್ಮಾ ಈ ಬಾರಿ ನಾಯಕನಲ್ಲ. ಮುಂಬೈ ತೊರೆದು 2022ರಲ್ಲಿ ಗುಜರಾತ್‌ ಟೈಟಾನ್ಸ್‌ಗೆ ತಮ್ಮದೇ ನಾಯಕತ್ವದಲ್ಲಿ ಪ್ರಶಸ್ತಿ ತಂದುಕೊಟ್ಟಿದ್ದ ಹಾರ್ದಿಕ್ ಪಾಂಡ್ಯ ಈಗ ಮತ್ತೆ ಮುಂಬೈಗೆ ಮರಳಿ ತಂಡದ ಸಾರಥ್ಯ ವಹಿಸುತ್ತಿದ್ದಾರೆ.

IPL 2024 Mumbai Indians take on Gujarat Titans in Ahmedabad kvn
Author
First Published Mar 24, 2024, 2:51 PM IST

ಅಹಮದಾಬಾದ್: ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ 17ನೇ ಆವೃತ್ತಿ ಐಪಿಎಲ್‌ನಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದ್ದು, ಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಾಡಲಿದೆ. ಈ ಪಂದ್ಯ ನಾಯಕತ್ವದ ವಿಚಾರದಲ್ಲಿ ಅತ್ಯಂತ ಮಹತ್ವದ್ದು ಎನಿಸಿದೆ.

5 ಬಾರಿ ಮುಂಬೈಯನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ರೋಹಿತ್ ಶರ್ಮಾ ಈ ಬಾರಿ ನಾಯಕನಲ್ಲ. ಮುಂಬೈ ತೊರೆದು 2022ರಲ್ಲಿ ಗುಜರಾತ್‌ ಟೈಟಾನ್ಸ್‌ಗೆ ತಮ್ಮದೇ ನಾಯಕತ್ವದಲ್ಲಿ ಪ್ರಶಸ್ತಿ ತಂದುಕೊಟ್ಟಿದ್ದ ಹಾರ್ದಿಕ್ ಪಾಂಡ್ಯ ಈಗ ಮತ್ತೆ ಮುಂಬೈಗೆ ಮರಳಿ ತಂಡದ ಸಾರಥ್ಯ ವಹಿಸುತ್ತಿದ್ದಾರೆ. ರೋಹಿತ್ ಶರ್ಮಾ ಸೇರಿದಂತೆ ಹಲವು ಹಿರಿಯರಿರುವ ಮುಂಬೈನಲ್ಲಿ ಹಾರ್ದಿಕ್ ಯಶಸ್ವಿಯಾಗುತ್ತಾರೊ ಎಂಬ ಕುತೂಹಲವಿದೆ. ಕಮ್‌ಬ್ಯಾಕ್ ಪಂದ್ಯ ಕೂಡಾ ಆಗಿರುವುದರಿಂದ ಹಾರ್ದಿಕ್‌ಗೆ ಟಿ20 ವಿಶ್ವಕಪ್‌ಗೂ ಮುನ್ನ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಾದ ಅನಿರ್ವಾಯತೆ ಇದೆ.

Swiss Open 2024 ಸೆಮೀಸ್‌ನಲ್ಲಿ ಕಿದಂಬಿ ಶ್ರೀಕಾಂತ್ ಸೋಲಿನೊಂದಿಗೆ ಭಾರತದ ಸವಾಲು ಅಂತ್ಯ

ಅತ್ತ ಗುಜರಾತ್‌ಗೆ ಈ ಬಾರಿ ಶುಭ್‌ಮನ್ ಗಿಲ್ ನಾಯಕ. ಕಳೆದೆರಡು ಬಾರಿಯೂ ಫೈನಲ್‌ಗೇರಿರುವ ತಂಡವನ್ನು ಈ ಬಾರಿಯೂ ಪ್ರಶಸ್ತಿ ಸುತ್ತಿಗೇರಿಸುವ ಹೊಣೆಗಾರಿಕೆ ಶುಭ್‌ಮನ್ ಗಿಲ್ ಅವರ ಹೆಗಲ ಮೇಲೆ ಇದೆ. ಗುಜರಾತ್ ಟೈಟಾನ್ಸ್‌ಗೆ ಈ ಬಾರಿ ಕೇನ್ ವಿಲಿಯಮ್ಸನ್, ಡೇವಿಡ್ ಮಿಲ್ಲರ್, ರಶೀದ್ ಖಾನ್ ಅವರಂತಹ ಆಟಗಾರರ ಬಲವಿದೆ. ತವರಿನಲ್ಲಿ ಮುಂಬೈಗೆ ಶಾಕ್ ನೀಡಲು ಗಿಲ್ ಪಡೆ ಸಜ್ಜಾಗಿದೆ.

ಸಂಭವನೀಯ ಆಟಗಾರರ ಪಟ್ಟಿ ಹೀಗಿದೆ ನೋಡಿ

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಟಿಮ್ ಡೇವಿಡ್, ಹಾರ್ದಿಕ್ ಪಾಂಡ್ಯ(ನಾಯಕ), ಮೊಹಮ್ಮದ್ ನಬಿ, ನೇಹಲ್ ವದೇರಾ, ಗೆರಾಲ್ಡ್ ಕೋಟ್ಜೀ, ಜಸ್ಪ್ರೀತ್ ಬುಮ್ರಾ, ಪೀಯೂಸ್ ಚಾವ್ಲಾ, ನುವಾನ್ ತುಷಾರ.

ಗುಜರಾತ್ ಟೈಟಾನ್ಸ್: ಶುಭ್‌ಮನ್ ಗಿಲ್(ನಾಯಕ), ಕೇನ್ ವಿಲಿಯಮ್ಸನ್, ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ವಿಜಯ್ ಶಂಕರ್, ರಶೀದ್ ಖಾನ್, ಸ್ಪೆನ್ಸರ್ ಜಾನ್ಸನ್, ಸಾಯಿ ಕಿಶೋರ್, ಮೋಹಿತ್ ಶರ್ಮಾ

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ & ಜಿಯೋ ಸಿನಿಮಾ
 

Follow Us:
Download App:
  • android
  • ios