ಇಂದು ಐಪಿಎಲ್ ಆಟಗಾರರ ಹರಾಜು: ನೀವು ತಿಳಿದಿರಲೇಬೇಕಾದ ಅಗತ್ಯ ಮಾಹಿತಿಗಳಿವು
ಬಿಸಿಸಿಐ ಈಗಾಗಲೇ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಪಟ್ಟಿ ಪ್ರಕಟಿಸಿದೆ. 1166 ಮಂದಿ ಹರಾಜಿಗೆ ನೋಂದಣಿ ಮಾಡಿಕೊಂಡಿದ್ದರೂ, ಅಂತಿಮವಾಗಿ 333 ಮಂದಿಯನ್ನು ಬಿಸಿಸಿಐ ಹರಾಜಿಗೆ ಆಯ್ಕೆ ಮಾಡಿದೆ. ಸದ್ಯ 214 ಭಾರತೀಯರು, 119 ವಿದೇಶ ಆಟಗಾರರು, ಅಂತಾರಾಷ್ಟ್ರೀಯ ಪಂದ್ಯವಾಡಿದ 116, ಅಂ.ರಾ. ಪಂದ್ಯ ವಾಡದ 215 ಆಟಗಾರರು ಅಂತಿಮ ಪಟ್ಟಿ ಯಲ್ಲಿದ್ದಾರೆ.
ದುಬೈ(ಡಿ.19): ಬಹುನಿರೀಕ್ಷಿತ 2024ರ ಐಪಿಎಲ್‌ನ ಆಟಗಾರರ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಒಟ್ಟು 333 ಆಟಗಾರರು ಮಂಗಳವಾರ ನಡೆಯಲಿರುವ ಮಿನಿ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಇದೇ ಮೊದಲ ಬಾರಿ ಐಪಿಎಲ್ ಹರಾಜು ವಿದೇಶದಲ್ಲಿ ನಡೆಯಲಿದ್ದು, ದುಬೈ ಆತಿಥ್ಯ ವಹಿಸಲಿದೆ.
ಬಿಸಿಸಿಐ ಈಗಾಗಲೇ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಪಟ್ಟಿ ಪ್ರಕಟಿಸಿದೆ. 1166 ಮಂದಿ ಹರಾಜಿಗೆ ನೋಂದಣಿ ಮಾಡಿಕೊಂಡಿದ್ದರೂ, ಅಂತಿಮವಾಗಿ 333 ಮಂದಿಯನ್ನು ಬಿಸಿಸಿಐ ಹರಾಜಿಗೆ ಆಯ್ಕೆ ಮಾಡಿದೆ. ಸದ್ಯ 214 ಭಾರತೀಯರು, 119 ವಿದೇಶ ಆಟಗಾರರು, ಅಂತಾರಾಷ್ಟ್ರೀಯ ಪಂದ್ಯವಾಡಿದ 116, ಅಂ.ರಾ. ಪಂದ್ಯ ವಾಡದ 215 ಆಟಗಾರರು ಅಂತಿಮ ಪಟ್ಟಿ ಯಲ್ಲಿದ್ದಾರೆ. ಮನೀಶ್ ಪಾಂಡೆ, ಶುಭಾಂಗ್, ಚೇತನ್, ಶ್ರೀಜಿತ್ ಸೇರಿದಂತೆ ಕರ್ನಾಟಕದ 11 ಮಂದಿ ಕೂಡಾ ಹರಾ ಜಿನಲ್ಲಿ ಭಾಗಿಯಾಗಲಿದ್ದಾರೆ. 333 ಮಂದಿ ಪೈಕಿ 23 ಮಂದಿ ₹2 ಕೋಟಿ ಮೂಲಬೆಲೆ, 13 ಮಂದಿ 1.5 ಕೋಟಿ ರು. ಮೂಲಬೆಲೆ ಹೊಂದಿದ್ದಾರೆ. ಸದ್ಯ ತಂಡಗಳ ಪೈಕಿ ಗುಜರಾತ್ ಗರಿಷ್ಠ ಅಂದರೆ ₹38.15 ಕೋಟಿ ಹೊಂದಿದ್ದು, ಲಖನೌ ಕನಿಷ್ಠ ಅಂದರೆ ₹13.5 ಕೋಟಿ ಮಾತ್ರ ಹರಾಜಿನಲ್ಲಿ ಬಳಸಬಹುದಾಗಿದೆ.
2024ರ ಐಪಿಎಲ್ ಕ್ರಿಕೆಟ್ ಟೂರ್ನಿಗೆ ಡೇಟ್ ಫಿಕ್ಸ್..?
77 ಸ್ಥಾನ ಖಾಲಿ: ಎಲ್ಲಾ ತಂಡಗಳು ಕಳೆದ ಬಾರಿ ತಂಡದಲ್ಲಿದ್ದ ಹಲವರನ್ನು ರೀಟೈನ್ ಮಾಡಿಕೊಂಡಿದೆ. ಸದ್ಯ 10 ತಂಡಗಳಲ್ಲಿ 77 ಸ್ಥಾನಗಳು ಖಾಲಿ ಇವೆ. ಈ ಪೈಕಿ 30 ಸ್ಥಾನಗಳು ವಿದೇಶಿಯರಿಗೆ ಮೀಸಲು.
ಸ್ಟಾರ್‌ಗಳ ಮೇಲೆ ಕಣ್ಣು..!
ಈ ಬಾರಿ ಹರಾಜಿನಲ್ಲಿ ಹಲವು ತಾರಾ ಆಟಗಾರರು ಭಾಗಿಯಾಗಲಿದ್ದಾರೆ. ಆಸ್ಟ್ರೇಲಿಯಾದ ವೇಗಿಗಳಾದ ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್, ಬ್ಯಾಟರ್ ಟ್ರ್ಯಾವಿಸ್ ಹೆಡ್, ದಕ್ಷಿಣ ಆಫ್ರಿಕಾದ ವೇಗಿ ಗೆರಾಲ್ಡ್ ಕೋಟ್ಜೀ, ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್, ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್, ರಚಿನ್ ರವೀಂದ್ರ, ಭಾರತದ ಮನೀಶ್ ಪಾಂಡೆ, ಕರುಣ್ ನಾಯರ್, ಶಾರ್ದೂಲ್ ಠಾಕೂರ್ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ. ಆದರೆ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್, ಜೋ ರೂಟ್, ಜೋಫ್ರಾ ಆರ್ಚರ್, ಬಾಂಗ್ಲಾದೇಶದ ಶಕೀಬ್ ಸೇರಿ ಹಲವರು ಈ ಬಾರಿ ಹರಾಜಿನಲ್ಲಿಲ್ಲ.
2023 ರೋಹಿತ್ ಶರ್ಮಾ ಪಾಲಿಗೆ ಕರಾಳ ವರ್ಷ..! ಒಂದಲ್ಲ, ಎರಡಲ್ಲ 4 ಬಾರಿ ಹಿಟ್‌ಮ್ಯಾನ್ ಹಾರ್ಟ್ ಬ್ರೇಕ್..!
ಯಾರಿಗೆ ಬಂಪರ್?
ವಿವಿಧ ತಂಡಗಳ ನಡುವೆ ಖರೀದಿಗೆ ತೀವ್ರ ಪೈಪೋಟಿ ನೀಡಬಲ್ಲ ಆಟಗಾರರು ಈ ಬಾರಿ ಹಲವರಿದ್ದಾರೆ. ಸ್ಟಾರ್ಕ್, ರಚಿನ್ ರವೀಂದ್ರ, ಕೋಟ್ಜೀ, ಕಮಿನ್ಸ್, ಹರ್ಷಲ್ ಪಟೇಲ್, ಉಮೇಶ್, ಹಸರಂಗ, ಶಾರುಖ್ ಖಾನ್ ಈ ಬಾರಿ ಮೂಲಬೆಲೆಗಿಂತ ಹಲವು ಪಟ್ಟು ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆಯಿದೆ.