ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಅವರು ಮಯಾಂಕ್‌ಗೆ ಹೊಸ ಸಲಹೆಯೊಂದನ್ನು ನೀಡಿದ್ದು, ಮಯಾಂಕ್ ಬೌಲಿಂಗ್ ವೇಳೆ ಕುತ್ತಿಗೆಯ ಭಾಗವನ್ನು ನೇರವಾಗಿ ಇರಿಸಿದರೆ 4-5 ಕಿ.ಮೀ. ಹೆಚ್ಚು ವೇಗದಲ್ಲಿ ಬೌಲ್ ಮಾಡಲು ಸಾಧ್ಯ' ಎಂದಿದ್ದಾರೆ.

ನವದೆಹಲಿ(ಏ.04): ಐಪಿಎಲ್ ಇತಿಹಾಸದಲ್ಲೇ 5ನೇ ಅತಿವೇಗದ ಎಸೆತ(156.7 ಕಿ.ಮೀ.) ದಾಖಲಿ ಸಿರುವ ಲಖನೌ ತಂಡದ ಯುವ ವೇಗಿ ಮಯಾಂಕ್ ಯಾದವ್‌ ಸಾಧನೆಗೆ ಹಾಲಿ, ಮಾಜಿ ಕ್ರಿಕೆಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್‌ನ ವೇಗಿ ಸ್ಟುವರ್ಟ್ ಬ್ರಾಡ್, '18 ತಿಂಗಳೊಳಗೆ ಮಯಾಂಕ್ ಭಾರತ ತಂಡದಲ್ಲಿ ಇರಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇನ್ನು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಅವರು ಮಯಾಂಕ್‌ಗೆ ಹೊಸ ಸಲಹೆಯೊಂದನ್ನು ನೀಡಿದ್ದು, ಮಯಾಂಕ್ ಬೌಲಿಂಗ್ ವೇಳೆ ಕುತ್ತಿಗೆಯ ಭಾಗವನ್ನು ನೇರವಾಗಿ ಇರಿಸಿದರೆ 4-5 ಕಿ.ಮೀ. ಹೆಚ್ಚು ವೇಗದಲ್ಲಿ ಬೌಲ್ ಮಾಡಲು ಸಾಧ್ಯ' ಎಂದಿದ್ದಾರೆ. ಇಯಾನ್ ಬಿಶಪ್, ಇರ್ಫಾನ್ ಪಠಾಣ್, ಸೂರ್ಯಕುಮಾ‌ ಸೇರಿ ಇನ್ನೂ ಅನೇಕರು ಕೂಡಾ ಮಯಾಂಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತೀಯರಿಗೆ ‘ಮನೆ ಊಟ’

ಬಾಂಗ್ಲಾ ವಿರುದ್ಧ ಲಂಕಾಕ್ಕೆ 2-0 ಸರಣಿ ಗೆಲುವು

ಛಟ್ಟೋಗ್ರಾಮ್‌: ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್‌ನಲ್ಲಿ 192 ರನ್‌ಗಳ ಗೆಲುವು ಸಾಧಿಸಿದ ಶ್ರೀಲಂಕಾ, 2 ಪಂದ್ಯಗಳ ಸರಣಿಯನ್ನು 2-0ಯಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ. ಗೆಲ್ಲಲು 511 ರನ್‌ ಗುರಿ ಬೆನ್ನತ್ತಿದ್ದ ಬಾಂಗ್ಲಾ, 318 ರನ್‌ಗೆ ಆಲೌಟ್‌ ಆಯಿತು. ಮೊದಲ ಇನ್ನಿಂಗ್ಸಲ್ಲಿ 531 ರನ್‌ ಗಳಿಸಿದ್ದ ಲಂಕಾ, ಬಾಂಗ್ಲಾವನ್ನು 178 ರನ್‌ಗೆ ಕಟ್ಟಿಹಾಕಿತ್ತು. 2ನೇ ಇನ್ನಿಂಗ್ಸಲ್ಲಿ ಲಂಕಾ 7 ವಿಕೆಟ್‌ಗೆ 157 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಮೊದಲ ಟೆಸ್ಟ್‌ನಲ್ಲಿ ಲಂಕಾ 328 ರನ್‌ ಗೆಲುವು ಸಾಧಿಸಿತ್ತು.

IPL 2024: ನರೈನ್, ರಸೆಲ್ ಸ್ಪೋಟಕ ಆಟ, ಡೆಲ್ಲಿ ಎದುರು ಕೆಕೆಆರ್‌ಗೆ ಭರ್ಜರಿ ಜಯಭೇರಿ

ಬಾಂಗ್ಲಾ ವಿರುದ್ಧ ಭಾರತ ವನಿತೆಯರಿಗೆ ಟಿ20 ಸರಣಿ

ಢಾಕಾ: ಇದೇ ತಿಂಗಳು 28ರಿಂದ ಮೇ 9ರ ವರೆಗೂ ಭಾರತ ಮಹಿಳಾ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದು, 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಏ.28ರಂದು ಮೊದಲ ಪಂದ್ಯ ನಡೆಯಲಿದ್ದು, ಏ.30, ಮೇ 2, 6, 9ರಂದು ಕ್ರಮವಾಗಿ ಉಳಿದ 4 ಪಂದ್ಯಗಳು ನಡೆಯಲಿವೆ.

ಲಖನೌ ವೇಗಿ ಮಾವಿ ಐಪಿಎಲ್‌ನಿಂದ ಔಟ್‌

ಲಖನೌ: ಲಖನೌ ಸೂಪರ್‌ ಜೈಂಟ್ಸ್‌ ತಂಡದ ವೇಗಿ ಶಿವಂ ಮಾವಿ 17ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಅವರು ಪಕ್ಕೆಲುಬು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. 2023ರ ಆಗಸ್ಟ್‌ನಲ್ಲಿ ಮಾವಿ ಕೊನೆಯ ಬಾರಿಗೆ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಅವರು ಗಾಯಗೊಂಡಿದ್ದರು.

ಚೆನ್ನೈನ ಮುಸ್ತಾಫಿಜುರ್ ತವರಿಗೆ: 1 ಪಂದ್ಯಕ್ಕೆ ಗೈರು?

ನವದೆಹಲಿ: ಐಪಿಎಲ್‌ನ ಚೆನ್ನೈ ತಂಡದ ಪ್ರಮುಖ ವೇಗಿ ಮುಸ್ತಾಫಿಜುರ್ ರಹ್ಮಾನ್ ಟಿ20 ವಿಶ್ವಕಪ್‌ಗೆ ವೀಸಾ ಪ್ರಕ್ರಿಯೆಗಾಗಿ ತಮ್ಮ ತವರು ಬಾಂಗ್ಲಾದೇಶಕ್ಕೆ ಹಿಂದಿರು ಗಿದ್ದಾರೆ. ಹೀಗಾಗಿ ಶುಕ್ರವಾರ ಹೈದ್ರಾಬಾದ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.