ಸನ್‌ರೈರ್ಸ್ ಹೈದರಾಬಾದ್ ತಂಡದ ವಿರುದ್ಧ ಅಬ್ಬರಿಸಲು ವಿಫಲವಾದ ಡೆಲ್ಲಿ ಕ್ಯಾಪಿಟಲ್ಸ್ 144 ರನ್ ಸಿಡಿಸಿದೆ. ಸ್ಪರ್ಧಾತ್ಮಕ ಮೊತ್ತ ಟಾರ್ಗೆಟ್ ನೀಡಿರುವ ಡೆಲ್ಲಿ ಕ್ಯಾಪಿಟಲ್ಸ್ ಈ ಟಾರ್ಗೆಟ್ ಡಿಫೆಂಡ್ ಮಾಡಿಕೊಳ್ಳುತ್ತಾ?

ಹೈದರಾಬಾದ್(ಏ.24): ಕನ್ನಡಿಗ ಮನೀಶ್ ಪಾಂಡೆ ಹಾಗೂ ಅಕ್ಸರ್ ಪಟೇಲ್ ಹೊರತುಪಡಿಸಿದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಯಾರೂ ಆಸರೆಯಾಗಲಿಲ್ಲ. ಇವರಿಬ್ಬರ ಜೊತೆಯಾಟದಿಂದ ಸಂಪೂರ್ಣ ಕುಸಿದು ಹೋಗಿದ್ದ ತಂಡ ಇದೀಗ 9 ವಿಕೆಟ್ ಕಳೆದುಕೊಂಡು 144 ರನ್ ಸಿಡಿಸಿದೆ. ಸ್ಪರ್ಧಾತ್ಮಕ ಮೊತ್ತ ಟಾರ್ಗೆಟ್ ನೀಡಿರುವ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ವಿಶ್ವಾಸದಲ್ಲಿದೆ.

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದಕ್ಕೆ ತಕ್ಕ ಆರಂಭ ಸಿಗಲಿಲ್ಲ. ಕಾರಣ ತಂಡ ಸೇರಿಕೊಂಡ ಫಿಲಿಪ್ ಸಾಲ್ಟ್ ಡಕೌಟ್ ಆದರು. ಇತ್ತ ಮಿಚೆಲ್ ಮಾರ್ಶ್ 15 ಎಸೆತದಲ್ಲಿ 25 ರನ್ ಸಿಡಿಸಿ ಔಟಾದರು. ನಾಯಕ ಡೇವಿಡ್ ವಾರ್ನರ್ 20 ಎಸೆತದಲ್ಲಿ 21 ರನ್ ಸಿಡಿಸಿ ನಿರ್ಗಮಿಸಿದರು. ಸರ್ಫಾರಾಜ್ ಖಾನ್ 10 ರನ್ ಸಿಡಿಸಿ ಔಟಾದರು.

IPL ಇತಿಹಾಸದ ಅತ್ಯಂತ ದುಬಾರಿ ಓವರ್ ಮಾಡಿದ ಆರ್ಶದೀಪ್‌ ಸಿಂಗ್..! ಮುರಿದ ಸ್ಟಂಪ್ಸ್‌ ಬೆಲೆ 48 ಲಕ್ಷ..!

ಕುಸಿದ ತಂಡಕ್ಕೆ ಮನೀಶ್ ಪಾಂಡೆ ಹೋರಾಟದ ಮೂಲಕ ಚೇತರಿಕೆ ನೀಡಿದರು. ಅಮನ್ ಹಕೀಮ್ ಖಾನ್ ಕೇವಲ 4 ರನ್ ಸಿಡಿಸಿ ಔಟಾದರು. ಅಕ್ಸರ್ ಪಟೇಲ್ ಜೊತೆ ಸೇರಿದ ಮನೀಶ್ ಪಾಂಡೆ ಇನ್ನಿಂಗ್ಸ್ ಮುಂದುವರಿಸಿದರು. ಅಕ್ಸರ್ ಪಟೇಲ್ 34 ಎಸೆತದಲ್ಲಿ 34 ರನ್ ಸಿಡಿಸಿ ಔಟಾದರು. ಇತ್ತ ಮನೀಶ್ ಪಾಂಡೆ 27 ಎಸೆತದಲ್ಲಿ 34 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಯಾರಿಂದಲೂ ರನ್ ಹರಿದು ಬರಲಿಲ್ಲ. 9 ವಿಕೆಟ್ ಕಳೆದುಕೊಂಡು 144ರನ್ ಸಿಡಿಸಿತು. 

ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 10ನೇ ಸ್ಥಾನದಲ್ಲಿದೆ. ಆಡಿದ 6 ಪಂದ್ಯದಲ್ಲಿ ಕೇವಲ 1 ಗೆಲುವು ದಾಖಲಿಸಿದೆ. ಇನ್ನುಳಿದ 5 ಪಂದ್ಯದಲ್ಲಿ ಸೋಲು ಕಂಡಿದೆ.ಸತತ ಸೋಲು ಕಂಡು ನಿರಾಸೆ ಅನುಭವಿಸಿದ್ದ ಡೆಲ್ಲಿ ಕ್ಯಾಪಿಟಲ್ಲ್, ಕಳೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ 4 ವಿಕೆಟ್ ಗೆಲುವು ದಾಖಲಿಸಿತ್ತು. ಇದಕ್ಕೂ ಮೊದಲು ಆರ್‌ಸಿಬಿ, ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್,ಗುಜರಾತ್ ಟೈಟಾನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಮುಗ್ಗರಿಸಿತ್ತು.ಇತ್ತ ಸನ್‌ರೈಸರ್ಸ್ ಹೈದರಾಬಾದ್ ತಂಡ ಆಡಿದ 6 ಪಂದ್ಯದಲ್ಲಿ 2 ಗೆಲುವು ದಾಖಲಿಸಿದರೆ 4 ಸೋಲು ಕಂಡಿದೆ. ಕೋಲ್ಕತಾ ಹಾಗೂ ಪಂಜಾಬ್ ವಿರುದ್ಧ ಗೆಲುವು ದಾಖಲಿಸಿದ್ದರೆ, ಇನ್ನುಳಿದ ತಂಡಗಳ ವಿರುದ್ದ ಸೋಲು ಕಂಡಿದೆ.

IPL 2023 ಕೆಕೆಆರ್ ವಿರುದ್ಧ ದಾಖಲೆಯ ಗೆಲುವು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಸಿಎಸ್‌ಕೆ!

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಡೇವಿಡ್ ವಾರ್ನರ್(ನಾಯಕ), ಫಿಲಿಪ್ ಸಾಲ್ಟ್, ಮಿಚೆಲ್ ಮಾರ್ಶ್, ಮನೀಶ್ ಪಾಂಡೆ, ಸರ್ಫರಾಜ್ ಖಾನ್, ಅಕ್ಸರ್ ಪಟೇಲ್, ಅಮನ್ ಹಕೀಮ್ ಖಾನ್, ರಿಪಲ್ ಪಟೇಲ್, ಅನ್ರಿಚ್ ನೊರ್ಜೆ, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ, ಹ್ಯಾರಿ ಬ್ರೂಕ್, ಆ್ಯಡಿನ ಮರ್ಕ್ರಮ್(ನಾಯಕ), ಮಯಾಂಕ್ ಅಗರ್ವಾಲ್, ಹೆನ್ರಿಚ್ ಕಲ್ಸೀನ್, ಮಾರ್ಕೋ ಜಾನ್ಸೆನ್, ವಾಶಿಂಗ್ಟನ್ ಸುಂದರ್, ಮಯಾಂಕ್ ಮಾರ್ಕಂಡೆ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್