RCB ಸೋಲಿಗೆ ವಿರಾಟ್ ಕೊಹ್ಲಿ ಕಾರಣನಾ..? ಟ್ರೋಲ್ ಮಾಡೋ ಮುನ್ನ ಇಲ್ಲೊಮ್ಮೆ ನೋಡಿ

ರಾಜಸ್ಥಾನ ರಾಯಲ್ಸ್ ಎದುರು ಏಕಾಂಗಿಯಾಗಿ ವಿರಾಟ್ ಕೊಹ್ಲಿ ಶತಕ ಸಿಡಿಸಿದರೂ, ಸೋಲಿಗೆ ಕೊಹ್ಲಿಯೇ ಕಾರಣ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ನೀವು ಕೊಹ್ಲಿಯನ್ನು ಟ್ರೋಲ್ ಮಾಡುವ ಮುನ್ನ ಈ ಸ್ಟೋರಿಯನ್ನು ನೋಡಲೇಬೇಕು.

IPL 2024 Was Virat Kohli Slow Knock the reason why RCB lost to Rajasthan Royals here you all need to know kvn

ಜೈಪುರ(ಏ.08): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹ್ಯಾಟ್ರಿಕ್ ಸೋಲು ಕಂಡಿದೆ. ರಾಜಸ್ಥಾನ ರಾಯಲ್ಸ್ ಎದುರು ಆರ್‌ಸಿಬಿ ತಂಡವು ಸೋಲು ಕಾಣುವ ಮೂಲಕ ಪ್ಲೇ ಆಫ್‌ ಹಾದಿ ಮತ್ತಷ್ಟು ಕಠಿಣ ಎನಿಸತೊಡಗಿದೆ. ಇದೆಲ್ಲದರ ನಡುವೆ ಮಳೆ ನಿಂತರೂ ತಕ್ಷಣಕ್ಕೆ ಮಳೆ ಹನಿ ನಿಲ್ಲೊಲ್ಲ ಎನ್ನುವಂತೆ ಪಂದ್ಯ ಮುಗಿದು ಎರಡು ದಿನಗಳೇ ಕಳೆದರೂ, ಆರ್‌ಸಿಬಿ-ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದ ಬಗೆಗಿನ ಮಾತುಗಳು ಕಡಿಮೆಯಾಗಿಲ್ಲ. ರಾಜಸ್ಥಾನ ರಾಯಲ್ಸ್ ಎದುರು ಏಕಾಂಗಿಯಾಗಿ ವಿರಾಟ್ ಕೊಹ್ಲಿ ಶತಕ ಸಿಡಿಸಿದರೂ, ಸೋಲಿಗೆ ಕೊಹ್ಲಿಯೇ ಕಾರಣ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ನೀವು ಕೊಹ್ಲಿಯನ್ನು ಟ್ರೋಲ್ ಮಾಡುವ ಮುನ್ನ ಈ ಸ್ಟೋರಿಯನ್ನು ನೋಡಲೇಬೇಕು.

ಐಪಿಎಲ್‌ನಲ್ಲಿ ಕಿಂಗ್ ಕೊಹ್ಲಿ 8ನೇ ಶತಕದ ದಾಖಲೆ

ಪ್ರತಿ ಪಂದ್ಯದಲ್ಲೂ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ವಿರಾಟ್‌ ಕೊಹ್ಲಿ, ಐಪಿಎಲ್‌ನಲ್ಲಿ ತಮ್ಮ 8ನೇ ಶತಕ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಐಪಿಎಲ್‌ ಇತಿಹಾಸದಲ್ಲೇ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಶನಿವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ಕೊಹ್ಲಿ 72 ಎಸೆತಗಳಲ್ಲಿ 113 ರನ್‌ ಸಿಡಿಸಿದರು. ಐಪಿಎಲ್‌ನಲ್ಲಿ ಕ್ರಿಸ್‌ ಗೇಲ್‌ 6, ಬಟ್ಲರ್‌ 5, ಕೆ.ಎಲ್‌.ರಾಹುಲ್‌, ವಾಟ್ಸನ್‌, ವಾರ್ನರ್‌ ತಲಾ 4 ಶತಕ ಬಾರಿಸಿದ್ದಾರೆ.

ಈ 4 ತಂಡಗಳು ಪ್ಲೇ ಆಫ್‌ಗೇರಲಿವೆ: ಅಚ್ಚರಿಯ ಭವಿಷ್ಯ ನುಡಿದ ನಟ ಅಕ್ಷಯ್ ಕುಮಾರ್

ಕೊಹ್ಲಿ 67 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ್ದು, ಇದು ಐಪಿಎಲ್‌ನಲ್ಲಿ ಎಸೆತಗಳ ಆಧಾರದಲ್ಲಿ ಅತಿ ನಿಧಾನದ ಶತಕ. 2009ರಲ್ಲಿ ಮನೀಶ್‌ ಪಾಂಡೆ ಡೆಕ್ಕನ್‌ ಚಾರ್ಜರ್ಸ್‌ ವಿರುದ್ಧ 67 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಕೊಹ್ಲಿ ಬಾರಿಸಿದ ನಿಧಾನಗತಿಯ ಶತಕದಿಂದಲೇ ಆರ್‌ಸಿಬಿ ತಂಡವು ರಾಜಸ್ಥಾನ ಎದುರು ಸೋಲು ಕಂಡಿತು ಎನ್ನುವಂತಹ ಮಾತುಗಳು ಕೇಳಿಬಂದಿವೆ. ಇದರ ಜತೆಗೆ ಅದೇ ಪಂದ್ಯದಲ್ಲಿ ಶತಕ ಸಿಡಿಸಿದ ಜೋಸ್ ಬಟ್ಲರ್ ಇನಿಂಗ್ಸ್‌ ಜತೆ ಕೊಹ್ಲಿ ಇನಿಂಗ್ಸ್ ಹೋಲಿಸಲಾಗುತ್ತಿದೆ. 

ಕೊಹ್ಲಿ ಮೇಲಿನ ಟೀಕೆ ಹೇಗಿದೆಯೆಂದರೆ '1990 ಹಾಗೂ 2000ರ ದಶಕದಲ್ಲಿ ಸಚಿನ್ ತೆಂಡುಲ್ಕರ್ ಶತಕ ಸಿಡಿಸಿದರೆ, ಟೀಂ ಇಂಡಿಯಾ ಮ್ಯಾಚ್ ಗೆಲ್ಲೊಲ್ಲ ಎನ್ನುವಂತ ಬೇಸ್‌ಲೆಸ್ ನಿರೂಪಣೆ ರೀತಿ ಇತ್ತಲ್ಲ, ಅದೇ ರೀತಿಯ ಟೀಕೆ ಇದೀಗ ಕೊಹ್ಲಿ ಮೇಲೆ ವ್ಯಕ್ತವಾಗಿದೆ.

ಒಂದೊಳ್ಳೆ ಕಾರಣಕ್ಕೆ ಆರ್‌ಸಿಬಿಯಿಂದ ವಿರಾಟ್ ಕೊಹ್ಲಿಯನ್ನು ಕೈಬಿಡಿ ಎಂದ ಫ್ಯಾನ್ಸ್..!

ಮಾಜಿ ನಾಯಕ ವಿರಾಟ್ ಕೊಹ್ಲಿ ಬರೋಬ್ಬರಿ 156.94ರ ಸ್ಟ್ರೈಕ್‌ರೇಟ್‌ನಲ್ಲಿ ಶತಕ ಸಿಡಿಸಿದರೆ, ಎದುರಾಳಿ ತಂಡದ ಜೋಸ್ ಬಟ್ಲರ್ ಕೇವಲ 58 ಎಸೆತಗಳನ್ನು ಎದುರಿಸಿ 172.41ರ ಸ್ಟ್ರೈಕ್‌ರೇಟ್‌ನಲ್ಲಿ ಶತಕ ಪೂರೈಸಿದ್ದರು. ಇದೇ ಚರ್ಚೆಗೆ ಗ್ರಾಸವಾದ ವಿಚಾರ.

ಇದರಲ್ಲಿ ಏನು ವ್ಯತ್ಯಾಸ ಇದೆ ಅಂತೀರಾ..?

ಜೋಸ್ ಬಟ್ಲರ್ ಸ್ಪೋಟಕ ಇನಿಂಗ್ಸ್‌ ಆಡಲು ಕಾರಣ ಮತ್ತೊಂದು ತುದಿಯಲ್ಲಿ ಫಾರ್ಮ್‌ನಲ್ಲಿದ್ದ ಸಂಜು ಸ್ಯಾಮ್ಸನ್ ಇದ್ದರು. ಸಂಜು ಆರ್‌ಸಿಬಿ ಎದುರು 164.29ರ ಸ್ಟ್ರೈಕ್‌ರೇಟ್‌ನಲ್ಲಿ 69 ರನ್ ಸಿಡಿಸಿದರು. ಆದರೆ ವಿರಾಟ್ ಕೊಹ್ಲಿ ಜತೆಗಿದ್ದ ಫಾಫ್ ಡು ಪ್ಲೆಸಿಸ್‌. ಆರ್‌ಸಿಬಿ ನಾಯಕ ಫಾಫ್ 33 ಎಸೆತಗಳನ್ನು ಎದುರಿಸಿ 133ರ ಸ್ಟ್ರೈಕ್‌ರೇಟ್‌ನಲ್ಲಿ ಗಳಿಸಿದ್ದು ಕೇವಲ 44 ರನ್ ಮಾತ್ರ.

ಇನ್ನು ವಿರಾಟ್ ಕೊಹ್ಲಿ ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿ, ಆ ಬಳಿಕ ಆಕ್ರಮಣಕಾರಿ ಆಟ ಆಡಿದರು. ಅದ ಹೇಗೆಂದರೆ ಮೊದಲ 25 ಎಸೆತಗಳಲ್ಲಿ 32 ರನ್(ಸ್ಟ್ರೈಕ್‌ರೇಟ್ 128), ನಂತರ 25 ಎಸೆತಗಳಲ್ಲಿ 39 ರನ್(ಸ್ಟ್ರೈಕ್‌ರೇಟ್ 156) ಹಾಗೂ ಕೊನೆಯ 22 ಎಸೆತಗಳಲ್ಲಿ 44 ರನ್(ಸ್ಟ್ರೈಕ್‌ರೇಟ್ 191.9) ರನ್ ಸಿಡಿಸಿದರು. 

ವಿರಾಟ್ ಕೊಹ್ಲಿಯನ್ನು ಟೀಕಿಸುವ ಮುನ್ನ ಇನ್ನೊಂದು ವಿಚಾರವನ್ನು ಟೀಕಾಕಾರರು ಗಮನದಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ, 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಕಳೆದ ಐದು ಪಂದ್ಯಗಳಿಂದ ಏಕಾಂಗಿಯಾಗಿ ಬಾರಿಸಿದ್ದು 316 ರನ್. ಆದರೆ ಇನ್ನುಳಿದ ಆರ್‌ಸಿಬಿಯ ಎಲ್ಲಾ ಆಟಗಾರರು ಸೇರಿ ಇದುವರೆಗೂ ಗಳಿಸಿದ್ದು ಕೇವಲ 496 ರನ್. ಒಮ್ಮೆ ಯೋಚಿಸಿ ವಿರಾಟ್ ಕೊಹ್ಲಿ ಆರಂಭದಲ್ಲೇ ವಿಕೆಟ್ ಒಪ್ಪಿಸಿದರೆ ಆರ್‌ಸಿಬಿ ಪರಿಸ್ಥಿತಿ ಹೇಗಿರುತ್ತದೆ ಎಂದು. ಆರ್‌ಸಿಬಿ ತಂಡದ ವಿದೇಶಿ ಆಟಗಾರರಾದ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಕ್ಯಾಮರೋನ್ ಗ್ರೀನ್ ಪದೇ ಪದೇ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಬ್ಯಾಟ್ ಬೀಸಬೇಕಾದ ಜವಾಬ್ದಾರಿ ವಿರಾಟ್ ಕೊಹ್ಲಿ ಮೇಲಿದೆ.

ಈಗ ನೀವೇ ಹೇಳಿ ಆರ್‌ಸಿಬಿ ಸೋಲಿಗೆ ವಿರಾಟ್ ಕೊಹ್ಲಿ ಕಾರಣನಾ ಅಂತ...

Latest Videos
Follow Us:
Download App:
  • android
  • ios