Asianet Suvarna News Asianet Suvarna News

IPL 2024: ಕೆಕೆಆರ್‌ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದ ಚೆನ್ನೈ ಸೂಪರ್‌ ಕಿಂಗ್ಸ್‌


ತುಷಾರ್‌ ದೇಶಪಾಂಡೆ ಹಾಗೂ ರವೀಂದ್ರ ಜಡೇಜಾ ಅವರ ಸೂಪರ್‌ ಬೌಲಿಂಗ್‌ ದಾಳಿಯ ಸಹಾಯದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವನ್ನು ಸಾಧಾರಣ ಮೊತ್ತಕ್ಕೆ ಕಡಿವಾಣ ಹಾಕಿದೆ.
 

IPL 2024 Kolkata Knight Riders scores 137 runs vs CSK in Chennai san
Author
First Published Apr 8, 2024, 9:17 PM IST

ಚೆನ್ನೈ (ಏ.8): ಸ್ಪಿನ್‌ ಸ್ನೇಹಿ ಹಾಗೂ ನಿಧಾನಗತಿಯ ಪಿಚ್‌ನ ಸಂಪೂರ್ಣ ಲಾಭ ಪಡೆದುಕೊಂಡ ತುಷಾರ್‌ ದೇಶಪಾಂಡೆ ಹಾಗೂ ರವೀಂದ್ರ ಜಡೇಜಾ ಅದ್ಭುತ ಬೌಲಿಂಗ್‌ ದಾಳಿ ಸಂಘಟಿಸುವ ಮೂಲಕ ಬಲಿಷ್ಠ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದೆ. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಪೀಟರ್‌ ಸಾಲ್ಟ್‌ ವಿಕೆಟ್‌ ಕಳೆದುಕೊಂಡಿದ್ದ ಕೆಕೆಆರ್‌ ತಂಡದ ಬ್ಯಾಟಿಂಗ್‌ ಕೊನೆಯವರೆಗೂ ಲಯಕ್ಕೆ ಬರಲೇ ಇಲ್ಲ. ನಡುವೆ ಕೆಲ ಕಾಲ ಸುನೀಲ್‌ ನಾರಾಯಣ್, ಆಂಗ್‌ಕ್ರಿಶ್‌ ರಘುವಂಶಿ ಹಾಗೂ ಶ್ರೇಯಸ್‌ ಅಯ್ಯರ್‌ ಕೆಲವು ಉಪಯುಕ್ತ ರನ್‌ ಬಾರಿಸಿದ್ದರಿಂದ ಕೆಕೆಆರ್‌ ತಂಡ 9 ವಿಕೆಟ್‌ಗೆ 137 ರನ್‌ ಬಾರಿಸುವಲ್ಲಿ ಯಶಸ್ವಿಯಾಗಿದೆ.  ಚೆನ್ನೈ ಸೂಪರ್‌ ಕಿಂಗ್ಸ್‌ ಪರವಾಗಿ ಭರ್ಜರಿ ದಾಳಿ ನಡೆಸಿದ ರವೀಂದ್ರ ಜಡೇಜಾ 4 ಓವರ್‌ಗಳ ಕೋಟಾದಲ್ಲಿ ಕೇವಲ 18 ರನ್‌ ನೀಡಿ ಮೂರು ಪ್ರಮುಖ ವಿಕೆಟ್‌ ಉರುಳಿಸಿದರೆ, ವೇಗಿ ತುಷಾರ್‌ ದೇಶಪಾಂಡೆ 33 ರನ್‌ ನೀಡಿ ಮೂರು ವಿಕೆಟ್‌ ಉರುಳಿಸಿದರು. ಮುಸ್ತಾಫಿಜುರ್‌ ರೆಹಮಾನ್‌ ಕೊನೆ ಓವರ್‌ನಲ್ಲಿ 2 ವಿಕೆಟ್‌ ಉರುಳಿಸಿ ಗಮನಸೆಳೆದರು.

ಚಿದಂಬರಂ ಮೈದಾನದಲ್ಲಿಸೋಮವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ತಂಡಕ್ಕೆ ಯಾವ ಹಂತದಲ್ಲೂ ಸ್ಫೋಟಕ ಬ್ಯಾಟಿಂಗ್‌ ನಡೆಸಲು ಚೆನ್ನೈ ಬೌಲರ್‌ಗಳು ಬಿಡಲಿಲ್ಲ.ಇನ್ನಿಂಗ್ಸ್ನ್ ಮೊದಲ ಎಸೆತದಲ್ಲಿಯೇ  ಪೀಟರ್‌ ಸಾಲ್ಟ್‌ ವಿಕೆಟ್‌ ಒಪ್ಪಿಸಿದ ಬಳಿಕ 2ನೇ ವಿಕೆಟ್‌ಗೆ ಸುನೀಲ್‌ ನಾರಾಯಣ್‌ ಹಾಗೂ ಅಂಗ್‌ಕ್ರಿಶ್‌ ರಘುವಂಶಿ ಅಮೂಲ್ಯ 56 ರನ್‌ಗಳ ಜೊತೆಯಾಟವಾಡಿದರು. 18 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್‌ನೊಂದಿಗೆ 24 ರನ್‌ ಬಾರಿಸಿದ್ದ ರಘುವಂಶಿ, ರವೀಂದ್ರ ಜಡೇಜಾಗೆ ಎಲ್‌ಬಿಯಾಗಿ ಹೊರನಡೆದರು.  ಈ ಮೊತ್ತಕ್ಕೆ 4 ರನ್‌ ಸೇರಿಸುವ ವೇಳೆಗೆ 20 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್‌ನೊಂದಿಗೆ 27 ರನ್‌ ಬಾರಿಸುವ ಮೂಲಕ ಸ್ಪೋಟಕ ಆಟದ ಸೂಚನೆ ನೀಡಿದ್ದ ಸುನೀಲ್‌ ನಾರಾಯಣ್‌ ಅವರ ವಿಕೆಟ್‌ಅನ್ನೂ ಉರುಳಿಸಿ ರವೀಂದ್ರ ಜಡೇಜಾ ತಂಡಕ್ಕೆ ಮೇಲುಗೈ ನೀಡಿದರು.

T20 World Cup 2024 ಪಂತ್-ಸೂರ್ಯನಿಗೆ ಈ ಆಟಗಾರನೇ ಕಂಠಕವಾಗಬಲ್ಲ: ಭವಿಷ್ಯ ನುಡಿದ ವಿರೇಂದ್ರ ಸೆಹ್ವಾಗ್

ಕಳೆದ ಪಂದ್ಯದಲ್ಲಿ ಆರ್‌ಸಿಬಿಕೆ ಕಂಟಕವಾಗಿ ಕಾಡಿದ್ದ ವೆಂಕಟೇಶ್‌ ಅಯ್ಯರ್‌ ಮಿಂಚಲು ವಿಫಲರಾದರು. 8 ಎಸೆತಗಳಲ್ಲಿ 3 ರನ್‌ ಸಿಡಿಸಿದ್ದ ಇವರನ್ನು ರವೀಂದ್ರ ಜಡೇಜಾ ಔಟ್‌ ಮಾಡಿದರು. ರಮಣ್‌ದೀಪ್‌ ಸಿಂಗ್‌ ಹಾಗೂ ರಿಂಕು ಸಿಂಗ್‌ ಆಟದಲ್ಲಿ ಹೆಚ್ಚೇನೂ ತಂಡಕ್ಕೆ ಸಹಾಯವಾಗಲಿಲ್ಲ. ಸ್ಪೋಟಕ್ ಬ್ಯಾಟ್ಸ್‌ಮನ್‌ ಆಂಡ್ರೆ ರಸೆಲ್‌ 10 ಎಸೆತಗಳಲ್ಇ 10 ರನ್‌ ಬಾರಿಸಿ ಔಟಾದರು. ಕೊನೇ ಓವರ್‌ಗಳಲ್ಲೂ ಕೆಕೆಆರ್‌ ತಂಡ ರನ್‌ ಬಾರಿಸಲು ತಿಣುಕಾಡಿದ್ದರಿಂದ ತಂಡದ ಮೊತ್ತ 150 ದಾಟಲು ಕೂಡ ಸಾಧ್ಯವಾಗಲಿಲ್ಲ.

 

RCB ಸೋಲಿಗೆ ವಿರಾಟ್ ಕೊಹ್ಲಿ ಕಾರಣನಾ..? ಟ್ರೋಲ್ ಮಾಡೋ ಮುನ್ನ ಇಲ್ಲೊಮ್ಮೆ ನೋಡಿ

Follow Us:
Download App:
  • android
  • ios