ಯುವ ವೇಗಿ ಹರ್ಷಿತ್ ರಾಣಾ, ಮಯಾಂಕ್ ಅಗರ್‌ವಾಲ್ ಅವರನ್ನು ಔಟ್ ಮಾಡಿ, ಪ್ಲೈಯಿಂಗ್ ಕಿಸ್ ಮಾಡಿ ಅಗರ್‌ವಾಲ್‌ಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಇದಾದ ಬಳಿಕ ಹೆನ್ರಿಚ್ ಕ್ಲಾಸೇನ್ ಹಾಗೂ ಶಹಬಾಬ್ ಅಹಮ್ಮದ್ ವಿಕೆಟ್ ಕಬಳಿಸಿದಾಗಲೂ ಅತಿಯಾದ ಸಂಭ್ರಮಾಚರಣೆ ಮಾಡಿದ್ದರು.
ಕೋಲ್ಕತಾ(ಮಾ.24): 2024ನೇ ಸಾಲಿನ ಐಪಿಎಲ್ ಟೂರ್ನಿಯ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡವು 4 ರನ್ ರೋಚಕ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇನ್ನು ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವ ವೇಗಿ ಹರ್ಷಿತ್ ರಾಣಾಗೆ ಐಪಿಎಲ್ ಮಂಡಳಿ ಅತಿರೇಕದ ವರ್ತನೆ ತೋರಿದ ತಪ್ಪಿಗೆ ದಂಡದ ಬರೆ ಎಳೆದಿದೆ.
ಹೌದು, 22 ವರ್ಷದ ಯುವ ವೇಗಿ ಹರ್ಷಿತ್ ರಾಣಾ ಅವರು ಬೌಲಿಂಗ್ ಮಾಡುವ ವೇಳೆ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟರ್‌ಗಳ ಎದುರು ಎರಡೆರಡು ಬಾರಿ ಅತಿರೇಕದ ವರ್ತನೆ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಎರಡು ಪ್ರತ್ಯೇಕ ಪ್ರಕರಣಗಳಿಗೆ ಪಂದ್ಯದ ಸಂಭಾವನೆಯ 60% ದಂಡ ವಿಧಿಸಲಾಗಿದೆ.
ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಐಪಿಎಲ್ ಮಂಡಳಿ, "ರಾಣಾ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5ರ ಅಡಿಯಲ್ಲಿ ಲೆವೆಲ್ 1 ಹಂತದ ತಪ್ಪನ್ನು ಎಸಗಿದ್ದಾರೆ. ಅವರಿಗೆ ಎರಡು ಪ್ರತ್ಯೇಕ ಪ್ರಕರಣಗಳಿಗೆ ಪಂದ್ಯದ ಸಂಭಾವನೆಯ 10% ಹಾಗೂ 50% ದಂಡ ವಿಧಿಸಲಾಗಿದೆ. ಮ್ಯಾಚ್ ರೆಫ್ರಿ ಎದುರು ಹರ್ಷಿತ್ ರಾಣಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಶಿಕ್ಷೆಯ ಪ್ರಮಾಣವನ್ನು ಒಪ್ಪಿಕೊಂಡಿದ್ದಾರೆ" ಎಂದು ವರದಿಯಾಗಿದೆ.
ದುಬಾರಿಯಾದ ಐಪಿಎಲ್‌ನ ಕಾಸ್ಟ್ಲಿ ಆಟಗಾರ ಮಿಚೆಲ್ ಸ್ಟಾರ್ಕ್..! ಕೆಕೆಆರ್ ಫ್ರಾಂಚೈಸಿ ಟ್ರೋಲ್ ಮಾಡಿದ ನೆಟ್ಟಿಗರು
ಯುವ ವೇಗಿ ಹರ್ಷಿತ್ ರಾಣಾ, ಮಯಾಂಕ್ ಅಗರ್‌ವಾಲ್ ಅವರನ್ನು ಔಟ್ ಮಾಡಿ, ಪ್ಲೈಯಿಂಗ್ ಕಿಸ್ ಮಾಡಿ ಅಗರ್‌ವಾಲ್‌ಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಇದಾದ ಬಳಿಕ ಹೆನ್ರಿಚ್ ಕ್ಲಾಸೇನ್ ಹಾಗೂ ಶಹಬಾಬ್ ಅಹಮ್ಮದ್ ವಿಕೆಟ್ ಕಬಳಿಸಿದಾಗಲೂ ಅತಿಯಾದ ಸಂಭ್ರಮಾಚರಣೆ ಮಾಡಿದ್ದರು.
ಇನ್ನು ಕೆಕೆಆರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಆಂಡ್ರೆ ರಸೆಲ್ ಸ್ಪೋಟಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ಬಾರಿಸಿತ್ತು. ಇದಾದ ಬಳಿಕ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ದಿಟ್ಟ ಹೋರಾಟ ನಡೆಸಿತಾದರೂ 4 ರನ್ ರೋಚಕ ಸೋಲು ಅನುಭವಿಸಿತು.
IPL 2024 ಇಂದು ಮುಂಬೈ ಇಂಡಿಯನ್ಸ್ vs ಗುಜರಾತ್ ಟೈಟಾನ್ಸ್ ಫೈಟ್
ಕೊನೆಯ ಓವರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಗೆಲ್ಲಲು ಕೇವಲ 13 ರನ್ ಅಗತ್ಯವಿತ್ತು. ರಾಣಾ ಎಸೆದ ಮೊದಲ ಚೆಂಡನ್ನು ಕ್ಲಾಸೆನ್ ಸಿಕ್ಸರ್‌ಗಟ್ಟಿದ್ದರು. ಇದಾದ ಬಳಿಕ ಶಹಬಾಜ್ ಅಹಮ್ಮದ್ ಹಾಗೂ ಕ್ಲಾಸೇನ್ ಅವರನ್ನು ಬಲಿಪಡೆದು ಕೆಕೆಆರ್‌ಗೆ 4 ರನ್ ರೋಚಕ ಗೆಲುವು ತಂದುಕೊಡುವಲ್ಲಿ ರಾಣಾ ಯಶಸ್ವಿಯಾದರು.
ಇನ್ನು ಹರ್ಷಿತ್ ರಾಣಾ ಅವರು ಅತಿರೇಕದ ವರ್ತನೆಗೆ ತಂಡದ ಮೆಂಟರ್ ಗೌತಮ್ ಗಂಭೀರ್ ಕಾರಣ ಎಂದು ನೆಟ್ಟಿಗರು ದೂರಿದ್ದಾರೆ. ಕಳೆದ ಬಾರಿ ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದರು ಗಂಭೀರ್. ಆಗ ಲಖನೌ ತಂಡದ ನವೀನ್ ಉಲ್ ಹಕ್, ಕೊಹ್ಲಿ ಜತೆಗೆ ಕಿರಿಕ್ ಮಾಡಿಕೊಂಡು ಸುದ್ದಿಯಾಗಿದ್ದರು.
