ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯರಿಗೆ ‘ಮನೆ ಊಟ’
ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಗೇಮ್ಸ್ ವಿಲೇಜ್‌ನಲ್ಲಿ ರೋಟಿ, ದಾಲ್, ಆಲೂ ಗೋಬಿ, ಭಾರತೀಯ ಶೈಲಿಯ ಚಿಕನ್ ಇತ್ಯಾದಿ ಭಾರತೀಯ ಖಾದ್ಯಗಳು ಸಿಗಲಿದೆ.
ನವದೆಹಲಿ: ಜಾಗತಿಕ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಭಾರತೀಯ ಅಥ್ಲೀಟ್‌ಗಳು ಭಾರತೀಯ ಶೈಲಿಯ ಊಟ ಸಿಗದೆ ಪರದಾಡುವುದು ಸಾಮಾನ್ಯ. ಆದರೆ ಮುಂಬರುವ ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯರಿಗೆ ಈ ಸಮಸ್ಯೆ ಎದುರಾಗದು. ದೇಶದ ಕ್ರೀಡಾಪಟುಗಳಿಗೆ ‘ಮನೆ ಊಟ’ ನೀಡಲು ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ) ಉದ್ದೇಶಿಸಿದ್ದು, ಗೇಮ್ಸ್ ಆಯೋಜಕರೂ ಅದಕ್ಕೆ ಸಮ್ಮತಿಸಿದ್ದಾರೆ.
ಹೀಗಾಗಿ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಗೇಮ್ಸ್ ವಿಲೇಜ್‌ನಲ್ಲಿ ರೋಟಿ, ದಾಲ್, ಆಲೂ ಗೋಬಿ, ಭಾರತೀಯ ಶೈಲಿಯ ಚಿಕನ್ ಇತ್ಯಾದಿ ಭಾರತೀಯ ಖಾದ್ಯಗಳು ಸಿಗಲಿದೆ. ‘ಜಾಗತಿಕ ಕ್ರೀಡಾಕೂಟಗಳಲ್ಲಿ ನಮ್ಮ ಅಥ್ಲೀಟ್‌ಗಳಿಗೆ ಆಹಾರ ದೊಡ್ಡ ಸಮಸ್ಯೆ. ಈ ಬಾರಿ ದಕ್ಷಿಣ ಏಷ್ಯಾದ ಖಾದ್ಯಗಳನ್ನು ಸೇರಿಸಲು ನಾವು ಸಂಘಟಕರನ್ನು ಒತ್ತಾಯಿಸಿದ್ದೇವೆ. ನಮ್ಮ ಮನವಿಯಂತೆ ಭಾರತೀಯ ಖಾದ್ಯಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ’ ಎಂದು ಒಲಿಂಪಿಕ್ಸ್‌ನ ಭಾರತ ತಂಡ ಉಪ ಮುಖ್ಯಾಧಿಕಾರಿಯಾಗಿರುವ ಶಿವ ಕೇಶವನ್ ತಿಳಿಸಿದ್ದಾರೆ.
ರಿಷಭ್ ಪಂತ್ ಹೃದಯ ಕದ್ದ ಇಶಾ ನೇಗಿ..! ಇಲ್ಲಿದೆ ಕ್ಯೂಟ್ ಜೋಡಿಯ ಇಂಟ್ರೆಸ್ಟಿಂಗ್ ಲವ್ ಸ್ಟೋರಿ
ಕ್ರೀಡಾ ವಿಜ್ಞಾನ ಕೇಂದ್ರ: ಇನ್ನು ಗೇಮ್ಸ್ ವಿಲೇಜ್‌ನಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾ ವಿಜ್ಞಾನ ಕೇಂದ್ರವನ್ನೂ ಐಒಎ ಸ್ಥಾಪಿಸುತ್ತಿದೆ. ಅಥ್ಲೀಟ್‌ಗಳಿಗೆ ಅಗತ್ಯವಿರುವ ವೈದ್ಯಕೀಯ ನೆರವು, ಔಷಧ ಒದಗಿಸಲು ಭಾರತದಿಂದಲೇ ವೈದ್ಯಕೀಯ ಉಪಕರಣಗಳನ್ನು ಕೂಡಾ ಐಒಎ ಪ್ಯಾರಿಸ್‌ಗೆ ಕೊಂಡೊಯ್ಯುತ್ತಿದೆ.
ಭಾರತ ಮಹಿಳಾ ಹಾಕಿ ಟೀಂಗೆ ಹರೇಂದ್ರ ಕೋಚ್?
ನವದೆಹಲಿ: ಭಾರತ ಮಹಿಳಾ ಹಾಕಿ ತಂಡದ ನೂತನ ಕೋಚ್ ಆಗಿ ಹರೇಂದ್ರ ಸಿಂಗ್ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇತ್ತೀಚೆಗೆ ನಡೆದ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಸೋತು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ತಂಡ ವಿಫಲವಾದ ಬೆನ್ನಲ್ಲೇ ನೆದರ್‌ಲೆಂಡ್ಸ್‌ನ ಯಾನ್ನೆಕ್ ಸ್ಕೋಪ್ಮನ್ ಪ್ರಧಾನ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು.
IPL 2024: ನರೈನ್, ರಸೆಲ್ ಸ್ಪೋಟಕ ಆಟ, ಡೆಲ್ಲಿ ಎದುರು ಕೆಕೆಆರ್‌ಗೆ ಭರ್ಜರಿ ಜಯಭೇರಿ
ಅವರ ನಿರ್ಗಮನದ ಬಳಿಕ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಹಾಕಿ ಇಂಡಿಯಾ ಸೂಕ್ತ ಅಭ್ಯರ್ಥಿಗಳ ಸಂದರ್ಶನ ನಡೆಸುತ್ತಿದ್ದು, ಹರೇಂದ್ರರನ್ನು ನೇಮಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. 2017ರಲ್ಲಿ ಹರೇಂದ್ರ ಭಾರತ ಮಹಿಳಾ ತಂಡದ ಕೋಚ್ ಆಗಿದ್ದರು.