Asianet Suvarna News Asianet Suvarna News

ಅಭಿಮಾನಿಗಳಿಗೆ ಗುಡ್ ನ್ಯೂಸ್, ಐಪಿಎಲ್ 2024 ಸ್ಥಳಾಂತರ ಕುರಿತು ಬಿಸಿಸಿಐ ಸ್ಪಷ್ಟನೆ!

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಐಪಿಎಲ್ 2024 ಸ್ಥಳಾಂತರ ಮಾತುಗಳು ಕೇಳಿಬಂದಿತ್ತು. 7 ಹಂತದಲ್ಲಿ ಚುನಾವಣೆ ಕಾರಣದಿಂದ ದುಬೈಗೆ ಐಪಿಎಲ್ ಸ್ಥಳಾಂತರಿಸಲಾಗುತ್ತಿದೆ ಅನ್ನೋ ಮಾಹಿತಿ ಹರಿದಾಡಿತ್ತು. ಈ ಕುರಿತು ಬಿಸಿಸಿಐ ಏಷ್ಯಾನೆಟ್ ನ್ಯೂಸ್‌ಗೆ ಸ್ಪಷ್ಟನೆ ನೀಡಿದೆ.

IPL 2024 firmly remain in India only not moving out despite Lok sabha Election confirms BCCI ckm
Author
First Published Mar 16, 2024, 9:11 PM IST

ಮುಂಬೈ(ಮಾ.16) ಲೋಕಸಭಾ ಚುನಾವಣೆ ಎಪ್ರಿಲ್ 19 ರಿಂದ ಆರಂಭಗೊಳ್ಳುತ್ತಿದೆ. ಒಟ್ಟು 7ಹಂತದಲ್ಲಿ ನಡೆಯಲಿರುವ ಮತದಾನ ಜೂನ್ 1 ರಂದು ಅಂತ್ಯವಾಗಲಿದೆ. ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ. ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಐಪಿಎಲ್ 2024 ಟೂರ್ನಿ ದುಬೈಗೆ ಸ್ಥಳಾಂತರವಾಗಲಿದೆ ಅನ್ನೋ ಮಾಹಿತಿಗಳು ಹರಿದಾಡಿತ್ತು. ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮತದಾನ ನಡೆಯುವ ಕಾರಣ ಐಪಿಎಲ್ ಟೂರ್ನಿಯನ್ನು ಸ್ಥಳಾಂತರಿಸಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಬಿಸಿಸಿಐ ಇದೀಗ ಸ್ಪಷ್ಟನೆ ನೀಡಿದೆ. 2024ರ ಐಪಿಎಲ್ ಟೂರ್ನಿ ಭಾರತದಲ್ಲೇ ಆಯೋಜನೆಯಾಗಲಿದೆ. ಸ್ಥಳಾಂತರ ಮಾಡುತ್ತಿಲ್ಲ ಎಂದು ಐಪಿಎಲ್ ಚೇರ್ಮೆನ್ ಅರುಣ್ ಧುಮಾಲ್ ಏಷ್ಯಾನೆಟ್ ನ್ಯೂಸ್‌ಗೆ ಸ್ಪಷ್ಟಪಡಿಸಿದ್ದಾರೆ.

ಲೋಕಸಭಾ ಚುನಾವಣೆ ಕಾರಣದಿಂದ ಐಪಿಎಲ್ ಸ್ಥಳಾಂತರ ಮಾಡಲಾಗುತ್ತಿದೆ ಅನ್ನೋ ಮಾಹಿತಿಗಳು ಹರಿದಾಡುತ್ತಿದೆ. ಆದರೆ ಇದು ಸತ್ಯಕ್ಕೆ ದೂರವಾಗಿದೆ. ಐಪಿಎಲ್ 2024 ಟೂರ್ನಿ ಭಾರತದಲ್ಲೇ ಆಯೋಜನೆಗೊಳ್ಳುತ್ತಿದೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ. ಭಾರತದಲ್ಲಿ ಐಪಿಎಲ್ ಟೂರ್ನಿ ಆಯೋಜನೆಗೆ ಎಲ್ಲಾ ಸಿದ್ಧತೆ ಮಾಡಲಾಗಿದೆ. ವೇಳಾಪಟ್ಟಿಯಂತೆ ಭಾರತದಲ್ಲೇ ಟೂರ್ನಿ ನಡೆಯಲಿದೆ. ಯುಎಇಗೆ ಸ್ಥಳಾಂತರ ಮಾಡಲ್ಲ ಎಂದಿದ್ದಾರೆ.

ಆರ್‌ಸಿಬಿ ಚೆಲುವೆ ಪೆರ್ರಿಗೆ 'ಒಡೆದ ಕಾರು ಗಾಜಿನ' ಗಿಫ್ಟ್ ಕೊಟ್ಟ TATA ಮೋಟರ್ಸ್‌..!

ಲೋಕಸಭಾ ಚುನಾವಣಾ ಕಾರಣದಿಂದ ಆರಂಭಿಕ 21 ಪಂದ್ಯಗಳ ವೇಳಾಪಟ್ಟಿ ಮಾತ್ರ ಪ್ರಕಟಿಸಲಾಗಿದೆ. ಇದೀಗ ಲೋಕಸಭೆ, ವಿಧಾನಸಭೆ, ಉಪಚುನಾವಣೆ ದಿನಾಂಕ ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿ ಸಿದ್ಧಪಡಿಸಲಾಗುತ್ತದೆ. ಶೀಘ್ರದಲ್ಲೇ ಸಂಪೂರ್ಣ ವೇಳಾಪಟ್ಟಿ ಪ್ರಕಟಗೊಳ್ಳಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಫ್ರಾಂಚೈಸಿಗಳು ಆಟಗಾರರಿಗೆ ತಮ್ಮ ಪಾಸ್‌ಪೋರ್ಟ್ ವಿವರ ನೀಡುವಂತೆ ಸೂಚಿಸಲಾಗಿದೆ ಅನ್ನೋ ಮಾಹಿತಿಗಳು ಹರಿದಾಡಿತ್ತು. ಈ ವಿಚಾರವನ್ನೂ ಐಪಿಎಲ್ ಚೇರ್ಮೆನ್ ಅರುಣ್ ಧುಮಾಲ್ ಅಲ್ಲಗೆಳೆದಿದ್ದಾರೆ. ಭಾರತದಲ್ಲಿ ಸಂಪೂರ್ಣ ಟೂರ್ನಿ ಆಯೋಜಿಸಲು ಎಲ್ಲಾ ಸಿದ್ಧತೆ ಮಾಡಲಾಗಿದೆ. ಚುನಾವಣೆ ದಿನಾಂಕ ನೋಡಿಕೊಂಡು ಐಪಿಎಲ್ ಪಂದ್ಯ ಆಯೋಜಿಸಲಾಗುತ್ತದೆ. ಹೀಗಾಗಿ ಟೂರ್ನಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2019ರ ಲೋಕಸಭಾ ಚುನಾವಣೆ ವೇಳೆ ಭಾರತದಲ್ಲೇ ಐಪಿಎಲ್ ಟೂರ್ನಿ ಆಯೋಜಿಸಲಾಗಿದೆ. ಚುನಾವಣೆಗೆ ಹಾಗೂ ಐಪಿಎಲ್ ಟೂರ್ನಿಗೆ ಧಕ್ಕೆ ಬರದ ರೀತಿಯಲ್ಲಿ ವೇಳಾಪಟ್ಟಿ ತಯಾರಿಸಲಾಗಿತ್ತು. ಈ ಬಾರಿಯೂ ಅದೇ ರೀತಿಯಲ್ಲಿ ಟೂರ್ನಿ ನಡೆಸಲಾಗುತ್ತದೆ. ಹೀಗಾಗಿ ಸ್ಥಳಾಂತರದ ಪ್ರಶ್ನೆಯೇ ಇಲ್ಲ ಎಂದು ಅರುಣ್ ಧುಮಾಲ್ ಹೇಳಿದ್ದಾರೆ.

ಕಳೆದ ಬಾರಿ ಕೇಕೆ ಹಾಕಿದ್ದ ನೀತಾ ಅಂಬಾನಿಗೆ ಕಣ್ಣೀರು ಹಾಕಿಸಿದ ಆರ್‌ಸಿಬಿ ಗರ್ಲ್ಸ್‌..! ಕರ್ಮ ರಿಟರ್ನ್ಸ್ ಎಂದ ಫ್ಯಾನ್ಸ್

Follow Us:
Download App:
  • android
  • ios