ಹೈದರಾಬಾದ್‌ನಲ್ಲಿ ಲಖನೌ ಹಾಗೂ ಸನ್‌ರೈಸರ್‍ಸ್ ಮುಖಾಮುಖಿಟಾಸ್ ಗೆದ್ದ ಹೈದರಾಬಾದ್‌ ಬ್ಯಾಟಿಂಗ್ ಆಯ್ಕೆಉಭಯ ತಂಡಗಳ ಪಾಲಿಗೆ ಮಹತ್ವದ ಪಂದ್ಯ

ಹೈದರಾಬಾದ್‌(ಮೇ.13): 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ 58ನೇ ಪಂದ್ಯದಲ್ಲಿಂದು ಲಖನೌ ಸೂಪರ್ ಜೈಂಟ್ಸ್ ಹಾಗೂ ಸನ್‌ರೈಸರ್‍ಸ್‌ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಸನ್‌ರೈಸರ್‍ಸ್ ತಂಡವು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. 

ಹೈದರಾಬಾದ್‌ ಹಾಗೂ ಲಖನೌ ತಂಡಗಳ ನಡುವಿನ ಪಂದ್ಯಕ್ಕೆ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿದೆ. ಹೈದರಾಬಾದ್‌ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಬ್ಯಾಟಿಂಗ್ ಆಲ್ರೌಂಡರ್ ಸನ್ವೀರ್ ಸಿಂಗ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ದೀಪಕ್ ಹೂಡಾ ಹಾಗೂ ಮೊಹ್ಸಿನ್ ಖಾನ್ ಬದಲಿಗೆ ಪ್ರೇರಕ್ ಮಂಕಡ್ ಹಾಗೂ ಯುಧುವೀರ್ ಸ್ಥಾನ ಪಡೆದಿದ್ದಾರೆ.

ಐಪಿ​ಎ​ಲ್‌ ಇತಿಹಾಸದಲ್ಲಿ ಲಖನೌ ಸೂಪರ್ ಜೈಂಟ್ಸ್ ಹಾಗೂ ಸನ್‌ರೈಸರ್‍ಸ್‌ ಹೈದರಾಬಾದ್ ತಂಡಗಳು ಒಟ್ಟು ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ಪಂದ್ಯಗಳಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ಗೆಲುವಿನ ನಗೆ ಬೀರಿದ್ದು, ಇದೀಗ ಆರೆಂಜ್‌ ಆರ್ಮಿ ಎದುರು ಹ್ಯಾಟ್ರಿಕ್ ಗೆಲುವು ಸಾಧಿಸಲು ಲಖನೌ ಸೂಪರ್ ಜೈಂಟ್ಸ್ ಎದುರು ನೋಡುತ್ತಿದೆ.

ಮುಖಾಮುಖಿ: 02

ಹೈದ್ರಾ​ಬಾ​ದ್‌: 00

ಲಖನೌ: 02

ಹೈದ್ರಾ​ಬಾ​ದ್‌: ಅಭಿಷೇಕ್‌ ಶರ್‍ಮಾ, ಅನ್ಮೋಲ್‌ಪ್ರೀತ್ ಸಿಂಗ್, ರಾಹುಲ್ ತ್ರಿಪಾಠಿ, ಏಯ್ಡನ್‌ ಮಾರ್ಕ್​ರ​ಮ್‌​(​ನಾ​ಯ​ಕ​), ಹೆನ್ರಿಚ್ ಕ್ಲಾಸೆನ್‌, ಗ್ಲೆನ್ ಫಿಲಿಫ್ಸ್‌, ಅಬ್ದುಲ್ ಸಮದ್‌, ಭುವನೇಶ್ವರ್ ಕುಮಾರ್, ಟಿ ನಟರಾಜನ್‌, ಮಯಾಂಕ್ ಮಾರ್ಕಂಡೆ, ಫಜಲ್‌ಹಕ್ ಫಾರೂಕಿ.

ಲಖನೌ: ಕ್ವಿಂಟನ್ ಡಿ ಕಾಕ್‌, ಕೈಲ್ ಮೇಯ​ರ್‍ಸ್, ದೀಪಕ್ ಹೂಡಾ, ಕೃನಾಲ್‌ ಪಾಂಡ್ಯ(ನಾ​ಯ​ಕ​), ಮಾರ್‍ಕಸ್ ಸ್ಟೋಯ್ನಿಸ್‌, ನಿಕೋಲಸ್ ಪೂರನ್‌, ಪ್ರೇರಕ್ ಮಂಕಡ್ , ಯಶ್‌ ಠಾಕೂರ್, ಆವೇಶ್‌ ಖಾನ್, ರವಿ ಬಿಷ್ಣೋಯ್‌, ಯುಧುವೀರ್ ಸಿಂಗ್.

ಪಂದ್ಯ: ಮಧ್ಯಾಹ್ನ 3.30ಕ್ಕೆ, ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ