ಜೆರ್ಸಿ ನಂ 18ರ ಬಗ್ಗೆ ಮೊದಲ ಬಾರಿಗೆ ತುಟಿಬಿಚ್ಚಿದ ವಿರಾಟ್ ಕೊಹ್ಲಿಈ ಜೆರ್ಸಿ ನಂಬರ್ ಜತೆಗೆ ಅಲೌಖಿಕ ಸಂಬಂಧವಿದೆ ಎಂದ ಆರ್‌ಸಿಬಿ ರನ್ ಮಷೀನ್ತಮ್ಮ ಜೆರ್ಸಿ ನಂಬರ್ ವಿಶೇಷತೆ ಬಿಚ್ಚಿಟ್ಟ ಕಿಂಗ್ ಕೊಹ್ಲಿ

ಹೈದರಾಬಾದ್‌(ಮೇ.19): ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ರನ್ ಮಷೀನ್‌ ವಿರಾಟ್ ಕೊಹ್ಲಿಗೆ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ವಿರಾಟ್ ಕೊಹ್ಲಿ, ಮೈದಾನಕ್ಕಿಳಿದರು ಎಂದರೆ, ಕೋಟ್ಯಾಂತರ ಕಣ್ಣುಗಳು ವಿರಾಟ್ ಅವರನ್ನು ತದೇಕಚಿತ್ತದಿತ್ತ ನೋಡುತ್ತಿರುತ್ತವೆ. ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಮಾತ್ರವಲ್ಲದೇ ಮೈದಾನದಲ್ಲಿದ್ದಾಗ ಅವರ ಆಂಗಿಕ ಪ್ರದರ್ಶನಕ್ಕೆ ತನ್ನದೇ ಆದ ಅಭಿಮಾನಿ ವರ್ಗವಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಇದೆಲ್ಲದರ ಜತೆಗೆ ಜೆರ್ಸಿ ನಂಬರ್ 18 ಎಂದರೆ ಕ್ರಿಕೆಟ್‌ ಅಭಿಮಾನಿಗಳ ಮನದಲ್ಲಿ ಮೂಡುವ ಒಂದೇ ಹೆಸರು ಅದು ವಿರಾಟ್ ಕೊಹ್ಲಿ. ಸನ್‌ರೈಸರ್ಸ್‌ ಹೈದರಾಬಾದ್ ಎದುರಿನ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ, ತಮ್ಮ ಜೀವನದಲ್ಲಿ 18 ನಂಬರಿಗೆ ಎಷ್ಟು ಪ್ರಾಮುಖ್ಯತೆಯಿದೆ ಎನ್ನುವುದನ್ನು ಮನಬಿಚ್ಚಿ ಮಾತನಾಡಿದ್ದಾರೆ.

ಆರಂಭದಲ್ಲಿ ಇದು ಕೇವಲ ಒಂದು ನಂಬರ್ ಆಗಿತ್ತು ಅಷ್ಟೇ, ಆದರೆ ಇದಾದ ಕೆಲ ವರ್ಷಗಳ ಬಳಿಕ ಈ ನಂಬರ್‌ಗೂ ತಮಗೂ ಇರುವ ಅವಿನಾಭಾವ ಸಂಬಂಧವೇನು ಎನ್ನುವುದನ್ನು ವಿರಾಟ್ ಕೊಹ್ಲಿ ಮೆಲುಕು ಹಾಕಿದ್ದಾರೆ. " ಪ್ರಾಮಾಣಿಕವಾಗಿ ಹೇಳಬೇಕೆಂದರೆ, 18 ನಂಬರ್‌ ನನ್ನ ಪಾಲಿಗೆ ಕೇವಲ ಒಂದು ನಂಬರ್ ಆಗಿತ್ತು. ನಾನು ಅಂಡರ್ 19 ಭಾರತ ತಂಡದಲ್ಲಿ ಸ್ಥಾನ ಪಡೆದಾಗ ನನಗೆ ಈ ನಂಬರ್ ನೀಡಲಾಗಿತ್ತು. ಇದಾದ ಕೆಲ ವರ್ಷಗಳ ಬಳಿಕ ಈ ನಂಬರ್ ನನ್ನ ಪಾಲಿಗೆ ಅತ್ಯಂತ ಮಹತ್ವದ ನಂಬರ್ ಆಗಿ ಬದಲಾಯಿತು. ನಾನು ಭಾರತ ಕ್ರಿಕೆಟ್ ತಂಡಕ್ಕೆ ಆಗಸ್ಟ್ 18ರಂದು ಪಾದಾರ್ಪಣೆ ಮಾಡಿದೆ. ನನ್ನ ತಂದೆ ಡಿಸೆಂಬರ್ 18, 2006ರಲ್ಲಿ ಕೊನೆಯುಸಿರೆಳೆದರು. ಈ ಎರಡು ಮಹತ್ವದ ಘಟನಾವಳಿಗಳು 18ರಂದೇ ನಡೆದವು. ಈ ನಂಬರ್‌ಗೂ ನನಗೂ ಏನೋ ಒಂದು ರೀತಿಯ ಅಲೌಖಿಕ ಸಂಬಂಧವಿದೆ ಎಂದು ಭಾವಿಸುತ್ತೇನೆ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

Scroll to load tweet…

ಇನ್ನು ನಾನು ಕ್ರಿಕೆಟ್ ಆಡಲು ಮೈದಾನಕ್ಕಿಳಿದಾಗ, ಜನರು ನನ್ನ ಹೆಸರಿನ ಹಾಗೂ ನಂಬರಿನ ಜೆರ್ಸಿ ತೊಟ್ಟು ಬಂದಿರುವುದನ್ನು ನೋಡಿ ಖುಷಿಯಾಗುತ್ತದೆ. ಯಾಕೆಂದರೆ ನಾನು ಚಿಕ್ಕವನಿದ್ದಾಗ ನನ್ನ ಹೀರೋಗಳ ಜೆರ್ಸಿ ತೊಟ್ಟು ಖುಷಿ ಪಡುತ್ತಿದ್ದೆ. ಇದೀಗ ನನ್ನ ಜೆರ್ಸಿಯನ್ನು ಜನರು ತೊಡುವುದನ್ನು ನೋಡಿದರೆ ಖುಷಿಯಾಗುತ್ತದೆ. ದೇವರ ದಯೆಯಿಂದ ಅಂತಹ ಅವಕಾಶ ನನಗೆ ಸಿಕ್ಕಿದೆ ಎಂದು ಭಾವಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಕಿಂಗ್‌ ಕೊಹ್ಲಿ ಶತಕ: ರೇಸಲ್ಲಿ ಉಳಿದ ಆರ್‌ಸಿಬಿ!

2023ರ ಐಪಿಎಲ್‌ನ ಪ್ಲೇ-ಆಫ್‌ ರೇಸ್‌ ಪಂದ್ಯದಿಂದ ಪಂದ್ಯಕ್ಕೆ ರೋಚಕಗೊಳ್ಳುತ್ತಿದ್ದು, ಸನ್‌ರೈಸ​ರ್ಸ್‌ ಹೈದರಾಬಾದ್‌ ವಿರುದ್ಧ 8 ವಿಕೆಟ್‌ ಭರ್ಜರಿ ಜಯ ಸಾಧಿಸುವ ಮೂಲಕ ಆರ್‌ಸಿಬಿ ಪ್ಲೇ-ಆಫ್‌ಗೇರುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ. ‘ಚೇಸ್‌ ಮಾಸ್ಟರ್‌’ ವಿರಾಟ್‌ ಕೊಹ್ಲಿ ಹಾಗೂ ನಾಯಕ ಫಾಫ್‌ ಡು ಪ್ಲೆಸಿ ಅವರ ದಾಖಲೆಯ 172 ರನ್‌ ಜೊತೆಯಾಟ, ಸನ್‌ರೈಸ​ರ್ಸ್‌ ನೀಡಿದ್ದ 187 ರನ್‌ ಗುರಿಯನ್ನು ಆರ್‌ಸಿಬಿ ನಿರಾಯಾಸವಾಗಿ ಇನ್ನೂ 4 ಎಸೆತ ಬಾಕಿ ಇರುವಂತೆ ಬೆನ್ನತ್ತಲು ನೆರವಾಯಿತು.

ಶತಕ ಸಿಡಿಸಿದ ಬೆನ್ನಲ್ಲೇ ಮೈದಾನದಿಂದಲೇ ಮಡದಿಗೆ ವಿಡಿಯೋ ಕಾಲ್ ಮಾಡಿದ ವಿರಾಟ್ ಕೊಹ್ಲಿ..! ವಿಡಿಯೋ ವೈರಲ್

ಸ್ಫೋಟಕ ಆರಂಭ: ಕೊಹ್ಲಿ ಹಾಗೂ ಡು ಪ್ಲೆಸಿ ಮೊದಲ ಎಸೆತದಿಂದಲೇ ಸನ್‌ರೈಸ​ರ್ಸ್‌ ಬೌಲರ್‌ಗಳನ್ನು ಚೆಂಡಾಡಿದರು. ಪವರ್‌-ಪ್ಲೇನಲ್ಲಿ 64 ರನ್‌ ಸಿಡಿಸಿದ ಈ ಜೋಡಿ 10 ಓವರ್‌ಗೆ 95 ರನ್‌ ಕಲೆಹಾಕಿತು. ಡು ಪ್ಲೆಸಿಗೆ ಆರಂಭದಲ್ಲೇ 2 ಜೀವದಾನ ದೊರೆಯಿತು. 9ನೇ ಓವರ್‌ನ 5ನೇ ಎಸೆತದಲ್ಲಿ ಡು ಪ್ಲೆಸಿ ್ತ ಮಿಡ್‌ ವಿಕೆಟ್‌ ಫೀಲ್ಡರ್‌ಗೆ ಕ್ಯಾಚಿತುಔಟಾಗಿದ್ದರು. ಆದರೆ ಆ ಎಸೆತವನ್ನು ವಿವಾದಾತ್ಮಕ ರೀತಿಯಲ್ಲಿ ನೋಬಾಲ್‌ ಎಂದು ಘೋಷಿಸಲಾಯಿತು. ಇದರ ಲಾಭವೆತ್ತಿದ ಆರ್‌ಸಿಬಿ ನಾಯಕ ಈ ಆವೃತ್ತಿಯಲ್ಲಿ 8ನೇ ಅರ್ಧಶತಕ ಪೂರೈಸಿ, 700 ರನ್‌ ಗಡಿ ದಾಟಿದರು.

ಕೊಹ್ಲಿ ಯಾವ ಹಂತದಲ್ಲೂ ನಿಯಂತ್ರಣ ಕಳೆದುಕೊಳ್ಳದೆ 62 ಎಸೆತದಲ್ಲಿ ಶತಕ ಪೂರೈಸಿದರು. 63 ಎಸೆತದಲ್ಲಿ 12 ಬೌಂಡರಿ, 4 ಸಿಕ್ಸರ್‌ ಸಿಡಿಸಿ ಔಟಾದರು. ಡು ಪ್ಲೆಸಿ 47 ಎಸೆತದಲ್ಲಿ 71 ರನ್‌ ಗಳಿಸಿ ವಿಕೆಟ್‌ ಕಳೆದುಕೊಂಡರು. ಮ್ಯಾಕ್ಸ್‌ವೆಲ್‌, ಬ್ರೇಸ್‌ವೆಲ್‌ ತಂಡವನ್ನು ಜಯದ ದಡ ದಾಟಿಸಿದರು.