IPL 2023 ಶುಭ್‌ಮನ್ ಗಿಲ್‌ 3ನೇ ಶತ​ಕದ ಅಬ್ಬ​ರ; ಹಲವು ದಾಖಲೆ ನುಚ್ಚುನೂರು..!

ಐಪಿಎಲ್‌ ಪ್ಲೇ ಆಫ್‌ನಲ್ಲಿ ಶತಕ ಸಿಡಿಸಿದ ಶುಭ್‌ಮನ್‌ ಗಿಲ್
ಗಿಲ್‌ ಒಂದು ಶತಕ, ಹಲವು ದಾಖಲೆಗಳು ನಿರ್ಮಾಣ
ಗಿಲ್ ಶತಕದ ನೆರವಿನಿಂದ ಫೈನಲ್‌ಗೆ ಲಗ್ಗೆಯಿಟ್ಟ ಗುಜರಾತ್ ಟೈಟಾನ್ಸ್

IPL 2023 Shubman Gill re writes record books with explosive Century against Mumbai Indians kvn

ಅಹ​ಮ​ದಾ​ಬಾ​ದ್‌(ಮೇ.27): ಇತ್ತೀ​ಚಿಗೆ ಶತ​ಕ​ಗಳ ಮೂಲ​ಕವೇ ಎಲ್ಲಾ ಮಾದರಿ ಕ್ರಿಕೆ​ಟ್‌​ನಲ್ಲೂ ಅಬ್ಬ​ರಿ​ಸು​ತ್ತಿ​ರುವ ಶುಭ್‌​ಮನ್‌ ಗಿಲ್‌ 16ನೇ ಆವೃತ್ತಿ ಐಪಿ​ಎ​ಲ್‌​ನಲ್ಲಿ 3ನೇ ಶತಕ ಸಿಡಿ​ಸಿ​ದ್ದು, ಹಲ​ವು ದಾಖ​ಲೆ​ಗ​ಳನ್ನು ಪುಡಿ​ಗುಟ್ಟಿದ್ದಾರೆ. ಶುಕ್ರ​ವಾರ ಮುಂಬೈ ವಿರು​ದ್ಧದ 2ನೇ ಕ್ವಾಲಿ​ಫೈ​ಯ​ರ್‌ನಲ್ಲಿ ಗಿಲ್‌ 60 ಎಸೆ​ತ​ಗ​ಳಲ್ಲಿ 7 ಬೌಂಡರಿ, 10 ಸಿಕ್ಸರ್‌ನೊಂದಿಗೆ 129 ರನ್‌ ಸಿಡಿ​ಸಿ​ದರು.

ಅವರ 3 ಶತಕಗಳು ಕೊನೆಯ 4 ಇನ್ನಿಂಗ್‌್ಸ​ಗ​ಳಲ್ಲಿ ಬಂದಿದೆ ಎಂಬುದು ಗಮ​ನಾರ್ಹ. ಹೈದ​ರಾ​ಬಾದ್‌ ವಿರುದ್ಧ 101, ಆರ್‌​ಸಿಬಿ ವಿರುದ್ಧ ಔಟಾ​ಗದೆ 104 ರನ್‌ ಗಳಿ​ಸಿ​ದ್ದರು. ಇದ​ರೊಂದಿಗೆ ಆವೃ​ತ್ತಿ​ಯೊಂದ​ರಲ್ಲಿ 3 ಅಥವಾ ಅದ​ಕ್ಕಿಂತ ಹೆಚ್ಚು ಶತಕ ಸಿಡಿ​ಸಿದ ಭಾರತದ ಎರಡನೇ ಹಾಗೂ ಒಟ್ಟಾರೆ 3ನೇ ಆಟ​ಗಾರ ಎಂಬ ಹೆಗ್ಗ​ಳಿ​ಕೆಗೆ ಪಾತ್ರ​ರಾ​ದರು. 

2016ರಲ್ಲಿ ವಿರಾಟ್‌ ಕೊಹ್ಲಿ, 2022ರಲ್ಲಿ ಜೋಸ್‌ ಬಟ್ಲರ್‌ ತಲಾ 4 ಶತಕ ಬಾರಿ​ಸಿ​ದ್ದರು. ಅಲ್ಲದೇ ಐಪಿ​ಎಲ್‌ ಪ್ಲೇ-ಆಫ್‌​ ಪಂದ್ಯ​ದಲ್ಲಿ ಶತಕ ಸಿಡಿ​ಸಿದ 7ನೇ ಹಾಗೂ 10+ ಸಿಕ್ಸರ್‌ ಸಿಡಿ​ಸಿ​ದ ಮೊದಲ ಬ್ಯಾಟರ್‌ ಎನಿ​ಸಿ​ಕೊಂಡರು. ಇನ್ನು ಗಿಲ್‌ ಸಿಡಿ​ಸಿದ 129 ರನ್‌ ಪ್ಲೇ-ಆಫ್‌​ನಲ್ಲಿ ಆಟ​ಗಾ​ರನ ಗರಿಷ್ಠ ವೈಯ​ಕ್ತಿಕ ಸ್ಕೋರ್‌. 2014ರಲ್ಲಿ ಚೆನ್ನೈ ವಿರುದ್ಧ ಪಂಜಾ​ಬ್‌ನ ಸೆಹ್ವಾಗ್‌ 122 ರನ್‌ ಸಿಡಿ​ಸಿ​ದ್ದ​ರು. 23 ವರ್ಷ 260 ದಿನದ ಶುಭ್‌ಮನ್ ಗಿಲ್‌, ಐಪಿಎಲ್ ಪ್ಲೇ ಆಫ್‌ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎನ್ನುವ ದಾಖಲೆಯನ್ನು ನಿರ್ಮಿಸಿದ್ದಾರೆ.

IPL 2023 'ವರ್ಣಿಸಲು ಪದಗಳು ಸಾಲದು': ಶುಭ್‌ಮನ್ ಗಿಲ್ ಆಟ ಕೊಂಡಾಡಿದ ಕೊಹ್ಲಿ, ಎಬಿಡಿ..!

ಐಪಿಎಲ್‌ ಪ್ಲೇ ಆಫ್‌ನಲ್ಲಿ ಅತಿವೇಗದ ಶತಕ: ಶುಭ್‌ಮನ್ ಗಿಲ್, ಕೇವಲ 49 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ, ಐಪಿಎಲ್‌ ಪ್ಲೇ ಆಫ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೊದಲು ವೃದ್ದಿಮಾನ್ ಸಾಹ ಹಾಗೂ ರಜತ್ ಪಾಟೀದಾರ್ ಕೂಡಾ ಐಪಿಎಲ್ ಪ್ಲೇ ಆಫ್‌ ಪಂದ್ಯದಲ್ಲಿ 49 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು.

ಐಪಿಎಲ್‌ನಲ್ಲಿ 3 ಶತಕ ಸಿಡಿಸಿದ ಅತಿಕಿರಿಯ ಕ್ರಿಕೆಟಿಗ: ಐಪಿಎಲ್ ಇತಿಹಾಸದಲ್ಲಿ, ಟೂರ್ನಿಯೊಂದರಲ್ಲಿ 3 ಶತಕ ಸಿಡಿಸಿದ 23 ವರ್ಷದೊಳಗೆ ಆಟಗಾರ ಎನ್ನುವ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ.

ಪ್ಲೇ ಆಫ್‌ ಪಂದ್ಯದಲ್ಲಿ ಗರಿಷ್ಠ ಸಿಕ್ಸರ್(10) ಸಿಡಿಸಿದ ದಾಖಲೆ ಕೂಡಾ ಇದೀಗ ಶುಭ್‌ಮನ್ ಗಿಲ್ ಪಾಲಾಗಿದೆ. ಈ ಮೊದಲು ವೃದ್ದಿಮಾನ್ ಸಾಹ, ಕೆಕೆಆರ್ ಎದುರು ಪ್ಲೇ ಆಫ್‌ ಪಂದ್ಯದಲ್ಲಿ 8 ಸಿಕ್ಸರ್ ಸಿಡಿಸಿದ್ದರು. ಇದೀಗ ಗಿಲ್ ಪ್ಲೇ ಆಫ್‌ನಲ್ಲಿ 10 ಸಿಕ್ಸರ್ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.

800+ ರನ್‌:

ಗಿಲ್‌ ಈ ಬಾರಿ 16 ಪಂದ್ಯ​ಗ​ಳಲ್ಲಿ 64.92ರ ಸರಾ​ಸ​ರಿ​ಯಲ್ಲಿ 844 ರನ್‌ ಕಲೆ​ಹಾ​ಕಿ​ದ್ದಾರೆ. ಈ ಮೂಲಕ ಐಪಿ​ಎ​ಲ್‌ ಆವೃ​ತ್ತಿ​ಯೊಂದ​ರಲ್ಲಿ 800ಕ್ಕೂ ಹೆಚ್ಚು ರನ್‌ ಸಿಡಿ​ಸಿದ ಭಾರತದ ಎರಡನೇ ಹಾಗೂ ಒಟ್ಟಾರೆ 4ನೇ ಬ್ಯಾಟರ್‌ ಎನಿ​ಸಿ​ಕೊಂಡ​ರು. ಈ ಮೊದಲು ಕೊಹ್ಲಿ 2016ರಲ್ಲಿ 973, ಬಟ್ಲರ್‌ 2022ರಲ್ಲಿ 863 ಹಾಗೂ ವಾರ್ನರ್‌ 2016ರಲ್ಲಿ 848 ರನ್‌ ಗಳಿ​ಸಿ​ದ್ದ​ರು. ಇನ್ನು ಶುಭ್‌ಮನ್ ಗಿಲ್ ಕೇವಲ 123 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಗರಿಷ್ಠ ರನ್(973) ದಾಖಲೆ ಅಳಿಸಿ ಹಾಕಲಿದ್ದಾರೆ.

Latest Videos
Follow Us:
Download App:
  • android
  • ios