ಸೂಪರ್ ಸಂಡೆಯ ಎರಡನೇ ಪಂದ್ಯದಲ್ಲಿಂದು ಸನ್‌ರೈಸರ್ಸ್-ಪಂಜಾಬ್ ಕಿಂಗ್ಸ್ ಫೈಟ್ರೋಚಕ ಪಂದ್ಯಕ್ಕೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನ ಆತಿಥ್ಯತವರಿನಲ್ಲಿ ಗೆಲುವಿನ ಖಾತೆ ತೆರೆಯುವ ನಿರೀಕ್ಷೆಯಲ್ಲಿ ಸನ್‌ರೈಸರ್ಸ್ ಹೈದರಾಬಾದ್
ಹೈದರಾಬಾದ್(ಏ.09): ಸತತ 2 ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್, ಭಾನುವಾರ ತನ್ನ ತವರಿನಲ್ಲಿ ಪುಟಿದೇಳಲು ಕಾಯುತ್ತಿದೆ. ಎದುರಾಗಲಿರುವುದು ಬಲಿಷ್ಠ ಪಂಜಾಬ್ ಕಿಂಗ್ಸ್. ಆಡಿರುವ ಎರಡೂ ಪಂದ್ಯಗಳಲ್ಲಿ ರೋಚಕ ಜಯ ಸಾಧಿಸಿದ ಪಂಜಾಬ್ ಮತ್ತೊಮ್ಮೆ ಅದೃಷ್ಟದ ಬೆನ್ನೇರಿ ಮುನ್ನಡೆಯಲು ಎದುರು ನೋಡುತ್ತಿದೆ.
ಸನ್‌ರೈಸರ್ಸ್ ಹೈದರಾಬಾದ್ ಉತ್ತಮ ಆಟಗಾರರನ್ನು ಹೊಂದಿದೆ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಸೂಕ್ತ ತಂಡ ಸಂಯೋಜನೆಯೊಂದಿಗೆ ಕಣಕ್ಕಿಳಿಯಬೇಕಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಅರಂಭಿಕ ಬ್ಯಾಟರ್ ಮಯಾಂಕ್ ಅಗರ್‌ವಾಲ್. ರಾಹುಲ್ ತ್ರಿಪಾಠಿ, ನಾಯಕ ಏಯ್ಡನ್ ಮಾರ್ಕ್‌ರಮ್ ಹಾಗೂ ಹ್ಯಾರಿ ಬ್ರೂಕ್ ಜವಾಬ್ದಾರಿಯುತ ಆಟವಾಡಬೇಕಿದೆ. ಬೌಲರ್‌ಗಳಾದ ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್ ಸಂಘಟಿತ ಪ್ರದರ್ಶನ ತೋರಬೇಕಿದೆ
ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಎರಡೂ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಮೇಲ್ನೋಟಕ್ಕೆ ಪಂಜಾಬ್ ಬಲಿಷ್ಠವಾಗಿ ತೋರುತ್ತಿದ್ದರೂ, ಸನ್‌ರೈಸರ್ಸ್ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರೆ, ಪಂಜಾಬ್‌ಗೆ ಈ ಆವೃತ್ತಿಯಲ್ಲಿ ಮೊದಲ ಸೋಲುಣಿಸಬಹುದು. ಪಂಜಾಬ್ ತಂಡವು ಬ್ಯಾಟಿಂಗ್‌ನಲ್ಲಿ ಶಿಖರ್ ಧವನ್, ಪ್ರಭ್‌ಸಿಮ್ರನ್ ಸಿಂಗ್, ರಾಜಪಕ್ಸ, ಜಿತೇಶ್ ಶರ್ಮಾ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಇನ್ನು ಬೌಲಿಂಗ್‌ನಲ್ಲಿ ಆರ್ಶದೀಪ್ ಸಿಂಗ್, ನೇಥನ್ ಎಲ್ಲೀಸ್, ರಾಹುಲ್ ಚಹರ್ ಹಾಗೂ ಸ್ಯಾಮ್ ಕರ್ರನ್ ಮಿಂಚುತ್ತಿರುವುದು ಶಿಖರ್ ಧವನ್ ಪಡೆಯ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.
IPL 2023 ಗುಜರಾತ್‌ಗೆ ಹ್ಯಾಟ್ರಿಕ್ ಜಯದ ಗುರಿ, ಕೆಕೆಆರ್ ಸವಾಲಿಗೆ ಪಾಂಡ್ಯ ಪಡೆ ರೆಡಿ
ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇದುವರೆಗೂ 20 ಬಾರಿ ಮುಖಾಮುಖಿಯಾಗಿದ್ದು ಪಂಜಾಬ್ ಕಿಂಗ್ಸ್ ತಂಡವು ಕೊಂಚ ಮೇಲುಗೈ ಸಾಧಿಸಿದೆ. 20 ಪಂದ್ಯಗಳ ಪೈಕಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 13 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಪಂಜಾಬ್ ಕಿಂಗ್ಸ್ ತಂಡವು 7 ಪಂದ್ಯಗಳಲ್ಲಿ ಗೆಲುವಿನ ಸಿಹಿ ಸವಿದಿದೆ.
ಸಂಭವನೀಯ ಆಟಗಾರರ ಪಟ್ಟಿ
ಪಂಜಾಬ್: ಶಿಖರ್ ಧವನ್(ನಾಯಕ), ಪ್ರಭ್‌ಸಿಮ್ರನ್ ಸಿಂಗ್, ಭಾನುಕ ರಾಜಪಕ್ಸೆ, ಜಿತೇಶ್ ಶರ್ಮಾ, ಶಾರುಖ್ ಖಾನ್, ಸಿಕಂದರ್ ರಾಜಾ, ಸ್ಯಾಮ್ ಕರ್ರನ್, ಹಪ್ರೀರ್ತ್ ಬ್ರಾರ್, ರಾಹುಲ್ ಚಹರ್, ನೇಥನ್ ಎಲ್ಲೀಸ್, ಅಶ್‌ರ್‍ದೀಪ್ ಸಿಂಗ್.
ಸನ್‌ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್‌ವಾಲ್, ಅನ್ಮೋಲ್‌ಪ್ರೀತ್, ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್(ನಾಯಕ), ಹ್ಯಾರಿ ಬ್ರೂಕ್, ವಾಷಿಂಗ್ಟನ್ ಸುಂದರ್, ಅಬ್ದುಲ್ ಸಮದ್, ರಶೀದ್ ಖಾನ್, ಉಮ್ರಾನ್ ಮಲಿಕ್, ಭುವನೇಶ್ವರ್ ಕುಮಾರ್, ಟಿ ನಟರಾಜನ್.
ಪಂದ್ಯ: ಸಂ.7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಸಿನಿಮಾ
ಪಿಚ್ ರಿಪೋರ್ಚ್
ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಈ ಆವೃತ್ತಿಯ ಮೊದಲ ಪಂದ್ಯದಲ್ಲೇ 200ಕ್ಕೂ ಹೆಚ್ಚು ಮೊತ್ತ ದಾಖಲಾಗಿತ್ತು. ಈ ಕ್ರೀಡಾಂಗಣದಲ್ಲಿ ಸರಾಸರಿ ಪ್ರತಿ 6 ಎಸೆತಕ್ಕೆ ಒಂದು ಬೌಂಡರಿ/ಸಿಕ್ಸರ್ ದಾಖಲಾಗುತ್ತದೆ. ಈ ಪಂದ್ಯದಲ್ಲೂ ದೊಡ್ಡ ಮೊತ್ತ ನಿರೀಕ್ಷಿಸಬಹುದು.
