ಲೋ ಸ್ಕೋರ್ ಗೇಮ್. ಆದರೆ ರೋಚಕ ಹೋರಾಟ ಎರ್ಪಟ್ಟಿತ್ತು. ಒಂದು ಹಂತದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿಕೆಟ್ ಕಬಳಿಸಿ ಡೆಲ್ಲಿ ಪಂದ್ಯದಲ್ಲ ಹಿಡಿತ ಸಾಧಿಸಿತು. ಆದರೆ ಕಾಲ್ಸೀನ್ ಹಾಗೂ ಸುಂದರ್ ಹೋರಾಟ ಹೈದರಾಬಾದ್ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿತು. ಕೊನೆಯ ಎಸೆತದವರೆಗಿನ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ನಗೆ ಬೀರಿದೆ.

ಹೈದರಾಬಾದ್(ಏ.24): ಆರಂಭಿಕ ಹಂತದಲ್ಲಿ ಸನ್‌ರೈಸರ್ಸ್ ಸುಲಭವಾಗಿ ರನ್ ಚೇಸ್ ಮಾಡಲಿದೆ ಅನ್ನೋ ಲೆಕ್ಕಾಚಾರ ಎಲ್ಲರಲ್ಲಿತ್ತು. ಆದರೆ ಡೆಲ್ಲಿ ಅತ್ಯುತ್ತಮ ದಾಳಿಯಿಂದ ಲೆಕ್ಕಾಚಾರ ಬದಲಾಯಿತು. ಹೈದರಾಬಾದ್ ವಿಕೆಟ್ ಪತನದಿಂದ ಡೆಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು.ಅಂತಿಮ ಹಂತದಲ್ಲಿ ಹೆನ್ರಿಚ್ ಕಾಲ್ಸೀನ್ ಹಾಗೂ ವಾಶಿಂಗ್ಟನ್ ಸುಂದರ್ ಜೊತೆಯಾಟದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಗೆಲುವಿನ ಆಸೆ ಚಿಗುರಿತು. ಅಂತಿಮ ಎರಡು ಓವರ್‌ನಲ್ಲಿ ಪಂದ್ಯ ಮತ್ತೆ ಬದಲಾಯಿತು. ಹೈದರಾಬಾದ್ 6 ವಿಕೆಟ್ ನಷ್ಟಕ್ಕೆ 137 ರನ್ ಸಿಡಿಸಿತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 7 ರನ್ ರೋಚಕ ಗೆಲುವು ಕಂಡಿತು. ಡೆಲ್ಲಿ ಸತತ 2ನೇ ಗೆಲುವು ದಾಖಲಿಸಿತು.

145 ರನ್ ಸುಲಭ ಟಾರ್ಗೆಟ್ ಪಡದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಹ್ಯಾರಿ ಬ್ರೂಕ್ ಕೇವಲ 7 ರನ್ ಸಿಡಿಸಿ ನಿರ್ಗಮಿಸಿದರು. ಮಯಾಂಕ್ ಅಗರ್ವಾಲ್ ದಿಟ್ಟ ಹೋರಾಟ ನಡೆಸಿದರೆ, ಇತ್ತ ಯಾರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ಹೀಗಾಗಿ ಸನ್‌ರೈರರ್ಸ್ ಹೈದರಬಾದ್ ಕುಸಿತ ಕಂಡಿತು. ಅಲ್ಪ ಮೊತ್ತದ ಟಾರ್ಗೆಟ್ ಕೂಡ ಆತಂಕ ಹೆಚ್ಚಿಸಿತು.

IPL ಇತಿಹಾಸದ ಅತ್ಯಂತ ದುಬಾರಿ ಓವರ್ ಮಾಡಿದ ಆರ್ಶದೀಪ್‌ ಸಿಂಗ್..! ಮುರಿದ ಸ್ಟಂಪ್ಸ್‌ ಬೆಲೆ 48 ಲಕ್ಷ..!

ಮಯಾಂಕ್ ಅಗರ್ವಾಲ್ 39 ಎಸೆತದಲ್ಲಿ 49 ರನ್ ಸಿಡಿಸಿದರು. ಇತ್ತ ರಾಹುಲ್ ತ್ರಿಪಾಠಿ 15 ರನ್ ಸಿಡಿಸಿ ಔಟಾದರು.ಅಭಿಶೇಕ್ ಶರ್ಮಾ 5 ರನ್ ಸಿಡಿಸಿ ನಿರ್ಗಮಿಸಿದರೆ, ನಾಯಕ ಆ್ಯಡಿನ್ ಮರ್ಕ್ರಮ್ ಕೇವಲ 3 ರನ್ ಸಿಡಿಸಿ ಔಟಾದರು. ಹೆನ್ರಿಚ್ ಕಾಲ್ಸೀನ್ ಹಾಗೂ ವಾಶಿಂಗ್ಟನ್ ಸುಂದರ್ ಮೇಲೆ ಒತ್ತಡ ಹೆಚ್ಚಾಯಿತು. ಸನ್‌ರೈಸರ್ಸ್ ಗೆಲುವಿಗೆ ಅಂತಿಮ 30 ಎಸೆತದಲ್ಲಿ 56 ರನ್ ಅವಶ್ಯಕತೆ ಇತ್ತು. ಹೆನ್ರಿಚ್ ಕಾಲ್ಸೀನ್ ದಿಟ್ಟ ಹೋರಾಟದಿಂದ ಹೈದರಾಬಾದ್ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಕಾಲ್ಸೀನ್ 19 ಎಸೆತದಲ್ಲಿ 31 ರನ್ ಸಿಡಿಸಿ ಔಟಾದರು.

ಅಂತಿಮ ಓವರ್‌ನಲ್ಲಿ ಹೈದರಾಬಾದ್ ಗೆಲುವಿಗೆ 13 ರನ್ ಅವಶ್ಯಕತೆ ಇತ್ತು. ಆದರೆ ಹೈದರಾಬಾದ್ 5 ರನ್ ಸಿಡಿಸಿತು. 6 ವಿಕೆಟ್ ನಷ್ಟಕ್ಕೆ 137 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. 

ಡೆಲ್ಲಿ ಇನ್ನಿಂಗ್ಸ್: ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್ ನಷ್ಟಕ್ಕೆ 144 ರನ್ ಸಿಡಿಸಿತು. ನಾಯಕ ಡೇವಿಡ್ ವಾರ್ನರ್ 21 ರನ್ ಸಿಡಿಸಿ ಔಟಾದರು. ಮಿಚೆಲ್ ಮಾರ್ಶ್ 21 ರನ್ ಸಿಡಿಸಿದರು. ಸರ್ಫರಾಜ್ ಖಾನ್ 10 ರನ್ ಸಿಡಿಸಿ ಔಟಾದರು. ಮನೀಶ್ ಪಾಂಡ 34 ರನ್ ಕಾಣಿಕೆ ನೀಡಿದರು. ಪಾಂಡೆ ಹೋರಾಟದಿಂದ ಹೈದರಾಬಾದ್ ಚೇತರಿಸಿಕೊಂಡಿತು. ಅಕ್ಸರ್ ಪಟೇಲ್ 34 ರನ್ ಸಿಡಿಸಿದರು. 

IPL 2023 ಕೆಕೆಆರ್ ವಿರುದ್ಧ ದಾಖಲೆಯ ಗೆಲುವು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಸಿಎಸ್‌ಕೆ!

ಐಪಿಎಲ್ ಅಂಕಪಟ್ಟಿ: ಪಾಯಿಂಟ್ಸ್ ಟೇಬಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಸ್ಥಾನದಲ್ಲಿದೆ. ಚೆನ್ನೈ 7ರಲ್ಲಿ 5 ಗೆಲುವು ದಾಖಲಿಸಿ 10 ಅಂಕ ಸಂಪಾದಿಸಿದೆ. ಇನ್ನು ರಾಜಸ್ತಾನ ರಾಯಲ್ಸ್ 7ರಲ್ಲಿ 4 ಗೆಲುವು ದಾಖಲಿಸಿ 2ನೇ ಸ್ಥಾನದಲ್ಲಿದೆ. ಲಖನೌ ಸೂಪರ್ ಜೈಂಟ್ಸ್ 7ರಲ್ಲಿ 4 ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಗಜರಾತ್ ಟೈಟಾನ್ಸ್ 6 ಪಂದ್ಯದಲ್ಲಿ 4 ಗೆಲುವು ದಾಖಲಿಸಿ 4ನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ಪಂದ್ಯದಲ್ಲಿ 4 ರಲ್ಲಿ ಗೆಲುವು ದಾಖಲಿಸಿ 5ನೇ ಸ್ಥಾನದಲ್ಲಿದೆ.