Asianet Suvarna News Asianet Suvarna News

ರೋಹಿತ್ ಪರ ಘೋಷಣೆ, ಪಾಂಡ್ಯ ವಿರುದ್ಧ ಆಕ್ರೋಶದ ನಡುವೆ ಮುಂಬೈಗೆ 169 ರನ್ ಟಾರ್ಗೆಟ್!

ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಅಹಮ್ಮದಾಬಾದ್ ಅಭಿಮಾನಿಗಳ ಘೋಷಣೆ ಭಾರಿ ವೈರಲ್ ಆಗಿದೆ. ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಇತ್ತ ಹೆಜ್ಜೆ ಹೆಜ್ಜೆಗೂ ರೋಹಿತ್ ಪರ ಘೋಷಣೆ ಕೂಗಿದ್ದಾರೆ. ಇದರ ನಡುವೆ ಗುಜರಾತ್ ಅಬ್ಬರನ್ನು ನಿಯಂತ್ರಿಸಿದ ಮುಂಬೈ ಇಂಡಿಯನ್ಸ್ 169 ರನ್ ಟಾರ್ಗೆಟ್ ಪಡೆದಿದೆ.
 

IPL 2024 Jasprit Bumrah help Mumbai Indians to restrict Gujarat Titans by 168 runs ckm
Author
First Published Mar 24, 2024, 9:20 PM IST

ಅಹಮ್ಮದಾಬಾದ್(ಮಾ.24) ಐಪಿಎಲ್ 2024ರ ಟೂರ್ನಿಯ ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಹೋರಾಟ ಭಾರಿ ಸಂಚಲನ ಸೃಷ್ಟಿಸಿದೆ. ಕಾರಣ ಹಾರ್ದಿಕ್ ಪಾಂಡ್ಯ ಗುಜರಾತ್ ತಂಡ ತೊರೆದು ಮುಂಬೈ ಇಂಡಿಯನ್ಸ್ ಸೇರಿಕೊಂಡಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣಾಗಿದೆ. ಹೀಗಾಗಿ ಟಾಸ್ ಸಮಯದಿಂದ ಅಭಿಮಾನಿಗಳು ಹಾರ್ಧಿಕ್ ಪಾಂಡ್ಯ ವಿರುದ್ಧ ಆಕ್ರೋಶ ಹೊರಹಾಕುತ್ತಲೇ ಬಂದಿದ್ದಾರೆ. ಇತ್ತ ರೋಹಿತ್, ರೋಹಿತ್ ಎಂದು ಘೋಷಣೆ ಕೂಗಿದ್ದಾರೆ. ಅಭಿಮಾನಿಗಳ ಪರ ವಿರೋಧದ ನಡುವೆ ಮುಂಬೈ ಇಂಡಿಯನ್ಸ್ ದಿಟ್ಟ ಬೌಲಿಂಗ್ ಪ್ರದರ್ಶನ ನೀಡಿ ಗುಜರಾತ್ ಟೈಟಾನ್ಸ್ ತಂಡವನ್ನು 168 ರನ್‌ಗೆ ಕಟ್ಟಿಹಾಕಿದೆ. 

ಟಾಸ್ ವೇಳೆ ಹಾರ್ದಿಕ್ ಪಾಂಡ್ಯ ಹೆಸರು ಹೇಳುತ್ತಿದ್ದಂತೆ ಅಭಿಮಾನಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿ ಕ್ರೀಡಾಂಗದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳು ಪಾಂಡ್ಯ ವಿರುದ್ಧ ಕೂಗಿದ್ದಾರೆ. ಇದರ ನಡುವೆ ಅಬ್ಬರದ ಆರಂಭ ಕಂಡ ಗುಜರಾತ್ ಟೈಟಾನ್ಸ್ ಏಕಾಏಕಿ ಕುಸಿತ ಕಂಡಿತು. ಜಸ್ಪ್ರೀತ್ ಬುಮ್ರಾ ದಾಳಿ ಆರಂಭಗೊಳ್ಳುತ್ತಿದ್ದಂತೆ ಗುಜರಾತ್ ಟೈಟಾನ್ಸ್ ಮಂಕಾಯಿತು.

ಮೊದಲ ಎಸೆತದಲ್ಲಿ ಬೌಂಡರಿ ಸಿಡಿಸಿ ಅಬ್ಬರಿಸಿದ ವೃದ್ಧಿಮಾನ್ ಸಾಹ 19 ರನ್ ಸಿಡಿಸಿ ಔಟಾದರು. ನಾಯಕ ಶುಭಮನ್ ಗಿಲ್ 31 ರನ್ ಕಾಣಿಕೆ ನೀಡಿದರು. ಸಾಯಿ ಸುದರ್ಶನ್ ಉತ್ತಮ ಹೋರಾಟ ನೀಡಿದರು. ಆದರೆ ಅಜ್ಮುತುಲ್ಹಾ ಒಮರ್ಝಾಯಿ ಕೇವಲ 17 ರನ್ ಸಿಡಿಸಿ ಔಟಾದರು. ಇತ್ತ ಡೇವಿಡ್ ಮಿಲ್ಲರ್ ಕೇವಲ 12 ರನ್ ಸಿಡಿಸಿ ನಿರ್ಗಮಿಸಿದರು. ಹೋರಾಟ ನೀಡಿದ ಸಾಯಿ ಸುದರ್ಶನ್ 45 ರನ್ ಸಿಡಿಸಿ ಔಟಾದರು.

ರಾಹುಲ್ ಟಿವಾಟಿಯಾ 22 ರನ್ ಸಿಡಿಸಿದರು. ರಶೀದ್ ಖಾನ್ ಅಜೇಯ 4 ಹಾಗೂ ವಿಜಯ್ ಶಂಕರ್ ಅಜೇಯ 6 ರನ್ ಸಿಡಿಸಿದರು. ಈ ಮೂಲಕ ಗುಜರಾತ್ ಟೈಟಾನ್ಸ್ 6 ವಿಕೆಟ್ ನಷ್ಟಕ್ಕೆ 168 ರನ್ ಸಿಡಿಸಿತು. 

Follow Us:
Download App:
  • android
  • ios