ಸೂಪರ್ ಸಂಡೆಯ ಮೊದಲ ಪಂದ್ಯದಲ್ಲಿಂದು ಗುಜರಾತ್ ಟೈಟಾನ್ಸ್‌-ಕೆಕೆಆರ್ ಮುಖಾಮುಖಿಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಗುಜರಾತ್ ಟೈಟಾನ್ಸ್‌ಕೋಲ್ಕತಾ ನೈಟ್ ರೈಡರ್ಸ್‌ ಎದುರು ಗೆಲುವಿನ ನಿರೀಕ್ಷೆಯಲ್ಲಿ ಪಾಂಡ್ಯ ಪಡೆ

ಅಹಮದಾಬಾದ್‌(ಏ.09): ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ 16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಭರ್ಜರಿಯಾಗಿ ಆರಂಭಿಸಿದ್ದು, ಸತತ 3ನೇ ಗೆಲುವಿನ ನಿರೀಕ್ಷೆಯಲ್ಲಿದೆ. ಭಾನುವಾರ ಮಧ್ಯಾಹ್ನ ಆರಂಭಗೊಳ್ಳಲಿರುವ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ಸ್‌ ಸವಾಲನ್ನು ಎದುರಿಸಲಿದೆ.

ತವರಿನ ಲಾಭದ ಜೊತೆಗೆ ಗುಜರಾತ್‌ಗೆ ಅತ್ಯುತ್ತಮ ಸಂಪನ್ಮೂಲವಿದ್ದು ಯಾವುದೇ ಎದುರಾಳಿಯನ್ನು ಸೋಲಿಸುವ ಸಾಮರ್ಥ್ಯವೂ ಇದೆ. ತಂಡ ಕೆಲವೇ ಆಟಗಾರರ ಮೇಲೆ ಅವಲಂಬಿತಗೊಳ್ಳದೆ ಇರುವುದೇ ಯಶಸ್ಸಿನ ಗುಟ್ಟು. ಗುಜರಾತ್ ಟೈಟಾನ್ಸ್‌ ತಂಡವು ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಎದುರು 5 ವಿಕೆಟ್‌ ಜಯ ಸಾಧಿಸಿತ್ತು. ಇನ್ನು ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು 6 ವಿಕೆಟ್ ಜಯ ಸಾಧಿಸುವ ಮೂಲಕ ಚಾಂಪಿಯನ್ ತಂಡದಂತೆಯೇ ಪ್ರದರ್ಶನ ತೋರುತ್ತಿದೆ. ಗುಜರಾತ್ ಪರ ಬ್ಯಾಟಿಂಗ್‌ನಲ್ಲಿ ಶುಭ್‌ಮನ್ ಗಿಲ್‌, ಸಾಯಿ ಸುದರ್ಶನ್‌, ವಿಜಯ್ ಶಂಕರ್ ಹಾಗೂ ಡೇವಿಡ್ ಮಿಲ್ಲರ್ ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿರುವುದು ತಂಡದ ಪಾಲಿಗೆ ಪ್ಲಸ್ ಪಾಯಿಂಟ್ ಎನಿಸಿದೆ. ಇನ್ನು ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ, ರಶೀದ್ ಖಾನ್‌, ಅಲ್ಜೇರಿ ಜೋಸೆಫ್‌ ಮಿಂಚುತ್ತಿರುವುದು ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚುವಂತೆ ಮಾಡಿದೆ. 

ಮತ್ತೊಂದೆಡೆ ಆರ್‌ಸಿಬಿಯನ್ನು ಹುರಿದು ಮುಕ್ಕಿದ್ದ ಕೆಕೆಆರ್‌ ಮತ್ತೊಂದು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ. ಈ ಪಂದ್ಯಕ್ಕೆ ಜೇಸನ್‌ ರಾಯ್‌ ಲಭ್ಯರಿದ್ದು, ಯಾರನ್ನು ಹೊರಗಿಡಲಾಗುತ್ತದೆ ಎನ್ನುವ ಕುತೂಹಲವಿದೆ. ಕಳೆದ ಪಂದ್ಯದಲ್ಲಿ ರೆಹಮನುಲ್ಲಾ ಗುರ್ಬಾಜ್ ಸ್ಪೋಟಕ ಆರಂಭ ಒದಗಿಸಿಕೊಟ್ಟಿದ್ದರು. ಹೀಗಾಗಿ ರಸೆಲ್‌ ಅಥವಾ ಸೌಥಿ ಇಬ್ಬರಲ್ಲಿ ಒಬ್ಬರು ಹೊರಗುಳಿಯುತ್ತಾರಾ ಅಥವಾ ಗುರ್ಬಾಜ್‌ಗೆ ವಿಶ್ರಾಂತಿ ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

IPL 2023 ರಹಾನೆ ಹೊಸ ಅವತಾರ, ಮುಂಬೈ ವಿರುದ್ಧ ಚೆನ್ನೈಗೆ 7 ವಿಕೆಟ್ ಗೆಲುವು!

ಕಳೆದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟರ್‌ಗಳನ್ನು ಮಿಸ್ಟ್ರಿ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ, ಸುನಿಲ್ ನರೈನ್ ಹಾಗೂ ಸುಯಾಶ್ ಶರ್ಮಾ ಇನ್ನಿಲ್ಲದಂತೆ ಕಾಡಿದ್ದರು. ಇದೀಗ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್‌ ತಂಡದ ಬಲಿಷ್ಠ ಬ್ಯಾಟರ್‌ಗಳ ಎದುರು ಕೋಲ್ಕತಾ ನೈಟ್ ರೈಡರ್ಸ್‌ ಬೌಲರ್‌ಗಳು ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.

ಐಪಿಎಲ್ ಇತಿಹಾಸದಲ್ಲಿ ಗುಜರಾತ್ ಟೈಟಾನ್ಸ್‌ ಹಾಗೂ ಕೋಲ್ಕತಾ ನೈಟ್ ರೈಡರ್ಸ್‌ ತಂಡಗಳು ಕೇವಲ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು, ಕೆಕೆಆರ್ ತಂಡವು ಗೆಲುವಿನ ನಗೆ ಬೀರಿತ್ತು. ಇದೀಗ ಉತ್ತಮ ಲಯದಲ್ಲಿರುವ ಕೆಕೆಆರ್ ತಂಡವು ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸುತ್ತಾ ಕಾದು ನೋಡಬೇಕಿದೆ. 

ಸಂಭವನೀಯ ಆಟಗಾರರ ಪಟ್ಟಿ

ಗುಜರಾತ್‌: ವೃದ್ದಿಮಾನ್‌ ಸಾಹ, ಶುಭ್‌ಮನ್‌ ಗಿಲ್‌, ಸಾಯಿ ಸುದರ್ಶನ್‌, ಹಾರ್ದಿಕ್‌ ಪಾಂಡ್ಯ(ನಾಯಕ), ಡೇವಿಡ್‌ ಮಿಲ್ಲರ್‌, ರಾಹುಲ್ ತೆವಾಟಿಯಾ, ರಶೀದ್‌ ಖಾನ್, ಜೋಶ್ವಾ ಲಿಟ್ಲ್‌, ಅಲ್ಜೆರಿ ಜೋಸೆಫ್‌, ಯಶ್ ದಯಾಳ್‌, ಮೊಹಮ್ಮದ್ ಶಮಿ.

ಕೆಕೆಆರ್‌: ರೆಹಮನುಲ್ಲಾ ಗುರ್ಬಾಜ್‌/ ಜೇಸನ್ ರಾಯ್‌, ವೆಂಕಟೇಶ್ ಅಯ್ಯರ್‌, ಮನ್‌ದೀಪ್‌ ಸಿಂಗ್, ನಿತೀಶ್‌ ರಾಣಾ(ನಾಯಕ), ರಿಂಕು ಸಿಂಗ್‌, ಆಂಡ್ರೆ ರಸೆಲ್‌, ಶಾರ್ದೂಲ್‌ ಠಾಕೂರ್, ಸುನಿಲ್‌ ನರೇನ್‌, ಉಮೇಶ್‌ ಯಾದವ್, ಟಿಮ್‌ ಸೌಥಿ, ವರುಣ್‌ ಚಕ್ರವರ್ತಿ.

ಪಂದ್ಯ: ಮ.3.30ಕ್ಕೆ 
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌/ಜಿಯೋ ಸಿನಿಮಾ

ಪಿಚ್‌ ರಿಪೋರ್ಚ್‌

ಉದ್ಘಾಟನಾ ಪಂದ್ಯದಲ್ಲಿ ದೊಡ್ಡ ಮೊತ್ತಕ್ಕೆ ಸಾಕ್ಷಿಯಾಗಿದ್ದ ಮೋದಿ ಕ್ರೀಡಾಂಗಣ ಮತ್ತೊಂದು ಸ್ಪರ್ಧಾತ್ಮಕ ಸೆಣಸಾಟಕ್ಕೆ ಕಾಯುತ್ತಿದೆ. ಇಲ್ಲಿನ ಪಿಚ್‌ ಕಳೆದ ಕೆಲ ವರ್ಷಗಳಲ್ಲಿ ಸರಾಸರಿ 8-8.5 ರನ್‌ರೇಟ್‌ನಲ್ಲಿ ತಂಡಗಳು ರನ್‌ ಕಲೆಹಾಕಿವೆ. ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಹೀಗಾಗಿ ಮೊದಲು ಬ್ಯಾಟ್‌ ಮಾಡುವ ತಂಡ ದೊಡ್ಡ ಮೊತ್ತ ಕಲೆಹಾಕಬೇಕಾದ ಒತ್ತಡಕ್ಕೆ ಸಿಲುಕಬಹುದು.